ಪುಟ:ಯಶೋಧರ ಚರಿತೆ.pdf/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಯಶೋದರ ಚರಿತೆ
 


ಮಂದಸ್ಮಿತ ವರ ಕೌಮುದಿ
ನಿಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ
ಲ್ಲಿ೦ದೇಕೆ ಕಂದ ಪಗಲೊಗೆ
ದಿಂದುವಿನಂತಾಯ್ತು ನಿನ್ನ ಮಂಗಲ ವದನಂ


ಎಂದು ಬೆಸಗೊಂಡ ತಾಯ್ಗೆ ಮ
ನಂದೋರದೆ ನೆವದಿನರಸನಿಂತುಸಿರ್ದಂ ಸುಯ್‌
ಕ೦ದಿಸಿದಧರಕ್ಕೆ ಸುಧಾ
ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ


ದೇವಿಯರ ಪರಕೆಯಿಂದೆನ
ಗಾವುದರೊಳ್‌ ಕೊರತೆಯಿಲ್ಲ ಪೋದಿರುಳೊಳ್‌ ಪೊಂ
ದಾವರೆಗೊಳದಂಚೆ ಕಳಿ
ಲ್ದಾವರೆಗೊಳದೊಳಗೆ ನಲಿವಕನಸಂ ಕಂಡೆಂ


ಮನಸ್ಸು ನೀರಾರಿದ ಕೊಳದ ಮೀನಿನಂತೆ ಮರುಕಕ್ಕೊಳಗಾಗಿದೆ. ೭. ಕಂದ,
ತಿಂಗಳ ಬೆಳಕಿನಂತಹ ನಿನ್ನ ಮುಗುಳುನಗೆ ಇಂದು ಇಲ್ಲವಾಗಿದೆ. ಕಸ್ತೂರಿತಿಲಕದ
ಗುರುತೇ ಶೋಭಿಸುವುದಿಲ್ಲವೇಕೆ? ನಿನ್ನ ಮಂಗಲ ಮುಖವು ಹಗಲು ಮೂಡಿದ
ಚಂದ್ರನಂತಾಗಿದೆಯಲ್ಲ! ಇದೇಕೆ, ಮಗು?” ೮. ಹೀಗೆ ಕೇಳಿದ ತಾಯಿಗೆ ತನ್ನ
ಮನಸ್ಸಿನಲ್ಲಿರುವುದನ್ನು ತೋರಿಸದೆ ಬೇರೊಂದು ನೆಪವನ್ನು ಹೀಗೆ ಹೇಳಿದನು.
ನಿಟ್ಟುಸಿರಿನಿ೦ದ ಕಂದಿದ ತುಟಿಗಳಿಗೆ ಹಲ್ಲಿನ ಕಾಂತಿಯು ಅಮೃತದ ಬಿಂದುಗಳನ್ನು
ತಳೆಯಿತು. ೯. “ಅಮ್ಮಾ, ದೇವಿಯರಾದ ನಿಮ್ಮ ಆಶೀರ್ವಾದ ಬಲದಿಂದ
ನನಗೇನೂ ಕೊರತೆಯಿಲ್ಲ ತಾಯಿ! ಆದರೆ ನಿನ್ನೆ ರಾತ್ರಿ ಒಂದು ವಿಚಿತ್ರವಾದ
ಕನಸನ್ನು ಕಂಡೆನಮ್ಮ! ಅದರಲ್ಲಿ ಸ್ವರ್ಣವರ್ಣದ ತಾವರೆಗಳ ಕೊಳದಲ್ಲಿ
ವಿಹರಿಸುತ್ತಿದ್ದ ಒಂದು ಹಂಸೆ ಕೊಳಕು ಕೋವಳೆಯ ಕೊಳದಲ್ಲಿ ಸಂತೋಷದಿಂದ