ಪುಟ:ಮಿತ್ರ ದುಖಃ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೫ ---

ನನಗೆ ಆ ಸುಖವು ಲಭಿಸುವ ಯೋಗವೇ ಇಲ್ಲದಿದ್ದರೂ ನನ್ನ ಕುದುರೆಗಳಿಗಾದರೂ ಆ ಶೀತ ಜಲಸ್ವರ್ಶದ ಸುಖವು ಲಭಿಸ ಲೆಂದು ನನ್ನ ರಥವನ್ನು ಮೇಘಗಳು ತಡೆಹಾಯುವ ಆ ಪ್ರಸಂ ಗಳಲ್ಲಿ ನಾನು ಬೇಕಂತಲೇ ಲಕ್ಷವಿಲ್ಲದವನಂತೆ ನಟಿಸುತ್ತಿರು ತೇನೆ.”

"ಆದರೆ ಚಂದ್ರಾ, ಇದುಂದ ನನ್ನ ಸಂತಾಪವು ಕಡಿಮೆ

ಯಾಗುತ್ತದೆಂದು ಮಾತ್ರ ತಿಳಿಯುವ ಹಾಗಿಲ್ಲ! ನನಗೆ' ಶೀತ ಜಲಸ್ಪರ್ಶದ ಸುಖದ ಅನುಭವವು ಇಲ್ಲವೆಂಬದಿಷ್ಟೇ ಅಲ್ಲ, ಸಂತಾಪ ಪರಿಹಾರಕ ಬೇರೆ ಯಾವ ಸಾಧನವೂ ನನಗೆ ಈ ವರೆಗೆ ಉಪಲಬ್ದವಾಗಿರುವದಿಲ್ಲ. ಭೂಮಂಡಲದ ಜನರಿಗೆ ಮಧ್ಯಾಹ್ನ ಹೊತ್ತಿನಲ್ಲಿ ಬಹಳ ಸೆಕೆಯೆನಿಸಿದರೆ, ಅವರು ಯಾವ ದೊಂದು ಕತ್ತಲೆ ಕೋಣೆಯಲ್ಲಿ ಹೋಗಿ ಕುಳಿತು ಆ ಸೆಕೆಯ ತಾಪವು ತಮಗಾಗದಂತೆ ಮಾಡಿಕೊಳ್ಳುತ್ತಾರೆ; ಮತ್ತು ಆ ಸ್ಥಲಾಂತರದ ತೀರ ಸುಲಭ ಉಪಾಯದಿಂದಲೇ ಅವರಿಗೆ ಎಷ್ಟೊ ಆರಾಮವೆನಿಸುತ್ತದೆ. ಆದರೆ ಮಿತ್ರಾ, ಹಿರಣ್ಯ ಗರ್ಭನೆಂಬ ಹೆಸರಿನಿಂದ ಪ್ರಖ್ಯಾತನಾಗಿರುವ ಈ ನಿನ್ನ ಪ್ರಿಯ ದೀನ ಮಿತ್ರನಿಗೆ ಈ ಜಗತ್ತಿನಲ್ಲಿ ಯಾವದೊಂದು ಕತ್ತಲೆಕೋ ಣೆಯು ಸಹ ಸಿಗುವದು ಶಕ್ಯವಿಲ್ಲ. ನನ್ನ ಮೈಯಲ್ಲಿ ಉರಿ ಉರಿಯಾಗಹತ್ತಿದಾಗ ನಾನು---- "ಎಲ್ಲಿಯಾದರೊಂದು ಕತ್ತಲೆ ಕೋಣೆಯಿದ್ದರೆ, ಯಾರಾದರೂ ತೋರಿಸುವಿರಾ ಎಂದು ವಿಹ್ನ ಲನಾಗಿ ಒದು ಕೇಳಿಕೊಂಡಾಗ ಯಾವನೊಬ್ಬ ಹುಂಬನು----

“ಅಕೋ, ಅಲ್ಲಿ ಆ ಪರ್ವತಗಳ ದರಿಗಳಲ್ಲಿ ಹಾಗು ಆ ವಿಶಾ ಲವಾದ ವೃಕ್ಷಗಳ ಹೊದರುಗಳಲ್ಲಿ ಬೇಕಾದಷ್ಟು ಕತ್ತಲು ಗವಿದದೆ ಎಂದು ಹೇಳುತ್ತಾನೆ! ಆದರೆ ಅವನು ತೋರಿ ಸಿದ ಆ ಪ್ರದೇಶಗಳ ಹತ್ತಿರ ಹೋಗಿ ನೋಡಲು, ನನಗೆ ಎಲ್ಲಿ