ಪುಟ:ಯಶೋಧರ ಚರಿತೆ.pdf/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


<
 ಒಂದನೆಯ ಅವತಾರ

ಕಂ|| ಪುರುದೇವಾದಿಗಳೊಲಿಸಿದ
ಪರಮಶ್ರೀವಧುವನೊಲಿಸಿಯುಂ ಪರವನಿತಾ
ನಿರಪೇಕ್ಷಕನೆನಿಸಿದ ದೇ-
ವರದೇವಂ ಕುಡುಗೆ ಸುವ್ರತಂ ಸುವ್ರತಮಂ

ಜಿನಸಿದ್ಧ ಸೂರಿದೇಶಿಕ
ಮುನಿಗಳ ಚರಣಂಗಳೆಂಬ ಸರಸಿಜವನಮೀ
ಮನಮೆಂಬ ತುಂಬಿಯೆರಮ-
ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ

ಎನಗೆ ನಿಜಮಹಿಮೆಯಂ ನೆ-
ಟ್ಟನೆ ಮಾಡುಗೆ ಕೂರ್ತು ವೀರಸೇನಾಚಾರ್ಯ‌ರ್
ಜಿನಸೇನಾಚಾರ್ಯರ್ ಸಿಂ-
ಹಣಂದಿಗಳ್ ಸಂದ ಕೊಂಡ ಕುಂದಾಚಾರ್ಯರ್


೧. ಪುರುದೇವ (ಆದಿತೀರ್ಥಂಕರ)ನೇ ಮುಂತಾದವರು ಒಲಿಸಿಕೊಂಡಿದ್ದ
ಮುಕ್ತಿವಧುವನ್ನೇ ಸುವ್ರತನು ಕೂಡ ಒಲಿಸಿಕೊಂಡನು. ಆದರೂ ಈತನಿಗೆ
'ಪರವನಿತಾ ನಿರಪೇಕ್ಷಕ' ಎಂಬ ಒಳ್ಳೆಯ ಹೆಸರೇ ಬಂತು! ಇವನು ದೇವರ
ದೇವನೂ ಹೌದು. ಇಂತಹ ಸುವ್ರತನು ನಮಗೆ ಸುವ್ರತವನ್ನು ದಯಪಾಲಿಸಲಿ.
೨. ಜಿನ, ಸಿದ್ದ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳೆಂಬ ಪಂಚ
ಪರಮೇಷ್ಠಿಗಳ ಪಾದಗಳೇ ಕಮಲವನಗಳು. ಅವು ಭಕ್ತಿಯೆಂಬ ಪರಿಮಳವನ್ನು
ಪಸರಿಸಿ ಈ ಮನಸ್ಸೆಂಬಭ್ರಮರವನ್ನು ತಮ್ಮ ಮೇಲೆ ಎರಗುವಂತೆ
ಮಾಡಲಿ. ೩. ನನಗೆ ವೀರಸೇನಾಚಾರ್ಯರೂ ಜಿನಸೇನಾಚಾರ್ಯರೂ ಸಿಂಹಣಂದಿಗಳೂ
ಪ್ರಸಿದ್ದರಾದ ಕೊಂಡಕುಂದಾಚಾರ್ಯರೂ ಸ್ನೇಹಪೂರ್ವಕವಾಗಿ ತಮ್ಮ