ಪುಟ:ಮಿತ್ರ ದುಖಃ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

---೪---

ಮ್ಯವಿತ್ತು. ಒಬ್ಬನ ಸ್ವಭಾವವು ಬಹಳ ಉಗ್ರವಾದರೆ, ಇನ್ನೂ ಬೃನ ಪ್ರಕೃತಿ ಗುಣವು ತೀರ ಶಾಂತವು. ಹೀಗೆ ಇವರ ಸ್ಥಿತಿ ಯಾಗಿತ್ತು; ಮತ್ತು ಕಾಲಮಾನದಿಂದ ಅದರಲ್ಲಿ ಈ ವರೆಗೆ ಏನೂ ಸ್ಥಿತ್ಯಂತರವಾಗಿರುವದಿಲ್ಲ. ದಾಯಾದಿಗಳಾದ ಇಬ್ಬರು ಅಣ್ಣ ತಮ್ಮಂದಿರಂತೆ ಇವರೀರ್ವರ ಅವಸ್ಥೆಯಿತ್ತು. ಇವರು ಪರಸ್ಪರರಿಂದ ಶಕ್ಯವಿದ್ದಷ್ಟು ದೂರವಿದ್ದು, ತಮ್ಮಷ್ಟಕ್ಕೆ ತಾವಿ ರುತ್ತಿದ್ದರು. ಆದರೂ ಇವರು ಪರಸ್ಪರರನ್ನು ದ್ವೇಷಿಸುತ್ತಿದ್ದ ರೆನ್ನುವ ಹಾಗಿದ್ದಿಲ್ಲ. ಹೆಚ್ಚಾಗಿ ಪ್ರೇಮವೂ ಇಲ್ಲ- ದ್ವೇಷವು ಇಲ್ಲ. ಈ ಪ್ರಕಾರದ ಸವಿನುಡಿಯ ಮಧ್ಯಮ ತರದ ಆಚರಣೆ ಯು ಇವರಲ್ಲಿತ್ತು. ಆದರೆ ಅಲ್ಪ ಪ್ರಮಾಣದ ಭಾಗಾದಿತನ ದಹಗೆತನದ ಅಂತಃಕರಣದಿಂದ ಇವರು ಪರಸ್ಪರರನ್ನು ನೋಡು ತಿದ್ದರು.
ಈ ಸ್ಥಿತಿಯಲ್ಲಿ ಒಂದು ದಿನ ಮೇಲೆ ಹೇಳಿದಂತೆ ಇವ
ರೀರ್ವರ ಭೆಟ್ಟಿಯಾಯಿತು. ತನ್ನ ಸುಖದುಃಖಗಳನ್ನು ಚ೦ ದ್ರನಿಗೆ ತಿಳಿಸಬೇಕೆಂದು ಸೂರ್ಯನು ಎಷ್ಟೋ ಪಕ್ಷ-ಮಾಸಗ ಳಿಂದ ಅವನ ಭೆಟ್ಟಿಯ ನಿರೀಕ್ಷಣೆಯಲ್ಲಿದ್ದನು. ಕಡೆಗೆ ಅದು ಒಂದು ಅಮಾವಾಸ್ಯೆಯ ದಿವಸ ಬೆಳಗಿನ ಜಾವಿನಲ್ಲಿ ಆ ಸುಸಂ ಧಿಯು ಪ್ರಾಪ್ತವಾಯಿತು.
ಆ ಕಾಲದಲ್ಲಿ ಆಕಾಶದಲ್ಲಿ ಇವರಿಬ್ಬರ ಹೊರತು ಮ
ರನೆಯವರು ಯಾರೂ ಇದ್ದಿಲ್ಲ. ಎಲ್ಲ ಕಡೆಗೂ ನಿಶ್ಯಬ್ದವೆ. ಗಿದ್ದು, ಪ್ರಾತಃಕಾಲದ ಶಾಂತತೆಯು ನಾಲ್ಕೂ ದಿಕ್ಕುಗಳಲ್ಲಿ ಸಂಪೂರ್ಣವಾಗಿ ಪ್ರಸ್ಥಾಪಿತವಾಗಿತ್ತು. ರಾತ್ರಿಯು ಈ ಮೊದಲೇ ಕಳೆದು ಹೋಗಿತ್ತು; ಹಾಗು ನಿಶೆಯ ಪ್ರಿಯಕರ ನಾದ ತಮೋರಾಜನಾದರೂ ಆಕೆಯ ಹಿಂದಿನಿಂದ ಎಲ್ಲಿಯೊ ಹೋಗಿಬಿಟ್ಟಿದ್ದನು. ಚಂದ್ರ-ಸೂರ್ಯರ ಭೆಟ್ಟಿಯ ಆದಿವಸವ