ಪುಟ:ಯಶೋಧರ ಚರಿತೆ.pdf/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೫೩
 

ನೋಡುವ ಮಾತಾಡುವ ಬಾ
ಯ್ಗೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂ
ಪಾಡಳಿಯುತ್ತಿರೆ ನೋಡಲ್‌
ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್‌೪೬


ಮಱೆದೊರಗಿದನಂತೆವೊಲಿರೆ
ಪರಮೆ ಪಗಲ್‌ ಮುಗಿಯೆ ಸಿಲ್ಕಿ ಕೈರವದನಿರುಳ್‌
ಪೊರಮಡುವಂತರಸನ ತೋ
ಳ್ಸೆಱೆಯಿಂ ನುಸುಳ್ದರಸಿ ಜಾರನಲ್ಲಿಗೆ ಪೋದಳ್‌೪೭


ಬೆನ್ನೊಳೆ ಪೋದಂ ದೋಷದ
ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ
ಚ್ಛನ್ನದಿನುರ್ಚಿದ ಬಾಳ್ವೆರ
ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ೪೮


ಮನಸ್ಸು ಮುರುಟಿ ಹೋಯಿತು. ೪೬. ತನ್ನ ಪತಿಯನ್ನು ನೋಡುವ ಹೊತ್ತಿಗೆ
ಅವನೊಡನೆ ಮಾತಾಡುವ ಸಂದರ್ಭದಲ್ಲಿ ಮುದ್ದಿಸುವ ಸನ್ನಿವೇಶದಲ್ಲಿ ಅಮೃತಮತಿ
ಮೊದಲಿನಂತಿಲ್ಲವಾದಳು. ಇದನ್ನು ಗಮನಿಸಿದ ಯಶೋಧರ. ಚೆನ್ನಾಗಿ
ಪರಾಂಬರಿಸಬೇಕೆಂಬೆಣಿಕೆ ಅವನ ಮುನಸ್ಸಿನಲ್ಲಿ ಮೊಳೆಯಿತು.
೪೭. ಅವನು ಒಮ್ಮೆ ಹಾಸಿಗೆಯಲ್ಲಿ ಮೆಯ್ಮರೆದು ನಿದ್ರಿಸಿದಂತೆ ನಟಿಸಿದನು. ಆಗ
ಅಮೃತಮತಿಯು ನೈದಿಲೆಯೊಳಗೆ ಸಿಕ್ಕಿಬಿದ್ದ ಹೆಣ್ಣುತು೦ಬಿ, ಹಗಲು ಕಳೆದಾಗ
ಅದರೊಳಗಿಂದ ಹೊರಹೊರಡುವಂತೆ ಪತಿಯ ಬಾಹುಬಂಧನದಿಂದ
ಬಿಡಿಸಿಕೊಂಡು ತನ್ನ ಜಾರನಲ್ಲಿಗೆ ಹೋದಳು. ೪೮. ಯಶೋಧರನೂ ಎದ್ದನು.
ದೋಷವನ್ನು ಹಿಂಬಾಲಿಸಿಕೊಂಡು ಹೋಗುವ ದಂಡನೆಯಂತೆ ಕೈಯಲ್ಲಿ ಹಿರಿದ
ಖಡ್ಗವನ್ನು ಹಿಡಿದುಕೊಂಡು, ಅವನು ಯಾರ ಕಣ್ಣಿಗೂ ಬೀಳದಂತೆ ಅವಳ
ಹಿಂದೆಯೇ ಹೋದನು. ಅತ್ತ ಆ ಅಲ್ಪ ಮನುಷ್ಯನು ರಾಣಿ ಸಕಾಲಕ್ಕೆ ಅವನ
ಬಳಿ ಬಾರದುದಕ್ಕೆ ಸಿಟ್ಟಿನಿಂದ ಉರಿಯುತ್ತಿದ್ದನು. ೪೯. ಆಕೆ ತಂದ ಹೂ ಗಂಧ