ಪುಟ:ಯಶೋಧರ ಚರಿತೆ.pdf/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಯಶೋಧರ ಚರಿತೆ
 

ಅಸಿಲತೆ ರಣಧೌತಮದೀ
ಮಸಿಮುಸಡನ ಜೀವಕಪ್ಪಿನಂ ಕಂದಿದೊಡೆ
ಣ್ದೆಸೆಯನಡರ್ದೆನ್ನ ಕೀರ್ತಿ
ಪ್ರಸರದ ಕುಡಿ ಕಯ್ಪೆ ಸೂರೆಯ ಕುಡಿಯವೊಲಕ್ಕುಂ೫೫


ಅಳಿಪುಳ್ಳೊಡೆ ನೊಡಿರಿದೊಡ
ನಳಿವುದೆ ಪೆಣ್‌ ತಪ್ಪಿ ನಡೆಯ ಚಿಃ ಕಿಸುಗುಳಮೆಂ
ದುಳಿವುದೆ ಗೆಲ್ಲಂ ಗೊಂಡಾ
ಪುಳು ಪುಟ್ಟುವ ನರಕದೊಳಗೆ ಬೀಳ್ವನೆ ಚದುರಂ೫೬


ಎಂದು ನೆನೆದಿರಿಯಲೊಲ್ಲದೆ
ಬಂದರಸಂ ಮುನ್ನಿನಂತೆ ಪವಡಿರೆ ತಾನುಂ
ಬಂದು ಮರೆದರಸನೊರಗಿದ
ನೆಂದೊಯ್ಯನೆ ಸಾರ್ದು ಪೆರಗೆ ಪಟ್ಟಿರ್ಪಾಗಳ್‌೫೭


ನರಿಯನ್ನಲ್ಲ ; ಕರಿಯನ್ನು ; ೫೫. “ರಣರಂಗದಲ್ಲಿ ವೀರ ಪುಂಗವರ ರಕ್ತದಲ್ಲಿ
ಮಿಂದು ಮಡಿಯಾದ ಈ ಅಸಿಲತೆ ಈ ಕರಿಮುಸುಡನ ಕೊಳಕನ ಜೀವದ
ಕೆಸರಿನಿಂದ ಕಾಂತಿ ಕಳೆದುಕೊಳ್ಳಬೇಕೆ? ಹಾಗೆ ಆದರೆ ಎಂಟು ದಿಕ್ಕುಗಳ
ತುದಿವರೆಗೂ ಹಬ್ಬಿದ ನನ್ನ ಕೀರ್ತಿಯ ಕುಡಿಯು ಕಹಿ ಸೋರೆಯ
ಕುಡಿಯಂತಾಗದೆ? ೫೬. ಅವಳಿಗೆ ಅನ್ಯನಲ್ಲಿ ಆಸೆಯುಂಟಾಗಿದೆಯೆಂಬುದನ್ನು
ನಾನು ಈಗ ಕಂಡಿದ್ದೇನೆ. ಆದ ಕಾರಣ ಅವಳನ್ನು ಕತ್ತರಿಸಿ ಬಿಸಾಡಿದರೆ ಅವಳ
ಆಸೆ ಕೊನೆಗೊಳ್ಳುವುದೇ? ಹೆಣ್ಣು ತಪ್ಪಿ ನಡೆದಾಗ ಅವಳನ್ನು “ಚಿಃ ! ಹೊಲಸು!
ಎಂದು ಹಾಗೆಯೇ ಬಿಟ್ಟುಬಿಡುವುದೆ? ಹಾಗೆ ಗೆಲುವು ಪಡೆದು ಹುಳು ಹುಟ್ಟುವ
ನರಕದಲ್ಲಿ ಬೀಳಬೇಕಾದೀತು. ಇದು ಚಾತುರ್ಯವಲ್ಲ!” ೫೭. ಹೀಗೆ ಆಲೋಚಿಸಿ
ಖಡ್ಗಪ್ರಹಾರದ ಯೋಚನೆ ಸಲ್ಲದೆಂದೇ ನಿರ್ಧರಿಸಿ ಅವನು ಅಲ್ಲಿ ನಿಲ್ಲದೆ
ಅರಮನೆಗೆ ಮರಳಿ ಮೊದಲಿನಂತೆ ಹಾಸಿಗೆಯಲ್ಲಿ ಬಿದ್ದುಕೊಂಡನು. ಸ್ವಲ್ಪ
ಹೊತ್ತಿನಲ್ಲಿ ಅಮೃತಮತಿಯೂ ಹಿಂತಿರುಗಿದಳು. ರಾಜನು
ಗಾಢನಿದ್ರೆಯಲ್ಲಿದ್ದಾನೆಂದು ಭಾವಿಸಿ, ಮೆಲ್ಲನೆ ಸಮಿಾಪಿಸಿ ಮಲಗಿದಳು.