ಪುಟ:ಮಿತ್ರ ದುಖಃ.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

--- ೪೨ ---

ವನ್ನು ನಾನು ನೋಡಲಾರೆನು.-ಚಂದ್ರಾ, ನಿನ್ನ ರಥವು ಮುಂದೆ ಹೊರಟು ಹೋಗಿದ್ದರೂ ನೀನು ನಿನ್ನ ದೃಷ್ಟಿಯನ್ನು ಹಿಂದುರಿಗಿಸಿ ನೋಡುತ್ತಿರುವೆಯಲ್ಲ? ನೀನು ಹೀಗೆ ಎಷ್ಟೋ ತಿನ ವರೆಗೆ ನೋಡುವೆ?_ಅರುಣಾ, ನವ, ಕುದುರೆಗಳ ಕಡಿವಾಣಗಳನ್ನು ತೀರ ಸಡಿಲಾಗಿ ಬಿಡು, ಮತ್ತು ಅದಕ್ಕೆ ಮನೋವೇಗದಿಂದ ಓಡಗೊಡು.ಚಂದ್ರಾ, ನೀನು ಕಂಬನಿ ಗಳನ್ನು ಒರಿಸಿಕೊಂಡು ಒಂದುರಿಗಿ ನೋಡುವದನ್ನು ಬಿಟ್ಟು ಕೊಟ್ಟು ನಿನ್ನ ರಥದ ಗತಿಯ ಕಡೆಗೆ ಲಕ್ಷಗೊಡು. ಅಂದರೆ, ಅದು ಅಸ್ಥಲಿತವಾದೀತು.

ತನ್ನ ಕಣ್ಣುಗಳನ್ನು ಒರಿಸುತ್ತೊರಿಸುತ್ತ ಚಂದ್ರನು----

“ಎಲೈ ಅಣ್ಣನೇ, ನಾನು ನಿನ್ನೆಡೆಗೆ ತಿರುಗಿ ನೋಡದಿರುವದು ಶಕ್ಯವೇ ಇಲ್ಲ. ನೀನು ಎಲ್ಲಿಂದ ಎಷ್ಟು ಕಾಣುವೆಯೋ, ಅಲ್ಲಿಂದಅಷ್ಟೇ ನಾನು ನಿನ್ನ ಕಡೆಗೆ ನೋಡದೆ ಇರಲಿಕ್ಕಿಲ್ಲ. ನನ್ನ ಜೀವಿತವೆಲ್ಲ ನಿನ್ನನ್ನವಲಂಬಿಸಿರುತ್ತದೆ. ನಿನ್ನನ್ನು ಬಿಟ್ಟರೆ, ನನ್ನ ಹೃದಯವೆಲ್ಲ ಕತ್ತಲು ಗವಿಯಬಹುದು. ನಿನ್ನ ವಿಯೋಗ ದುಃಖವು ನನ್ನಿಂದ ಸಹಿಸಲಶಕ್ಕವು. ಆದ್ದರಿಂದ ನಾನು ಈಗ ಹೋಗುತ್ತಿದ್ದರೂ, ಇನ್ನೊಂದು ತಿಂಗಳಿಗೆ ನಿನ್ನ ಭೆಟ್ಟಿಗಾಗಿ ನಿನ್ನೆಡೆಗೆ ನಿಶ್ಚಯವಾಗಿ ಬರದಿರಲಾರೆನು!

ಹೀಗೆ ಚಂದ್ರನು ಮಾತಾಡುತ್ತಿರಲಿಕ್ಕೆ ಸೂರ್ಯ-ಚಂ

ದ್ರರ ರಥಗಳ ನಡುವಿನ ಅಂತರವು ಬೆಳೆಯಿತು. ಹಾಗೂ ಪರ ಸ್ಪರರು ಮಾತಾಡುವ ಮಾತುಗಳು ಪರಸ್ಪರರಿಗೆ ಸ್ಪಷ್ಟವಾಗಿ ಕೇಳದಾದವು. ಆಗ ಸೂರ್ಯನು ತನ್ನ ಮೊರೆಯನ್ನು ಹಿಂದಿ ರುಗಿಸಿ ಚಂದ್ರನಿಗೆ ಕೈಸನ್ನೆ ಮಾಡುತ್ತ ಗಟ್ಟಿಯಾಗಿ “ಬೇಡ, ಬೇಡ, ಚಂದ್ರಾ, ನೀನಿನ್ನು ನನ್ನ ಬಳಿಗೆ ಬರ ಬೇಡ, ನಾನು ಇನ್ನು ಮುಂದೆ ನಿನಗೆ ಭೆಟ್ಟಿಯಾಗಲಿಕ್ಕಿಲ್ಲ. ಇಂದಿನ ಈ ಭೆಟ್ಟಿಯೇ ನನ್ನ ನಿನ್ನ ಕಡೆಯ ಭೆಟ್ಟಿಯೆಂದು ತಿಳಿದುಕೊ, ಎಂದು ನುಡಿದನು.