ಪುಟ:ಯಶೋಧರ ಚರಿತೆ.pdf/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಯಶೋಧರ ಚರಿತೆ
 

ಕಿರುವರೆಯದ ಶುಭಲಕ್ಷಣ
ದರುಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ-
ನರಸಲ್ ಬಳರಿಯ ಬನದಿಂ
ಪೊರಮಟ್ಟಂ ಚಂಡಕರ್ಮನೆಂಬ ತಳಾರಂ ೪೩

ಇತ್ತಲ್ ಬಳುಕ್ಕ ಪಂಚಶ-
ತೋತ್ತಮ ಯತಿಸಮಿತಿವೆರಸು ಗಮನಪ್ರಾಯ
ಶ್ಚಿತ್ತನಿಮಿತ್ತಂ ಬಂದ ಸು
ದತ್ತಾಚಾರ್ಯರ್ ಪುರೋಪವನಮಂ ಸಾರ್ದ‌ರ್ ೪೪

ಅವರ ಗುಣಮವರ ಸಂಯಮ-
ಮವರ ತಪಶ್ಚರಣಮೆಂಬುದವರಿವರಳವ
ಲ್ಲವರ ಪೆಸರ್ಗೊಂಡ ನಾಲಗೆ
ಸವಿದರಿಯದು ಬಳಿಕ ತಾಯ ಮೊಲೆವಾಲ್ವನಿಯಂ೪೫ನಡೆಯದಿರಲಾರಳು. ಆದುದರಿಂದ ತ್ವರೆಮಾಡು; ೪೨. ಉಳಿದ ನಾಗರಿಕರೆಲ್ಲರೂ
ಅನೇಕಾನೇಕ ಜೀವರಾಶಿಯ ಬಲಿಯನ್ನು ಕೊಡಲಿದ್ದಾರೆ, ತಡಮಾಡದಿರು”
ಎಂದು ಅಪ್ಪಣೆಯಿತ್ತನು. ತಳಾರ ಚಂಡಕರ್ಮನು ಅಪ್ಪಣೆ ಎಂದು ಉತ್ತರವನ್ನೇನೋ
ಕೊಟ್ಟನು. ಒಡನೆಯೇ ತನ್ನ ಕಿಂಕರರು ಈಗಾಗಲೇ ಪಶುಬಲಿಗಳನ್ನು
ತಂದಿರಲೇಬೇಕು ಎಂದು ಭಾವಿಸಿ, ೪೩. ಎಳೆಯ ವಯಸ್ಸಿನ, ಶುಭಲಕ್ಷಣವುಳ್ಳ
ಬುದ್ದಿಮತರಾದ, ಒಳ್ಳೆಯ ವಂಶದಲ್ಲಿ ಹುಟ್ಟಿದ ಮಾನವ ಜೋಡಿಯನ್ನ ಹುಡುಕುತ್ತಾ
ಆ ಮಾರಿಯ ಬನದಿಂದ ಹೊರಟನು. ೪೪. ಇತ್ತ ಸುದತ್ತಾಚಾರ್ಯರೆಂಬ
ಗುರುಗಳು ಐನೂರು ಮಂದಿ ಶಿಷ್ಯರನ್ನು ಕೂಡಿಕೊಂಡು ಆ ರಾಜಧಾನಿಯ
ಉಪವನಕ್ಕೆ ಬಂದು ಗಮನ ಪ್ರಾಯಶ್ಚಿತ್ತಕ್ಕಾಗಿ೧೯ ಅಲ್ಲಿಯೇ ತಂಗಿದ್ದರು.