ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

v

ಯಥೇಷ್ಟವಾಗಿ ಒದಗಿಬರಬಹುದು, ಆದರೆ ಪಾಠಶಾಲೆಯೆಂಬ ಒಡಲಿಗೆ ಉಪಾಧ್ಯಾಯರೇ ಜೀವ. ಕ್ಷೀಣದೆಶೆಯಲ್ಲಿರುವ ಪಾಠ ಶಾಲೆಗೆ ದಕ್ಷರೂ ಶ್ರದ್ದಾವಂತರೂ ಆದ ಉಪಾಧ್ಯಾಯರು ವರ್ಗವಾಗಿ ಹೋದರೆ ಅದನ್ನು ಒಂದು ವರ್ಷದೊಳಗಾಗಿ ಊರ್ಜಿತ ಮಾಡಿ, ಐವತ್ತು ಅರುವತ್ತು ಮಕ್ಕಳು ತುಂಬಿದ ಪಾಠಶಾಲೆಯನ್ನಾಗಿ ಮಾಡುತ್ತಾರೆ ; ಮತ್ತು ಗ್ರಾಮಸ್ಥರ ಗೌರವವನ್ನು ಸಂಪಾದಿಸಿ ಗಣ್ಯ ವ್ಯಕ್ತಿಗಳಾಗುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಪಾಠಶಾಲೆಗೆ ಯೋಗ್ಯತೆಯಿಲ್ಲದ ಮತ್ತು ಶ್ರದ್ಧಾ ಹೀನರಾದ ಉಪಾಧ್ಯಾಯರು ಹೋದರೆ ಮೂರು ತಿಂಗಳಲ್ಲಿ ಅದನ್ನು ಕ್ಷೀಣದೆಶೆಗೆ ತಂದುಬಿಡುತ್ತಾರೆ. ಆದ್ದರಿಂದ ವಿದ್ಯಾಭ್ಯಾಸದ ಇಲಾಖೆಯಲ್ಲಿ ಯಾರು. ಯಾರನ್ನೊ ಉಪಾಧ್ಯಾಯರನ್ನಾಗಿ ನೇಮಕ ಮಾಡುವುದು ಸರಿಯಲ್ಲ. ಮೊದಲನೆಯದಾಗಿ, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿಯೂ ಟೈನಿಂಗ್ ಪರೀಕ್ಷೆಯಲ್ಲಿಯೂ ತೇರ್ಗಡೆಯಾದವರನ್ನು ಉಪಾಧ್ಯಾಯರನ್ನಾಗಿ ನೇಮಕ ಮಾಡಬೇಕು. ಎರಡನೆಯದಾಗಿ, ಅಧಿಕಾರಿಗಳಿಗೂ ಉವಾಧ್ಯಾಯರಿಗೂ ಮಧುರ ಬಾಂಧವ್ಯ ಬೆಳೆದು ಬರಬೇಕು. ಮೂರನೆಯದಾಗಿ, ಉಪಾಧ್ಯಾಯರಿಗೆ ತಿಳಿವಳಿಕೆಯನ್ನು ಕೊಡತಕ್ಕವರು ಮತ್ತು ಅವರ ಕೆಲಸದಲ್ಲಿ ಸಹಾಯಮಾಡತಕ್ಕವರು ಇನ್ಸ್ಪೆಕ್ಟರ್ ಕೆಲಸಗಳಿಗೆ ನೇಮಕವಾಗಬೇಕು. ವಿದ್ಯಾಭ್ಯಾಸದ ಇಲಾಖೆಯಲ್ಲಿರುವ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರಾಗಿ ಶಿಕ್ಷಣ ಶಾಸ್ತ್ರ, ವ್ಯವಸಾಯ ಶಾಸ್ತ್ರ, ಸಹಕಾರ ತತ್ವಗಳು, ಮೊದಲಾದುವುಗಳಲ್ಲೆಲ್ಲ ಒಳ್ಳೆಯ ಪಾಂಡಿತ್ಯವನ್ನು ಸಂಪಾದಿಸಿಕೊಂಡು ಗ್ರಾಮಾಂತರಗಳಲ್ಲಿ ಸಂಚರಿಸುವಾಗ ಹಳ್ಳಿಯವರ ಸಭೆಗಳನ್ನು ಸೇರಿಸಿ ಭಾಷಣಗಳ ಮೂಲಕ ಜ್ಞಾನ ಪ್ರಚಾರ ಮಾಡುವ ಶಕ್ತಿಯುಳ್ಳವರಾಗಿರಬೇಕು.

ಈಗ ಪಾಠಶಾಲೆಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸುತ್ತಿದ್ದಾರೆ. ಅನೇಕ ಪಾಠ ಶಾಲೆಗಳಲ್ಲಿ ಉಪಾಧ್ಯಾಯರುಗಳಿಲ್ಲ; ಅಥವಾ ಅವರ ಸಂಖ್ಯೆ ಕಡಮೆ, ಟೈನಿಂಗ್ ಆಗಿಲ್ಲದವರನ್ನೆಲ್ಲ ಸೇರಿಸಿಕೊಂಡು ಅವರಿಗೆ ಯಾವುದೊಂದು ಅಲ್ಪಾವಧಿಯ ಶಿಕ್ಷಣವನ್ನೂ ಕೊಡದೆ ಉಪಾಧ್ಯಾಯಯರನ್ನಾಗಿ