ಪುಟ:ಯಶೋಧರ ಚರಿತೆ.pdf/೫೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೩೯
 

ಭರದಿಂದವರ್ಗಳ ಬೇಂಟಮ
ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ
ಸುರಭಿಶರನಂಗಜಾತಂ
ಗರಟಿಗೆ ಮೆಯ್ಗಾಪು ಮೆರೆಯೆ ಬಿಡದೋಲಗಿಪರ್

ಅನಿತೆಸೆವ ಚಂದ್ರಮತಿಗಂ
ಜನಪತಿಗಂ ಪುಟ್ಟಿದಂ ಯಶೋಧರನೆಂಬಂ
ಜನಮೋಹನಬಾಣಂ ಕ
ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್

ನೋಡುವ ಕಣ್ಣಳ ಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೊಡುವ ತೋಳ್ಗಳ ಪುಣ್ಯಂ
ನಾಡಾಡಿಯ ರೂಪೆ ಕುವರ ವಿದ್ಯಾಧರನಾಅರಸಿತನವು ಸರಿಯಾಗಿ ನೆಲೆಗೊಂಡಿದೆ. ೪. ರಾತ್ರಿಯ ಹೊತ್ತು ಚಂದ್ರನೂ,
ಹಗಲಿನ ಹೊತ್ತು ವಸಂತನೂ ಸರದಿ ಪ್ರಕಾರ, ಅಂಗರಕ್ಷಕರಾಗಿದ್ದು ಅವರ
ಅನುರಾಗವನ್ನು ಕಾಪಾಡುತ್ತಿದ್ದಾರೆ. ಹಗಲೂ ರಾತ್ರಿಯೂ ಕಾಮನೇ ಅವರ
ಅನುರಾಗದ ಸೇವೆಯನ್ನು ಮಾಡುತ್ತಿದ್ದಾನೆ. ೫. ಅಷ್ಟೊಂದು ಪ್ರೇಮದಿಂದ
ಶೋಭಿಸುತ್ತಿದ್ದ ಚಂದ್ರಮತಿಗೂ ಯಶೌಘನಿಗೂ ಯಶೋಧರನೆಂಬವನು
ಮಗನಾಗಿ ಹುಟ್ಟಿದನು, ಕಬ್ಬಿನ ಬಿಲ್ಲಿಗೂ ನೆನೆಯ ಹಗ್ಗಕ್ಕೂ ಜನಮೋಹನ ಬಾಣವು
ಹುಟ್ಟುವಂತೆ೩೦ ೬. ಕುಮಾರ ಯಶೋಧರನು ಸೌಂದರ್ಯದಲ್ಲಿ ಅಸಾಮಾನ್ಯವಾಗಿ
ವಿದ್ಯಾಧರನತೆ ಅತ್ಯಾಕರ್ಷಕನಾಗಿದ್ದನು. ಅವನನ್ನು ಎತ್ತಿ ಮುದ್ದಾಡುವುದು ತೋಳುಗಳ