ಪುಟ:ಯಶೋಧರ ಚರಿತೆ.pdf/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೨೮ ಯಶೋಧರ ಚರಿತೆ ೪೮, ಅಮಂಗಲ ವಿನಾಶ ಎಂಬುದಕ್ಕೆ ಅಮಂಗಲದ ಪರಿಹಾರವೆಂಬ ಒಂದು ಅರ್ಥವಾದರೆ ಅಮಂಗಲದಿಂದ ಬಂದೊದಗುವ ವಿನಾಶ ಎಂಬುದು ಇನ್ನೊಂದು ಅರ್ಥ. ಯಶೋಧರನಿಗೆ ಈ ಎರಡನೆಯ ಅರ್ಥವಾಯಿತು. - ೪೯. ಆಸ್ತವ ಎಂದರೆ ಶುಭಾಶುಭ ಕರ್ಮಗಳ ಆಗಮನ ಎಂಬರ್ಥವಾಗಬಹುದು. ೫೧. ಕಾಡಿನ ಜಿಂಕೆಗೆ ಬಲೆಬೀಸಿ ಬಾಣವನ್ನು ಬಿಟ್ಟು ಅದನ್ನು ಕೆಡಹಾಕುವಂತಾಯಿತೆಂದು ಇಲ್ಲಿ ಹೇಳಲಾಗಿದೆ. ಪಾಪಿಗಳ ವಂಚನೆಯೇ ಕಣ್ಣು ಕಾಣದ ಕಾಡು; ಆತ್ಮವೇ ಸಾಧುವಾದ ಜಿಂಕೆ. ಯಶೋಧರನ ಆತ್ಮ ತಾಯಿಯ ಮಾತಿನ ಬಲೆಗೆ ಬೀಳಬೇಕಾಯಿತು. ಅವನು ಕೈಗೊಂಡ ಹಿಂಸೆ ರ್ಭಾಣವಾಯಿತು ಎಂದು ರೂಪಿಸಲಾಗಿದೆ. ೫೨. ಜೀವಶ್ರಾದ್ಧವೆಂದರೆ ಜೀವಂತವಾದ ಪ್ರಾಣಿಯನ್ನೇ ಅಡುಗೆ ಮಾಡಿ ಅದನ್ನು ಬಡಿಸಿ ಶ್ರಾದ್ಧ ಮಾಡುವುದು ಎಂಬರ್ಥವಿರಬಹುದು. ಇದೇ ಪ್ರಕರಣದಲ್ಲಿ ಮೂಲದಲ್ಲಿ 'ಉಟೆದ ಕಡೆ ಜೀವಮೇಯುತ್ತೀಚೆಯುತ್ತಿದೆ' ಎಂದಿರುವುದಕ್ಕೆ 'ಯಶೋಧರನ ಜೀವವು ಬೇರೊಂದು ಕಡೆ ಏರುತ್ತಾ ಇಳಿಯುತ್ತಾ ಇರಲು...' ಎಂದು ಅರ್ಥ ಹೇಳುತ್ತಾರೆ. ಆದರೆ ಯಶೋಧರನ ಜೀವವೇ ಇಲ್ಲಿ ಮಾನಿನ ರೂಪದಲ್ಲಿ ಒದ್ದಾಡುವುದರಿಂದ ಹಾಗೆ ಹೇಳುವುದು ಉಚಿತವೆನಿಸದೆಂದು ತೋರುತ್ತದೆ. - ೫೩. ಕಷ್ಟಗಳಿಗೆ ಕೋಡು ಮೂಡುವುದೆಂದರೆ ಕಷ್ಟಗಳು ಬೆಳೆದು ದೊಡ್ಡಗಾಗುವುದು ಎಂದರ್ಥ. - ೫೪. ನೀರು ಕುಡಿಯಲು ಬಂದುದು 'ಜಾಯಿಲಮರಸನ ಪಸಾಯಿತಂ' ಎಂದು ಮೂಲದಲ್ಲಿದೆ. ಇದಕ್ಕೆ ರಾಜನ ಜಾತ್ಯತ್ವವು ನೀರು ಕುಡಿಯಲು ಬಂದುದು ಎಂದ ಅರ್ಥ ಹೇಳುತ್ತಾರೆ. ಆದರೆ ಜಾಯಿಲ ಎಂಬುದಕ್ಕೆ ಜಾತ್ಯತ್ವ ಎಂಬರ್ಥವಿರುವುದೆ? ಮುಂದೆ 'ಅಶ್ವಮಹಿಷನ್ಯಾಯಂ ನಿಲೆ' ಎಂಬ ಮಾತು ಬರುತ್ತದೆ. ಇದಕ್ಕೆ “ಕುದುರೆಗೂ ಕೋಣಕ್ಕೂ ಹುಟ್ಟುಹಗೆ ಎಂಬ ನ್ಯಾಯವುಳಿಯುವಂತೆ' ಎಂದು ಅರ್ಥ ಹೇಳಬೇಕಾಗಿದೆ. ಇಲ್ಲಿ ಒಂದು ಪ್ರಾಣಿ ಕೋಣವೇ ಆದುದರಿಂದ ಇನ್ನೊಂದು ಅಶ್ವವೇ ಆಗಿರಬೇಕೆಂಬ ಅನುಮಾನದಿಂದ ಹಾಗೆ ಅರ್ಥಮಾಡಿದುದಿರಬಹುದು. ಆದರೆ ಯಶೋಮತಿ ಬೇಟೆಗಾಗಿ ಐನೂರು ನಾಯಿಗಳನ್ನು ಸಾಕಿಟ್ಟುಕೊಂಡಿದ್ದನೆಂದು ಮುಂದೆ ಬರುವುದರಿಂದ ಇಲ್ಲಿ ಅರಸನ