ಪುಟ:ಯಶೋಧರ ಚರಿತೆ.pdf/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಯಶೋಧರ ಚರಿತೆ
 

ಒಲವಾದೊಡೆ ರೂಪಿನ ಕೋ
ಟಲೆಯೇವುದೊ ಕಾರ್ಯಮಾಗೆ ಕಾರಣದಿಂದಂ
ಫಲಮೇನಿಂದೆನಗಾತನೆ
ಕುಲದೈವಂ ಕಾಮದೇವನಿಂದ್ರಂ ಚಂದ್ರಂ ೪೩


ಎಂದಾಕೆಗೆ ಲಂಚಮನಿ
ತ್ತೆಂದುದನೆಂದೆರವಿಗೊಂಡು ಕರಿಪುವುದುಮವಳ್‌
ಸಂದಿಸಿದೊಡಮೃತಮತಿ ರಾ
ತ್ರಿಂ ದಿವಮಾತನೊಳೆ ಸಲಿಸಿದಳ್ ತೆರಪುಗಳಂ೪೪


ಆ ವಿಕಟಾಂಗನೊಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್‌
ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ ೪೫


ಮೇಲ್ಮೆಯಿನ್ನಿಸುತ್ತದೆ. ೪೩. ಅದೂ ಅಲ್ಲದೆ, ಮನಸ್ಸು ಮೆಚ್ಚಿದೆಯೆಂದಾದರೆ
ಮತ್ತೆ ರೂಪದ ಪ್ರಶ್ನೆಯೇ ಏಳುವುದಿಲ್ಲ. ಕಾರ್ಯವಾದ ಮೇಲೆ ಕಾರಣದಿಂದೇನು
ಪ್ರಯೋಜನ? ಇಂದು ನನಗೆ ಅವನೇ ಕಾಮದೇವ, ಅವನೆ ಇಂದ್ರ, ಅವನೆ
ಚಂದ್ರ !” ೪೪. ಅಮೃತಮತಿ ಅವಳಿಗೆ ಲಂಚವನ್ನಿತ್ತಳು; ತನ್ನ
ವಶವರ್ತಿನಿಯಾಗುವಂತೆ ಮಾಡಿಕೊಂಡಳು. ಅವಳೊಡನೆ ಹೇಳಬೇಕಾದುದನ್ನೆಲ್ಲ
ಹೇಳಿದಳು. ಅವಳಿಂದ ಸಮ್ಮತಿಯ ಮಾತನ್ನೂ ಪಡೆದಳು. ಅವಳನ್ನು
ತನ್ನಿನಿಯನಲ್ಲಿಗೆ ಕಳುಹಿಸಿಕೊಟ್ಟಳು. ದೂತಿಯು ಕಾರ್ಯವನ್ನು ಕೈಗೂಡಿಸಿದಳು;
ಇಬ್ಬರನ್ನೂ ಒಂದುಗೂಡಿಸಿದಳು. ಅಂದಿನಿಂದ ಅಮೃತಮತಿ ಹಗಲೂ ಇರುಳೂ
ಬಿಡುವಿದಾಗಲೆಲ್ಲ ಆತನೊಡನಾಟದಲ್ಲಿಯೇ ಕಾಲ ಕಳೆಯತೊಡಗಿದಳು.
೪೫. ಸೌಂದರ್ಯದ ಅಧಿದೇವತೆಯಂತಿದ್ದ ಅಮೃತಮತಿಗೆ ಆ ವಿಕಟಾಂಗನ
ಒಡನಾಟದಲ್ಲಿಯೂ ಕೂಟದಲ್ಲಿಯೂ ಬಹಳ ಸವಿಯೇ ಕಂಡಿತು. ಬೇವನ್ನು
ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ? ಅಮ್ಯತಮತಿಗೂ ಯಶೋಧರನಲ್ಲಿ