ಪುಟ:ಯಶೋಧರ ಚರಿತೆ.pdf/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೩೧
 

ಬೇಡಿದ ಕಾಡೊಳ್ ಮಳೆವೆಯಾ
ಯ್ತೀಡಾಡುವಮಿದರ ಪೊರೆಯೆನೆನಗಂ ನಿನಗಂ
ಮೂಡುವ ಮುಳುಗುವ ದಂದುಗ-
ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ ॥೫೨॥

ಇಂತಿಂತೊರ್ವರನೊರ್ವರ್
ಸಂತೈಸುತ್ತುಂ ನೃಪೇಂದ್ರತನುಜಾತ‌ರ್ ನಿ-
ಶ್ಚಿಂತಂ ಪೊಕ್ಕರ್ ಪಸಿದ ಕೃ-
ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ ॥೫೩॥

ತಳಮನುಡಿದಿಡುವ ಕಣ್ಣಂ
ಕಳೆದೇರುಪ ಕರುಳ ತೋರಣಂಗಟ್ಟುವ ಕಾ
ಲ್ಗ ಳನುರಿಪಿ ನತ್ತರಾ ಕೂ-
ಮೈ ಳನಡುತಿಹ ವೀರರೆತ್ತ ನೋಳ್ಪೊಡಮದರೊಳ್ ॥೫೪॥


ಬರುತ್ತವೆಯೆಂಬುದು ನಮಗೆ ಗೊತ್ತಿಲ್ಲವೆ? ೫೧. ಅಪಾಯ ಕೋಟಿಗಳು ಎಷ್ಟೆಷ್ಟಿವೆಯೊ ಅಷ್ಟಕ್ಕೆಲ್ಲ ಈ ದೇಹವೇ ಮನೆಯಲ್ಲವೆ? ಈ ದೇಹವನ್ನು ಧರಿಸಿಕೊಂಡ ಮೇಲೆ ಇದರಲ್ಲಿ ಸುಖವನ್ನು ಹುಡುಕುವುದೂ ಒಂದೇ ; ಕಲ್ಲು ಗುಡ್ಡದಲ್ಲಿ ಪಕ್ವವಾದ ಮಾದಳದ ಹಣ್ಣನ್ನು ಹುಡುಕುವುದೂ ಒಂದೇ ! ೫೨. ಯಾವ ಕಾಡಿಗೆ ಮಳೆ ಬೇಕಿತ್ತೋ, ಅಲ್ಲಿಗೇ ಮಳೆ ಬಂದಂತಾಯಿತು. ಈ ದೇಹದ ಹೊರೆಯನ್ನೆಂತೋ ಕಳೆದುಬಿಡೋಣ. ನನಗೂ ನಿನಗೂ ಈ ಮೂಡುವ ಮುಳುಗುವ ಕೋಟಲೆಯೆಂಬುದು ಆಡಿದ ಹೊಲ, ಉಂಡ ಮದ್ದು, ಕಂಡ ವಿಚಾರ!”೨೩, ೫೩ ಅಣ್ಣ ತಂಗಿಯನ್ನೂ, ತಂಗಿ ಅಣ್ಣನನ್ನೂ ಈ ರೀತಿ ಪರಸ್ಪರ ಸಂತೈಸಿಕೊಳ್ಳುತ್ತಿದ್ದರು. ರಾಜಕುಮಾರರಾದ ಇವರು ಹೀಗೆ ಸಾಂತ್ವನ ವಚನಗಳನ್ನಾಡುತ್ತಾ ಮುಂಬರಿದು ನಿಶ್ಚಿಂತೆಯಿಂದ ಆ ಮಾರಿಯ ಮನೆಯನ್ನು ಪ್ರವೇಶಿಸಿದರು. ೫೪. ಮಾರಿಗುಡಿ ಯಮನ ಅಡಿಗೆಯ ಮನೆಯಂತಿತ್ತು.