ಪುಟ:ಯಶೋಧರ ಚರಿತೆ.pdf/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಯಶೋಧರ ಚರಿತೆ
 

ಮದನನ ಮಾರಂಕದ ಚೆಂ-
ದದ ಗಂಡನಮೃತದನ್ನಳತ್ತೆಯನಿವಳೋ
ವದೆ ಕೊಂದಳ್ ಪಾಪಂ ಲೆ-
ಇದು ಪಾತಕಿ ಪುಳಿತೊಡಲ್ಲದೇಂ ಸತ್ತವಳೇ೭೩


ತೊನ್ನ ಕೂಟದಿನಾದುದು
ತೊನ್ನೀ ರೋಗಕ್ಕೆ ಬಾಡು ಕಳ್ ವಿಷಮೆನೆಯುಂ
ಮನ್ನಿಸಳೆ ಮಗನ ಮಾತನಿ-
ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ೭೪


ಎಂಬ ನುಡಿಗೇಳ್ದು ಮೋಪಲ್
ಪಾಣ್ಬನ ಕೂಡಿರ್ದ ನಣ್ಪುಗಂಡುಂ ತಮದಿಂ
ದಂ ಬೆಂದು ಸತ್ತುದರೆಗೊ-
ಯ್ದುಣ್ಬುದರಿಂ ನೊಂದು ಸತ್ತುದಿಲ್ಲಜಪೋತಂ೭೫೭೩. ಮದನನ ಪ್ರತಿರೂಪದಂತೆ ಸುಂದರನಾಗಿದ್ದನು, ಈಕೆಯ ಗಂಡ ;ಇವಳ
ಅತ್ತೆ ಅಮೃತದಂತಿದ್ದಳು. ಇವಳಿಗೆ ಅವರಿಬ್ಬರೂ ಮೆಚ್ಚಲಿಲ್ಲ ; ಇಬ್ಬರನ್ನೂ
ಕೊಂದುಹಾಕಿದಳು. ಇವಳನ್ನು ಈಕೆಯ ಪಾಪವೂ ನುಂಗುವುದಿಲ್ಲವಲ್ಲ! ಈ
ಪಾತಕಿ ಹುಳುತುಂಬಿಯೇ ಸಾಯಬೇಕಲ್ಲದೆ ಅನ್ಯಥಾ ಇವಳಿಗೆ ಮರಣ ಬಾರದು.
೭೪. “ಕುಷ್ಠರೋಗಿಯ ಸಂಪರ್ಕಮಾಡಿದ ಇವಳಿಗೆ ಅದೇ ಕುಷ್ಠವು
ಅಂಟಿಕೊಂಡಿದೆ. ಈ ರೋಗಕ್ಕೆ ಮಾಂಸವೂ ಮದ್ಯವೂ ವಿಷವೆಂದು ಮಗ
ಹಲವುಬಾರಿ ಹೇಳಿನೋಡಿದನು. ಆದರೂ ಇವಳು ಅವುಗಳನ್ನು ಬಿಡಲೊಲ್ಲಳು.
ಇವಳಿಗೆ ಅತ್ಯಂತ ದುರ್ಘಟವಾದ ನರಕದ ಮೇಲೆಯೇ ಮೆಚ್ಚಿಗೆ ಆಗಿರಬೇಕು.”
೭೫. ಈ ಮಾತನ್ನೆಲ್ಲ ಆ ಎಳೆಯ ಹೋತ ಕೇಳಿತು. ಅದು, ತನ್ನ
ಹೆಂಡತಿಯೆನ್ನಿಸಿದ್ದವಳು ಜಾರನನ್ನು ಕೂಡಿಕೊಂಡಿದ್ದ ರೀತಿಯನ್ನು ಕಂಡಿತು.
ಈ ಎರಡು ಬಗೆಯ ಕತ್ತಲು ಕವಿದು, ಸಂತಾಪದಿಂದ ಬೆಂದು, ಆ ಹೋತ ತನ್ನ
ಪ್ರಾಣವನ್ನು ಕಳೆದುಕೊಂಡಿತಲ್ಲದೆ, ತನ್ನನ್ನು ಅರ್ಧ ಕಡಿದು ಮಾಂಸ ತೆಗೆದು