ಪುಟ:ಮಿತ್ರ ದುಖಃ.djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

--- ೩೫ ---

ಳು ಟಪಟಪನೆ ಉದುರಹತ್ತಿದವೆಂದರೆ, ಆ ನಿನ್ನ ದ್ರವರೂಪವಾ ದ ಅಮೃತದ ಒಂದಾನೊಂದು ಹನಿಯು ಆಕಸ್ಮಿಕವಾಗಿನನ್ನ ಮೈಮೇಲೆ ಬೀಳಬಹುದು.ಹಾಗು ಅದರಿಂದ ನಾನುಹೆಚ್ಚಾ ಗಿಯೇ ಅಮರನಾಗಲು, ನನ್ನ ಈ ದುಃಖಗಳೂ ನನ್ನೊಡನೆ ಅಮರವಾದರೆ ಅವುನಾಶವಾಗಲಿಕ್ಕೆ ಮಾರ್ಗವೇ ಉಳಿಯಲಿ ಕೈಲ್ಲೆಂದು ನಾನು ಯಾವಾಗಲೂ ಅಂಟಿದೂರಿರುತ್ತೇನೆ. ಆ ಷ್ಟೇ ಅಲ್ಲ, ನೀನೀಗ ನನ್ನೊಡನೆ ಮಾತಾಡುತ್ತಿರುವಾಗ ಇಲ್ಲವೆ ನನ್ನ ಕಡೆಗೆ ನೋಡುತ್ತಿರುವಾಗ ನಿನ್ನ ಪರಿಚಾರಕನಾದ ಆ ವಸಂತನಲಹರಿಯಮಲಕ ಎಲ್ಲಿಯಾದರೂ ನಿನ್ನ ಬಾಯೊಳಗಿನ ಅಮೃತದ-ಉಗುಳಿನ ಒಡಕು-ಗಿಡಕು ನನ್ನ ಮೇಲೆ ಹಾರಿ ಬಿದ್ದಿತೋ,ಹೇಗೋ...ಎಂಬಬಗ್ಗೆ ನನ್ನ ಎದೆಯ ಕ್ಷಣಕ್ಷಣಕ್ಕೆ ಧಸ್ಸನ್ನುತ್ತದೆ.

V

ಮಿತ್ರನ ಈ ಭಾಷಣದಿಂದ ಚಂದ್ರನಿಗೆ ಬಹಳ ಕೆಡಕೆನಿ ಸಿತು, ಅಮೃತದಲ್ಲಿ ಕೂಡ ಏನಾದರೂ ದೋಷವಿದ್ದೀತೆಂಬ ದರ ಕಲ್ಪನೆಯು ಕೂಡ ಚಂದ್ರನಿಗಿಲ್ಲ! ತನ್ನ ಅಗ್ರಜನ ದುಃಖ ಪರಿಷ್ಟುತವಾದ ಚರಿತ್ರವನ್ನು ಕೇಳಿ, ಅಂತರಂಗ ದಲ್ಲಿ ಕಳವಳಗೊಂಡ ಚಂದ್ರನ ಮನಸ್ಸಿನಲ್ಲಿ ಅಣ್ಣನ ಬೆನ್ನ ಮೇಲೆ ಮಮತೆಯಿಂದ ಕೈಯಾಡಿ ಅವನನ್ನು ಸಂತೈಸಬೇ ಕೆಂಬ ವಿಚಾರವುಂಟಾಯಿತು. ಆದರೆ ಯಾವನು ಅಮೃತದ ಒಂದು ಯಃಕಶ್ಚಿತ್ ಕಣಕ್ಕೆ ಸಹ ಹೆದರುತ್ತಿರುವನೋ ಅಂಥ ವನು ಪ್ರತ್ಯಕ್ಷ ಸುಧಾಕರನಾದ ನನ್ನನ್ನು ತನ್ನ ಮೈಗೆ ನಿಶ್ಚಯವಾಗಿ ಮುಟ್ಟಿಗೊಡಲಿಕ್ಕಿಲ್ಲೆಂಬದು ಪ್ರತಿ ಕ್ಷಣದಲ್ಲಿ ಚಂದ್ರನಿಗೆ ಹೊಳೆಯಲು ಅವನು ಸುಮ್ಮನಾಗಿಬಿಟ್ಟನು.