ಪುಟ:ಯಶೋಧರ ಚರಿತೆ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೬೭

ಎಂದೊಡೆ ಮುನಿದಂಬಿಕೆಯಿಂ
ತೆ೦ದಳ್‌ ನಿಜಮಪ್ಪ ಮೋಹದಿಂ ಸಲುಗೆಯಿನೆ
ಯ್ತಂದಳ್‌ ನಾಡೆ ನೃಪೇಂದ್ರನ
ಮುಂದಣ ಗತಿಗಪ್ಪ ಬಟ್ಟೆಯ೦ ಕಟ್ಟುವವೊಲ್‌೧೬

ಪರಿಹರಿಪೆಯೆಮ್ಮ ನುಡಿಯಂ
ಗುರುವಚನಮಲಂಘನೀಯವಮೆನ್ನದೆ ನೀನಾ
ದರದಿಂ ಕೈಕೊಳ್‌ ಧರ್ಮದೊ
ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಳ್೧೭

ಇವು ಧರ್ಮಮೆಂದು ಬಗೆವೊಡ
ಮವಿವೇಕದೆ ಶಾಂತಿಮಾಡೆ ಭೇತಾಳಂ ಮೂ
ಡುವ ತೆರದೆ ಹಿಂಸೆಯಿ೦ ಮೂ
ಡುವ ಮುಂತಣ ಕೇಡನೆಂತು ಕಳಿವೆಂ ಬಳಿಯಂ೧೮


ಸಮಾಧಾನ ಹೇಳಿದನು ಯಶೋಧರ. ೧೬. ಈ ಮಾತನ್ನು ಕೇಳಿದೊಡನೆಯೇ
ತಾಯಿಯ ಮುನಿಸು ಮಸಗಿತು. ಆದರೂ ಅವಳು ಮೋಹದಿಂದಲೂ
ಸಲುಗೆಯಿಂದಲೂ ಯಶೋಧರನ ಬಳಿಗೆ ಬ೦ದು ಹೀಗೆ ನುಡಿದಳು, ಅವನ
ಮುಂದಿನ ಸದ್ಗಶಿಯ ದಾರಿಗೆ ಪ್ರತಿಬ೦ಧಕ ಹಾಕುವಂತೆ. ೧೭. “ನಮ್ಮ ಮಾತನ್ನು
ನಿರಾಕರಿಸುವೆಯಾ? ಗುರು ವಚನವು ಅಲಂಘನೀಯವೆನ್ನುವುದೂ ಗೊತ್ತಿಲ್ಲವೆ
ನಿನಗೆ? ನನ್ನ ಮಾತನ್ನು ಆದರದಿಂದ ಅಂಗೀಕರಿಸು. ಧರ್ಮದಿಂದಲೇ ಶಾಂತಿ
ಎಂಬುದನ್ನು ಅರಸರು ಅನುಸರಿಸುವುದಿಲ್ಲವೆ? ಹೇಳು.” ಯಶೋಧರನು
ನುಡಿದನು. ೧೮. “ಇವು ಧರ್ಮ ಎಂದು ಬಗೆದರೂ ಅವಿವೇಕದಿಂದ ಇಂತಹ
ಶಾಂತಿಯನ್ನು ಮಾಡಿದರೆ ಸರಿಯಾದೀತೆ? ಹಿಂಸೆಯನ್ನು ಮಾಡಿದರೆ ಮುಂದೆ
ಬೇತಾಳಾಕಾರದಿಂದ ಕೇಡೇ ಮೂಡಿಬಂದೀತು! ಅದನ್ನು ಆಮೇಲೆ