ಪುಟ:ಯಶೋಧರ ಚರಿತೆ.pdf/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಯಶೋಧರ ಚರಿತೆ ಮತ್ತಂ ಧರ್ಮವಿಹಾರ ನಿಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳು ಸುದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ ೭೯ ಜೀವದಯೆ ಎಂಬುದಮ್ಮಯ | ಮಾವನ ಹೆಸರಿರ್ದ ನಾಡೂಳಿರದಾತಂಗಂ ದೇವಗತಿಯಾಯ್ತು ಸೋದರರ್ಗಾ ವೈಭವವಾಯ್ತು ಧರ್ಮದಿಂದಾಗದುದೇಂ ೮೦ ಎಂದು ಮನಸಂದು ಜಿನಮತ ನಂದನದೊಳ್ ದಾನಲತೆ ದಯಾರಸದೆ ಜಗಂ ಪಂದನೆ ಪರ್ವಿ ಪೊಸಜಸದಿಂದಂ ಮರಲ್ಲಿರೆ ಯಶೋಧರಂ ಬೆಳೆಯಸಿದಂ ೮೧ ೭೯. ಮತ್ತೊಮ್ಮೆ ಸುದತ್ತಾಚಾರ್ಯರು ಧರ್ಮವಿಹಾರಕ್ಕಾಗಿ ಅಲ್ಲಿಗೆ ಬಂದಿದ್ದರು. ಆಗ ಯಶೋಧರನು ತಮ್ಮವರಿಗೊದಗಿದ ಉತ್ತಮ ಗತಿಯನ್ನು ಕೇಳಿ ತಿಳಿದನು; ಗುರುಗಳ ಪಾದಕಮಲವನ್ನು ಪೂಜಿಸಿದನು. ೮೦. “ನಮ್ಮ ಮಾವನಿದ್ದ ಊರಿನಲ್ಲಿ ಜೀವದಯೆ ಎಂಬುದರ ಹೆಸರೇ ಇರಲಿಲ್ಲ. ಅಂಥವರಿಗೂ ದೇವಗತಿಯಾಯಿತು. ನನ್ನ ಅಣ ಅಕ್ಕಂದಿರಿಗೂ ಅಂತಹ ವೆಭವವು ಸಂಭವಿಸಿತು ಎಂದಮೇಲೆ ಧರ್ಮದಿಂದ ಆಗದುದೇನಿದ?” ಎಂದು ಎಣಿಸಿ ಧರ್ಮಕ್ಕೆ ಮನಸೋಪಿಸಿದನು. ೮೧. ಜಿನಮತ ನಂದನದಲ್ಲಿ ಅವನು ದಾನಲತೆಯನ್ನು ಬೆಳೆಯಿಸಿ ಅದಕ್ಕೆ ದಯಾರಸವನ್ನೆರೆದು ಅದನ್ನು ಜಗತ್ತಿನ ಚಪ್ಪರದಲ್ಲಿ ಹಬ್ಬಿಸಿದನು.”೯. ಅದರಲ್ಲಿ ಹೊಸಕೀರ್ತಿ ಹೂವಾಗಿ ಅರಳಿತು.