ಪುಟ:ಯಶೋಧರ ಚರಿತೆ.pdf/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೫೯
 


ಒಲಿಸಿದ ಪೆಣ್‌ ಪೆರರೊಳ್‌ ಸಂ
ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ
ಸಲಿಸಿ ಸಲೆ ನೆರೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುಟಳಿದ ಪೆಂಡಿರ ನಣ್ಪಂ೬೪


ಎಂದಿತು ಬಹುವಿಕಲ್ಪದ
ದಂದುಗದೊಳೆ ಬೆಳಗುಮಾಡಿ ಮೆಯ್ಮುರಿದೆರ್ದಂ
ಬಂದು ತೊಡೆವೊಯ್ದು ಭೋಧಿಸಿ
ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ೬೫


ಕೃತಕೃತ್ಯದಾನನಾವೀ-
ಕ್ಷಿತಿಘೃತನಾಸ್ಪೃಷ್ಟಕಪಿಳನೊಯ್ಯನೆ ಸಾರ್ದಂ
ಕತಿಪಯ ಪರಿಚಿಪರಿಜನ
ಚತುರವಚಃ ಪ್ರಚಯರು ಚಿಯನರಸಿಯನರಸಂ೬೬
೬೪. ನಾನು ಒಲಿಸಿಕೊಂಡ ಹೆಂಡತಿ ಚಂಚಲೆಯಾಗಿ ಅನ್ಯಾಸಕ್ತಳಾದಳೆಂದಮೇಲೆ,
ಏನು ಸುಖ? ಇದರ ಬದಲಾಗಿ ಮುಕ್ತಿಯನ್ನೇ ಒಲಿಸಿಕೊಂಡರೆ ನನಗೆ
ಪರಮಸುಖದ ಸಂಪತ್ತು ದೊರೆಯುತ್ತದೆ; ಆ ಮುಕ್ತಿಯ ಒಲವೂ ನನ್ನ ಮೇಲೆ
ಸ್ಥಿರವಾಗುತ್ತದೆ. ಹೀಗೆಂದಾದಮೇಲೆ ಉಳಿದ ಸ್ತ್ರೀಯರ ಯಾವ ಬಗೆಯ ನಂಟೂ
ನನಗೆ ಬೇಕಾಗಿಲ್ಲ”. ೬೫. ಎಂದೆಲ್ಲ ಹಲವು ಬಗೆಯಾಗಿ ವಿಚಾರ ಮಾಡಿದ
ಯಶೋಧರನು ಅದರಲ್ಲೆ ತೊಳಲಾಡಿ ಕಣ್ಣಲ್ಲೆ ಬೆಳಗುಮಾಡಿದನು. ಸುಪ್ರಭಾತದ
ಮಂಗಳವಾದ್ಯಗಳು ಮೊಳಗಿದವು. ಆ ಧ್ವನಿ ಅವನನ್ನು ತೊಡೆ ತಟ್ಟಿ ಎಬ್ಬಿಸುವಂತಿತ್ತು.
೬೬. ಅವನು ಮೆಯ್‌ಮುರಿದು ಎದ್ದನು. ನಿತ್ಯದಂತೆ ದಾನವನ್ನಿತ್ತನು. ತುಪ್ಪದಲ್ಲಿ
ತನ್ನ ಮುಖವನ್ನು ನೋಡಿಕೊಂಡನು. ಕಪಿಲೆ ಹಸುವನ್ನು ಮೆಯ್ಮುಟ್ಟಿ ಮಂಬರಿದನು;
ರಾಣಿಯ ಸಮೀಪವನ್ನು ಸೇರಿದನು. ಅವಳು ಕೆಲವು ಮಂದಿ ಪರಿಚಿತ ಸೇವಕ
ಜನರ ಚತುರವಚನಗಳನ್ನು ಕೇಳುತ್ತಾ ಮೆಚ್ಚುಗೆಯನ್ನು ಪ್ರಕಟಿಸುತ್ತಿದ್ದಳು.