ಪುಟ:ಯಶೋಧರ ಚರಿತೆ.pdf/೮೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಯಶೋಧರ ಚರಿತೆ
 

ದೇವರ ಬಳಿಯೊಳೆ ಬರ್ಪೆಂ
ಪೂವಿನ ಸೌರಭದ ಮಾಳ್ಕೆಯಿ೦ ಗಮನಪ್ರ-
ಸಾವನೆಯೊಳಿಂದು ನೀಮುಂ
ದೇವಿಯುಮಾರೊಗಿಸಲ್ಕೆ ಎನ್ನರಮನೆಯೊಳ್‌೩೧


ಎನೆ ಜನಪತಿ ಮನಮಲ್ಲದ
ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ-
ಜಿನ ಲಡ್ಡುಗೆಯಂ ಮಾಡಿದು-
ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ೩೨


ಅರಸನ ಮೂದಲೆ ಮನದೊಳ-
ಗಿರೆ ಮೇಳಿಸಿಕೊಂಡು ಬ೦ದು ಪಾತಕಿ ಕೊಂದಳ್‌
ಬೆರಗಿ೦ ಗಂಡನ ನಾ ಸ್ತ್ರೀ
ಚರಿತಮದೇ೦ ಕಳೆಯಲರಿದು ಪೆಂಡಿರ ಕೃತಕಂ೩೩ನಿಮ್ಮೊಂದಿಗೆ ತಪೋವನಕ್ಕೆ ಬರುತ್ತೇನೆ. ಹೂವನ್ನು ಬಿಟ್ಟು ಪರಿಮಳವಿರುವುದೆ?
ಆದರೆ ಹೋಗುವ ಮುನ್ನ ಈ ದಿನ ನೀವೂ; ದೇವಿಯರಾದ ಅತ್ತೆಯೂ ನನ್ನ
ಅರಮನೆಗೆ ದಯಮಾಡಿಸಿ ಊಟಮಾಡಿ ತೆರಳಬೇಕು.” ಎಂದು ಒತ್ತಾಯಿಸಿದಳು.
೩೨. ಯಶೋಧರನಿಗೆ ಮನಸ್ಸಿಲ್ಲವಾದರೂ ಹೇಗೋ ಒಪ್ಪಿಕೊಂಡನು.
ತಾಯಿಯನ್ನು ಕೂಡಿಕೊಂಡು ಅಮೃತಮತಿಯ ಅರಮನೆಗೆ ಬಂದನು. ಅಲ್ಲಿ
ಅವನೂ ಅವನ ತಾಯಿಯೂ ಆಕೆ ಉಣಬಡಿಸಿದ ವಿಷದ ಲಡ್ಡುಗೆಯನ್ನು
ಸವಿದುಂಡರು. ೩೩. ಅರಸನ ಅಣಕದ ಮಾತು ಅಮೃತಮತಿಯ ಚಿತ್ತದಲ್ಲಿ
ಕೀಲಿಸಿ ನಿಂತಿತು. ಆದರೂ ಬಾಹ್ಯದಲ್ಲಿ ಬೆಡಗನ್ನು ತೋರಿಸುತ್ತಾ ಬಂದು ಆ
ಪಾಪಿ ಮರ್ಯಾದೆ ಮೀರಿ ತನ್ನ ಗಂಡನನ್ನೇ ಕೊಂದಳು. ಹೆಂಗಸಿನ ವರ್ತನೆ
ಎಷ್ಟು ಆಶ್ಚರ್ಯಕರ! ಸ್ತ್ರೀಯರ ಕಪಟ ವೃತ್ತಿಯನ್ನು ಕಳೆಯುವುದಕ್ಕೇ ಸಾಧ್ಯವಿಲ್ಲವಲ್ಲ!