ಪುಟ:ಯಶೋಧರ ಚರಿತೆ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಯಶೋಧರ ಚರಿತೆ

ಮತ್ತೆ ನೃಪಂ ನಾಯ್‌ ತಿಂದ ದು
ನೃತ್ಯಚಮತ್ಕಾರನಂ ಮಯೂರನನೆಂದಾ
ನೆತ್ತದ ಮಣೆಯಿಂದಿರಿದೊಡೆ
ನೆತ್ತಿ ಪಿಸುಳ್ದತ್ತು ಸತ್ತುವಂತಾ ಎರಡುಂ೪೩


ಮರುಗಿದನಿಳೇಶನಾ ಎರ-
ಡರ ಸಾವಿಂ ತಂದೆ ತಾಯ್ವಿರಳಿದಂತಿರೆ ಕ
ಣ್ಣರಿಯದೊಡಂ ಕರುಳರಿಯದೆ
ಮರುಗಿಸದಿರ್ಪುದೆ ಭವಾಂತರವ್ಯಾಮೋಹಂ೪೪


ಆ ವಿಂಧ್ಯನಗರದೊಳಾ ನಾಯ್‌
ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌
ಪಾವಂ ಪಗೆಮಿಗೆ ತಿಂದುದು ಬಲ್‌
ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ೪೫



೪೩. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ
ತಿಂದಿತು ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ
ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು
ಹಿಸಿಯಿತು. ಅದೂ ಸತ್ತಿತು. ೪೪. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ
ರಾಜನಿಗೆ ತಂದೆ ತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖವುಂಟಾಯಿತು.
ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು
ಈ ರೀತಿ ಮರುಗಿಸದೆ ಇರುವುದಿಲ್ಲ. ೪೫. ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ
ಹಾವಾಗಿ ಹುಟ್ಟಿಕೊಂಡಿತು. ನವಿಲು ಕೂಡ ಅಲ್ಲಿಯೇ ಮುಳ್ಳು ಹಂದಿಯಾಗಿ
ಜನ್ಮಪಡೆಯಿತು. ಈ ಮುಳ್ಳು ಹಂದಿ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು
ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ.