ಪುಟ:ಯಶೋಧರ ಚರಿತೆ.pdf/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಯಶೋಧರ ಚರಿತೆ
೧೦೯
 


ಕೋಯ ಕೂಗೆತ್ತಲ್ ನೀನ್
ಸೂಟೆದವನೆಸೆವುದೆತ್ತಲಾ ಖಗಯುಗಳಂ
ಬೀಳ್ಕೊಡನಾದ ಮಾನಸ
ವಾಖೆತ್ತಲ್ ನೋಡ ಧರ್ಮಮೋದವಿದ ಪದನಂ೬೧


ಎನೆ ಮುನಿವಚನದೊಳಂ ನಂ-
ದನರೂಳಮಾಗಳೆ ಯಶೋಮತಿಕ್ಷಿತಿಪಂ ತೆ
ಆನೆ ತಿಳಿದು ಛಾಪು ಸಂಕ-
ಲನ ವಧೆಗಿನಿತಾಯ್ತು ದಿಟದಿನೇನೇನಾಗರ್‌೬೨


ಎನಿತೊಳವು ಜೀವರಾಶಿಗ-
ಇನಿತುಮನೋರಂತೆ ಕೊಂದು ತಿಂದುಂ ತಣಿವಿ-
ಲ್ಲೆನೆ ಬರ್ದೆನಿಂದುವರಮಿ-
ನೈನಗಿನ್ನೆಂತಪ್ಪ ನರಕಮಿದಿರ್ವಂದಪದೋ೬೩

_____________

೬೧. ಕೋಳಿಗಳ ಕೂಗೆಲ್ಲಿ? ಆ ಸ್ವರವನ್ನಾಲಿಸಿ ಮಾಡಿದ ಬಾಣ ಪ್ರಯೋಗವೆಲ್ಲಿ?
ಆ ಕೋಳಿಗಳು ಸತ್ತಮೇಲೆ ಅವುಗಳಿಗೆ ದೊರೆತುದು ಮಾನವಜನ್ಯ. ಇದರಿಂದ
ಧರ್ಮವು ಎಂತಹ ಸ್ಥಿತಿಯನ್ನೊದಗಿಸುವುದೆಂಬುದು ಪ್ರತ್ಯಕ್ಷವಾಗುವುದಿಲ್ಲವೆ?”
೬೨. ಮುನಿಗಳ ಈ ಮಾತನ್ನು ಕೇಳಿ, ಮಕ್ಕಳಿಂದಲೂ ಈ ವಿಷಯವನ್ನು
ವಿಚಾರಿಸಿ ಸರಿಯಾಗಿ ತಿಳಿದುಕೊಂಡ ಯಶೋಮತಿ, “ಸಂಕಲ್ಪ ವಧೆಯಿಂದಲೇ
ಇಷ್ಟು ಕಷ್ಟಗಳನ್ನು ಅನುಭವಿಸುವಂತಾಯಿತು. ಇನ್ನು ಕೈಯಾರೆ ಕೊಲೆ ಮಾಡಿದರೆ
ಇನ್ನೇನಾಗಲಿಕ್ಕಿಲ್ಲ?” ಎಂದುಕೊಂಡನು. ೬೩. ನಾನು ಇದುವರೆಗೆ ಎಷ್ಟೆಷ್ಟು
ಪ್ರಾಣಿಗಳಿವೆಯೋ ಅಷ್ಟಷ್ಟನ್ನು ಒಂದೇ ಸಮನೆ ಕೊಲ್ಲುತ್ತಾ ಬಂದು ಅವುಗಳನ್ನು
ತಿಂದಿದ್ದೇನೆ. ಆದರೂ ತೃಪ್ತಿಯುಂಟಾಗದೆ ಇದುವರೆಗೂ ಬಾಳಿದೆ. ನನಗೆ ಇನ್ನೆಂತಹ