ಪುಟ:ಯಶೋಧರ ಚರಿತೆ.pdf/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಯಶೋಧರ ಚರಿತೆ
 

ಧರಣೀ ಭಾರಕ್ಕೆ ಯಶೋ
ಧರನನೊಡಂಬಡಿಸಿ ನೂರ್ವರರಸುಗಳೊಡನಾ
ದರದಿಂ ಕಂಬಂದಪ್ಪಿದ
ಕರಿಯಂತೆ ತಪೋವನಕ್ಕೆ ನಡೆದಳೇಶಂ ೧೩

ಧರಣೀಗಣಿಕೆ ಯಶೌಘನ
ವಿರಹದ ಪರಿತಾಪಮಂ ಯಶೋಧರ ಯಶೋ
ಹರಿಚಂದನಚರ್ಚೆಯಿನು
ದ್ದುರ ದಾನಾಸಾರಸೇಕದಿಂ ಮಗ್ಗಿಸಿದಳ್ ೧೪

ಗುರುಬಿಟ್ಟ ರಾಜ್ಯಲಕ್ಷ್ಮಿಗೆ
ವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್
ನೆರೆದಿರ್ಪುದಲ್ಲದೆಂಬಂ
ತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ ೧೫ಮಾಡಿದನು. ೧೩. ಆದುದರಿಂದ ಭೂಮಿಯ ಭಾರವನ್ನು ವಹಿಸಿಕೊಳ್ಳುವಂತೆ
ಯಶೋಧರನನ್ನು ಒಪ್ಪಿಸಿದನು. ಈಗ ಯಶೌಘನಿಗೆ ಕಂಬಕ್ಕೆ ಕಟ್ಟಿಹಾಕಿದ
ಆನೆಗೆ ಬಿಡುಗಡೆ ದೊರೆತಂತೆ ಸಂತೋಷವಾಯಿತು. ಅವನು ತಪೋವನಕ್ಕೆ
ತೆರಳಿದನು. ಅವನನ್ನು ಹಿಂಬಾಲಿಸಿ ಬೇರೆ ನೂರ್ವರು ರಾಜರೂ ಹೊರಟು
ಹೋದರು. ೧೪. ಯಶೌಘನು ಹೊರಟು ಹೋದುದರಿಂದ ಭೂದೇವಿಗೆ
ವಿರಹದ ಸಂತಾಪ ಹೆಚ್ಚಿಕೊಂಡಿತು. ಈ ಉರಿಯನ್ನು ಉಪಶಮಿಸುವುದಕ್ಕಾಗಿ
ಅವಳು ಯಶೋಧರನ ಕೀರ್ತಿಯೆಂಬ ಹರಿಚಂದನದ ಲೇಪವನ್ನು
ಬಳಿದುಕೊಂಡಳು; ಮಾತ್ರವಲ್ಲ, ಯಶೋಧರನು ನಿರಂತರವೂ ದಾನ ಮಾಡುವಾಗ
ಹೊಯ್ಯುವ ನಿರಂತರವಾದ ನೀರ ಮಳೆಯಿಂದಲೂ ನೆರವು ಪಡೆದಳು. ೧೫.
“ಅಯ್ಯೋ, ಕಷ್ಟವೇ ! ತಂದೆ ತೊಲಗಿಸಿ ಬಿಟ್ಟ ರಾಜ್ಯಲಕ್ಷ್ಮಿಯನ್ನು ನೀನು
ಕೈಹಿಡಿದೆಯಲ್ಲಾ ! ನಿನ್ನಂಥವನ ಒಡನಾಟವು ನನಗೆ ಸಲ್ಲದು” ಎಂಬಂತೆ
ಯಶೋಧರನನ್ನು ಬಿಟ್ಟು ದಿಗಂತದವರೆಗೂ ಹೋದಳು ಅವನ ಕೀರ್ತಿಕಾಮಿನಿ೩೩