ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬] ೨೦೫. ಮೋಹನತರಂಗಿಣಿ ಮೂವತ್ತಾನೆಯ ಸಂಧಿ - - - ಗರುಡನ ಸಂಧಿ'- ಪಾಕಶಾಸನ ಮತಿಗಣತಿಯಲು ಗಿರಿಯೆತ್ತಿ ಗೋಕುಲವನು ನೆರೆ ಕಾದ|| ಕೋಕನದಾಕ್ಷನ ಬಲಗೊಂಡು ಕೃತಿನೇಟು | ಸಾಕೆನಿಸದು ಯೆನ್ನ ಕಿವಿಗೆ || ಏಜಾಣೆವೆಣ್ಣುಗಳರಸಿ ನೀ ಕೇಳು ಸ | ರೋಜಾಂಬಕನ ಸಮ್ಮತಿಯ || ರಾಜಾಮೃತವೆನೆ ರುಚಿಮಾಡಿ ತವಕರ್ಣ | ಭಾಜನ'ದೊಳಗೆ ತುಂಬಿಸುವೆ || ಅಂತರಿಕ್ಷದಲಿ ನಾರದಮುನಿವರ ನಿ ಶಿಂತ ಹಂಸಾರೂಢನಾಗಿ || ಸಂತೋಷದೆ ಬಂದು ದ್ವಾರಕಾಪುರದೆ ಶಿ) | ಕಾಂತನ ಕಂಡ ಕೇಳ್ ಕೆಳದಿ ವರರತ್ನ ಮಂಟಪಮಧ್ಯದ ಸಿಂಹವಿ | ಸ್ವರದಲ್ಲಿ ಶ್ರೀಕೃಷ್ಣರಾಯ | ಪರಮೈ ಶ್ಚರ್ಯದಿಂದೊಪ್ಪಿದ ಸೋಳ ಸಾ | ಸಿರವೆಂಗಳೊಡೋಲಗದೆ | ಪಟ್ಟದ ರಾಣಿ ರುಕ್ಷ್ಮಿಣಿದೇವಿ ಬಲದಲ್ಲಿ ಕಟ್ಟಾಯವೆದ್ದು ನಿಂದಿರಲು || ಉಟ್ಟಾಡಿಸಿ ಸತಾಂಜಿತುಕನ್ಯ ಸೊಬಗಳ ವಟ್ಟಿರ್ದಳೆಡದ ಭಾಗದಲಿ |೫|| ಯಾದವಕುಲಶಿರೋಮಣಿ ಹೆಂಗಳೊಡನೆ ವಿ | ನೋದದಿ ಕುಳಿತಿರೆ [ಕಂಡು | ಬೋಧಾರುಹ' ನಾರದ ದೇವರಾಯನ | ಪಾದಪಂಕಜಕೆಳಗಿದನು ||೬|| ಮಣಿಭೂಷಣಹಸ್ತದಿಂದೆ ವೈಷ್ಣವ ಶಿರೋ | ಮಣಿ ನಾರದನನೆತ್ತಿದನು| ಮಣಿಪಾತ್ರೆಯೊಳರ್ಥ್ಯಪಾದ್ಯವನಿತ್ತು ಸ | ನ್ಮಣಿಪೀಠವನೇಜಿಸಿದ ||೭|| ಕ ಪ.ಅ-1, ಕಿವಿಯಂಒ ಪಾತ್ರದೊಳಗೆ 2 ಹೆಚ್ಚಾದ ರೀವಿಯಲ್ಲಿ. 3. ಕೃಷ್ಣನಿಗೆ ಊಟಪಾಟಗಳಲ್ಲಿ ಯಾವಾಗಲೂ ಜತೆಯಲ್ಲಿರುವಳು. 4. ಜ್ಞಾನದಲ್ಲಿ ಪೂಜ್ಯನು. 5. ಇಲ್ಲಿ ಕೃಷ್ಣ.