ಪುಟ:ಯಶೋಧರ ಚರಿತೆ.pdf/೮೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೬೯
 

ಮಾಡದೊಡೆ ತಾಯ್ಗೆ ಮರಣಂ
ಮಾಡಿದೊಡೆನ್ನೊಂದು ಗತಿಗೆ ಕೇಡಿಂದೇನಂ
ಮಾಡುವೆನೆಂದಾಂದೋಳಮ
ನಾಡೆ ಮನಂ ತಮಮನಪ್ಪು ಕಯ್ದ ನಿಳೇಂ೨೨

ಆ ನೃಪತಿ ಬಳಿಕ ತಾಯುಂ
ತಾನುಂ ಚಂಡಿಕೆಯ ಪೂಜೆಗೆಂದೆಳ್ತಿಂದಂ
ನಾನಾ ವಿಧದರ್ಚನೆಯಿ೦ಂ
ಮಾನೋಮಿಯ ಮುಂದೆ ಬಂದ ಭೌಮಾಷ್ಟಮಿಯೊಳ್‌೨೩

ಕರಮೆಸೆಯೆ ಸಮೆದು ಬಂದುದು
ಚರಣಾಯುಧಮದರ ಚಿತ್ರಪರಿಶೋಭೆಗೆ ಜೆಂ
ತರನೊಂದಾಶ್ರಯಿಸಿರ್ದುದು
ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ೨೪ಮಾಡದಿದ್ದರೆ ಮಾತೆಯ ಮರಣವನ್ನು ಕಾಣಬೇಕಾಗುತ್ತದೆ.; ಮಾಡಿದರೆ ನನಗೆ
ಸದ್ಗತಿಗೆ ಕೇಡುಂಟಾಗುತ್ತದೆ. ಏನು ಮಾಡಲಿ! ಎಂದು ಯಶೋಧರನ ಮನಸ್ಸು
ಹಿಂದೆ ಮುಂದೆ ಉಯ್ಯಾಲೆಯಾಡಿತು. ಕಟ್ಟಕಡೆಗೆ ಅರಸನು ಆಜ್ಞಾನದ
ದಾರಿಯನ್ನೇ ಅವಲಂಬಿಸಿದನು. ೨೩. ಅವನೂ ಚಂದ್ರಮತಿಯೂ ಮಹಾನವಮಿ
ಹಿಂದಣ ಭೌಮಾಷ್ಟಮಿ೫೦ ದಿನ ಹಲವು ವಿಧದ ಅರ್ಚನೆಯಿಂದ ಚಂಡಿಕಾದೇವಿಯ
ಪೂಜೆಯನ್ನು ನೆರವೇರಿಸುವುದಕ್ಕಾಗಿ ಬಂದರು. ೨೪. ಬಲಿ ಕೊಡುವುದಕ್ಕಾಗಿ
ಹಿಟ್ಟಿನ ಒಂದು ಕೋಳಿಯನ್ನು ಬಹಳ ಸೊಗಸಾಗಿ ನಿರ್ಮಾಣ ಮಾಡಲಾಯಿತು.
ಅದರ ವಿಶೇಷವಾದ ಚೆಲುವು ಒಂದು ಪಿಶಾಚಿಯನ್ನು ಆಕರ್ಷಿಸಿತು. ಅದು ಆ
ಕೋಳಿಯೊಳಗೆ ಸೇರಿಕೊಂಡಿತು. ಸಕಾಲಕ್ಕೆ, ಚಂದ್ರಮತಿ ಗಟ್ಟಿಯಾಗಿ ಮಗನನ್ನು
ಆಶೀರ್ವದಿಸುತ್ತಿದ್ದ೦ಂತೆ ರಾಜನು ಆ ಕೋಳಿಯನ್ನು ಕಡಿದಿಕ್ಕಿದನು.