ಪುಟ:ಯಶೋಧರ ಚರಿತೆ.pdf/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೪೭
 

ಬಿನದಕ್ಕೆ ಪಾಡುತ್ತಿರೆ ನು
ಣ್ದನಿ ನಿದ್ರೆಗೆ ಕತಕಬೀಜಮಾಯ್ತನೆ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್ ೨೮

ಗಹಗಹಿಕವಡೆದ ವಹಿಣಿಯ
ಸುಹಾಹೆ ಝಂಪೆಯದೊಳಮರೆ ಠಾಯದೊಳಂ ನಿ
ರ್ವಹಿಸಿ ನೆಲೆಗೊಳಿಸಿ ಬಯ್ಸಿಕೆ ಮಹ
ಚಾಳೆಯದಲ್ಲಿ ಮೂರ್ತಿವಡೆದುದು ರಾಗಂ ೨೯

ಮಾಳಿಗೆಯೊಳಗಣ ಸೊಡರ್ಗುಡಿ
ಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂ
ಪಾಳಿಕೆವಡೆದು ಬಜಾವಣೆ
ಮಾಳಸಿರಿಯೆಂಬ ರಾಗಮಂ ಚಾಳಿಸಿದಂ ೩೦


ಇಂಪಾದ ಧ್ವನಿ ಅಮೃತಮತಿಯ ನಿದ್ದೆಗೆ ಕತಕಬೀಜ [ತಿಳಿಗೊಳಿಸುವ ಬೀಜ ; ಚಲ್ಬೀಜ ಎಂದು ಹೇಳುತ್ತಾರೆ]ವಾದಂತಾಯಿತು. ಅವಳು ನಿದ್ದೆ ತಿಳಿದದ್ದಳು ; ಹಾಡನ್ನು ಕಿವಿಗೊಟ್ಟು ಕೇಳಿದಳು. ಅದು ಅವಳ ಮನಸ್ಸನ್ನು ಮುಟ್ಟಿತು. ಕೂಡಲೇ ಆ ಮನಸ್ಸನ್ನು ಮೆಚ್ಚಿನ ಉಡುಗೊರೆಯನ್ನಾಗಿ ತೆತ್ತೇಬಿಟ್ಟಳು. ೨೯. ಅತ್ಯಾನಂದಗೊಂಡ ಬೆಡಗಿನ ಒಳ್ಳೆಯ ಧ್ವನಿ ಝಂಪೆಯ [ಇದು ಮಾತ್ರೆಗಳ ನಡೆಯುಳ್ಳ ದೇಶೀತಾಳ ವಿಶೇಷ]ದಲ್ಲಿ ಸೇರಿಕೊಂಡಿತು. ಅಲ್ಲಿಂದ ಅದು ಪ್ರಬಂಧ ವಿಶೇಷದಲ್ಲಿ ಮುಂದುವರಿಯಿತು. ಆಮೇಲೆ ವೈಶಿಷ್ಟ್ಯದ ನರ್ತನಗತಿಯಲ್ಲಿ ಹರಿದು, ಒಂದು ಬಗೆಯ ಕೃತಕದ ನೆಗೆತದಲ್ಲಿ ಆ ರಾಗವು ರೂಪುವಡೆಯಿತು. ೩೦. ಅದೇ ಮಾಳವಯೆಂಬ ದೇಶೀರಾಗ, ಮಾಳಿಗೆಯೊಳಗಿನ ದೀಪದ ಜ್ವಾಲೆ ಹೆಚ್ಚು ಪ್ರಕಾಶಪಡೆದಂತೆ ಈ ರಾಗವು ರಂಗಶೃಂಗಾರವನ್ನು ಪಡೆಯಿತು. ಅದು ಅಂತೆಯೇ ಸುರಕ್ಷಿತವಾಗಿ ಮುಂಬರಿದು ಸರಿಯಾದ ರೀತಿಯಲ್ಲಿ ನಡೆಯಿತು.