ಪುಟ:ಯಶೋಧರ ಚರಿತೆ.pdf/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೧೧೧
 

ತಮದಿಂದಂ ಪೋರಮಟ್ಟು-
ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ-
ಯಮದೆ ಸುದತ್ತಾಚಾರ್ಯರ
ಸಮುದಾಯದೊಳಿರ್ದು ತತ್ವಪರಿಣತನಾದಂ೬೭

ಆನಭಯರುಚಿಕುಮಾರನೆ
ಈ ನೆಗಳ್ದುರ್ದಭಯಯತಿಯುವೀ ಅಕ್ಕನೆ ದಲ್
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ವೆ ಮಾರಿದತ್ತನೃಪೇಂದ್ರಾ೬೮

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ
ಪುರುಳಿಲ್ಲ ನಿನ್ನಕೇಡಂ
ಪರಿವೀಕ್ಷಿಸಿ ಕರುಣದಿಂದ ತಲ್ಲಣಿಸಿದಪೆಂ೬೯ತಪಸ್ಸಿಗೆ ಹೊರಟನು. ೬೭. ಅಜ್ಞಾನಾಂಧಕಾರದಿಂದ ಹೊರಬಂದು ಉತ್ತಮ
ಚಾರಿತ್ರದಲ್ಲಿ ಸೇರಿಕೊಂಡು ಸಂಯಮವಶನಾಗಿ ಸುದತ್ತಾಚಾರ್ಯರ ಶಿಷ್ಯವೃಂದದಲ್ಲಿ
ಸೇರಿದನು ; ತತ್ವದಲ್ಲಿ ಪರಿಣತಿಯನ್ನು ಪಡೆದನು. ೬೮. ಆ ಅಭಯರುಚಿ
ಕುಮಾರನೇ ನಾನು; ಹೆಸರುಗೊಂಡ ಅಭಯಮತಿಯೇ ಈಕೆ. ನಾನಾ ವಿಧ
ಕರ್ಮಗಳಿಂದ ನಾವು ಹೀಗಾಗಿದ್ದೇವೆ. ಮಾರಿದತ್ತ ನಿನಗಿನ್ನು ಏನು ಕೇಳಲಿಕ್ಕಿದೆ?
೬೯. ಇಂದು ಗುರುಗಳ ಅಪ್ಪಣೆಯಂತೆ ಭಿಕ್ಷೆಗೆ ಬರುತ್ತಾ ಇದ್ದೆವು. ಆಗ ನಮ್ಮನ್ನು
ಹಿಡಿದು ತಂದಿದ್ದಾರೆ. ಇದಕ್ಕಾಗಿ ಹೆದರುವುದರಲ್ಲಿ ಅರ್ಥವಿಲ್ಲ. ಆದರೆ ನಿನ್ನ
ಕೇಡನ್ನು ಎಣಿಸಿಕೊಳ್ಳುವಾಗ ನಿನ್ನ ವಿಷಯದಲ್ಲಿ ಕರುಣೆಯುಂಟಾಗುತ್ತದೆ ;
ಭಯವೂ ಹುಟ್ಟುತ್ತದೆ.