ಪುಟ:ಯಶೋಧರ ಚರಿತೆ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೮೩

ಇರ್ದಳೊ ಮೇಣ್‌ ಬರ್ದಳೊ ಮೇಣ್‌
ಅರ್ದಳೊ ಮೇಣ್‌ ಅಷ್ಟವಂಕನೊಳ್‌ ಕಷ್ಟೆಯದೆಂ-
ತಿರ್ದಳೊ ಕಾಣೆನದೇಕೆನು-
ತಿರ್ದುದು ಕೋಟಲೆಗೆ ಕೋಡು ಮೂಡಿದ ತೆರದಿ೦೬೪


ಇತ್ತಲ್‌ ನೃಪನಂದೆಚ್ಚೊಡೆ
ಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ
ಪೆತ್ತಿರೆ ಬೆನ್‌ ಮುರಿವಂತಿರೆ
ಪಿತ್ತಳೆಯಂ ಪೇರಿ ತಂದು ಬಿಟ್ಟಂ ಪರದಂ೬೫


ನೀರಡಸಿ ಕುಡಿದು ಸಿಂಪೆಯ
ನೀರೊಳಗರೆಮುಳುಗಿ ಮಗ್ಗುಲಿಕ್ಕಿರ್ದುದು ಮು-
ನ್ನೀರಂ ನೀಲಾಚಲದಿಂ
ಸಾರಂಗಟ್ಟಿದವೊಲಿರೆ ಬಳಲ್ದು ಲುಲಾಯಂ೬೬



ಇಲ್ಲಿಯೇ ಸತ್ತುಹೋದೆ. ೬೪. ಅವಳು ಈಗಲೂ ಬದುಕಿಯೇ ಇದ್ದಾಳೋ,
ಸತ್ತಿದ್ದಾಳೋ? ಅಲ್ಲ, ಅಷ್ಟವಂಕನಲ್ಲಿ ಇನ್ನೂ ತಲ್ಲೀನಳಾಗಿಯೇ ಇದ್ದಾಳೋ
ಹೇಗಿದ್ದಾಳೊ, ಗೊತ್ತಾಗುವುದಿಲ್ಲವಲ್ಲ!” ಎಂದು ಎಣಿಸುತ್ತಾ ಇದ್ದನು. ಅವನ
ಕಷ್ಟಗಳಿಗೆ ಕೋಡು ಮೂಡಿದಂತೆ೫೩ ಈ ಯೋಚನೆಯೂ ಅವನಿಗೆ ತಲೆದೋರಿತು;
ಸಂಕಟ ಹೆಚ್ಚಿತು. ೬೫. ಇತ್ತ ಯಶೋಮತಿಯ ಬಾಣದ ಪೆಟ್ಟಿನಿಂದ ಸತ್ತ ಆಡು
ಕಳಿಂಗದಲ್ಲಿ ಕೋಣನ ದೇಹವನ್ನು ಪಡೆಯಿತು. ಅದು ಒಬ್ಬ ವ್ಯಾಪಾರಿಯ
ವಶವಾಯಿತು. ಒಂದು ದಿನ ಅವನು ಅದರ ಬೆನ್ನ ಮೇಲೆ ಹೊರಲಾರದಷ್ಟು
ಹಿತ್ತಾಳೆಯ ಹೊರೆಯನ್ನು ಹೇರಿ ತಂದು ಬಳಿಕ ಹೊರೆಯಿಳಿಸಿ ದಡದಲ್ಲಿ
ಅದನ್ನು ಬಿಟ್ಟನು. ೬೬. ಅದಕ್ಕೆ ಬಾಯಾರಿಕೆ ತೀವ್ರವಾಯಿತು. ಹತ್ತಿರದಲ್ಲೇ ಇದ್ದ
ಸಿ೦ಪಾನದಿಯ ನೀರನ್ನು ಕುಡಿದು ಅದು ಅಲ್ಲೇ ನೀರಲ್ಲಿ ಅರ್ಧ ಮುಳುಗಿ
ಮಲಗಿಕೊಂಡಿತು. ಆಯಾಸಗೊಂಡ ಕೋಣವು ಕಡಲಿಗೆ ನೀಲಾಚಲದ