ಪುಟ:ಯಶೋಧರ ಚರಿತೆ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಯಶೋಧರ ಚರಿತೆ


ಮೂರನೆಯ ಅವತಾರ

ಶ್ರೀ ರಮಣಿ ತೋರಮುತ್ತಿನ
ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ
ಪೇರುರಮಾಗಿರೆ ತಾಳ್ದಿದ
ರಾರೊ ಯಶೋಧರನೃಪೇ೦ದ್ರ ನೀನಲ್ಲದವರ್‌


ನಿನಗೆ ಶುಭವೆಂದ ವಂದಿಯ
ಮನೆಯಂಗಣದೊಳಗೆ ಪಣ್ತು ಪರ್ವಿದ ಮಂದಾ
ರ ನಮೇರು ಪಾರಿಜಾತದ
ಬನದೊಳ್‌ ಸಿರಿ ಮೆರೆವುದಲ್ತೆ ವನಕೇಳಿಗಳಂ


ಮನಸಿಜ ಕಲ್ಪಲ ತಾನಂ
ದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂ
ನನೆಕೊನೆವೋಗಿಸುತಿರ್ಪುದು
ಮನುಜ ಮನೋಭವ ಣವದ್ವಿಳಾಸವಸಂತಂ

_____________

೧. “ಯಶೋಧರ, ವಿಸ್ತಾರವಾದ ಎದೆಯಲ್ಲಿ ನಿತ್ಯವಸಂತವನ್ನು ನೆಲೆಗೊಳಿಸಿ,
ಅಲ್ಲಿ ಶ್ರೀ ವನಿತೆಗೆ ಅಣಿಮುತ್ತಿನ ಹಾರವನ್ನು ಉಯ್ಯಾಲೆಯಾಗಿ ಮಾಡಿ, ಅದರಲ್ಲಿ
ಅತ್ತಿತ್ತ ತೊನೆದಾಡುವಂತೆ ಮಾಡುವ ಭೂಪತಿಗಳು ನೀನಲ್ಲದೆ ಇನ್ನಾರಿದ್ದಾರೆ.೪೦
೨. ನಿನಗೆ ಮಂಗಲಾಶಂಸನ ಮಾಡುತ್ತಿದ್ದಾರೆ ವಂದಿಗಳು. ಅವರ ಮನೆಯಂಗಳದಲ್ಲಿ
ಲಕ್ಷ್ಮೀದೇವಿ ವನಕ್ರೀಡೆಯನ್ನಾಡುತ್ತಾ ಇದ್ದಾಳೆ. ಇದಕ್ಕೆ ಅಲ್ಲಿ ಫಲವತ್ತಾಗಿ ಹಬ್ಬಿ
ಬೆಳೆದ ಮಂದಾರ, ನಮೇರು(ಸುರಗಿ), ಪಾರಿಜಾತ ಮುಂತಾದ ಮರಗಳೇ
ಒಂದು ತೋಪಾಗಿ ಪರಿಣಮಿಸಿದೆ.೪೧ ೩. ಮನುಷ್ಯರಲ್ಲಿ ನೀನೇ
ಮನೋಭವನಾಗಿದ್ದೀಯೆ ಕಾಮನ ಕಲ್ಪವಲ್ಲಿವಿತಾನದ ನಂದನದಂತಿರುವ
ಅಬಲಾಜನರು, ನಿನ್ನ ವಿಲಾಸವಸಂತದಲ್ಲಿ; ಬೆಡಗಿನ ಬಿಂಕದಿಂದ ಬಾಗಿಕೊಂಡಿದ್ದು.