ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

vi

ಕಳಿಸುತ್ತಿದಾರೆ. ಅವರ ಸರ್ವಿಸ್ಸು ಅರ್ಧ ಮುಗಿಯುವ ಹೊತ್ತಿಗೋ ಏನೋ ಟೈನಿಂಗಿಗೆ ಕಳಿಸಿಕೊಡುತ್ತಾರೆ. ಏತನ್ಮಧ್ಯೆ ಆ ಅನನುಭವಿಗಳು ತಮಗೆ ತೋರಿದಂತೆ ಪಾಠಗಳನ್ನು ಮಾಡುತ್ತಾರೆ. ಈ ದೋಷಗಳೆಲ್ಲ ನಿವಾರಣೆಯಾಗಬೇಕಾಗಿದೆ. ನಮಗೆ ಪ್ರತಿಯೊಂದು ಜಿಲ್ಲೆ ಯಲ್ಲಿಯೂ ಈಗ ನಾಲ್ ಸ್ಕೂಲುಗಳು ಬೇಕು. ಎಸ್.ಎಸ್.ಎಲ್.ಸಿ, ಆದವರಿಗೆ ಸ್ಕಾಲರ್ ಷಿಪ್ ಕೊಟ್ಟು ಒಂದು ವರ್ಷಕಾಲ ಆ ಪಾಠಶಾಲೆಗಳಲ್ಲಿ ಶಿಕ್ಷಣ ವನ್ನು ಒದಗಿಸಿ ಉಪಾಧ್ಯಾಯರನ್ನಾಗಿ ನೇಮಕ ಮಾಡುತ್ತ ಹೋಗ ಬೇಕು. ಪ್ರತಿವರ್ಷವೂ ಹೀಗೆ ಐನೂರು ಮಂದಿಯಾದರೂ ತರಬೇ ತಾಗಿ ಬರುತ್ತಿದ್ದರೆ ನಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ಸಮಸ್ಯೆ ಬಹುಮಟ್ಟಿಗೆ ಬಗೆಹರಿದೀತು.

ಈ ಕಥೆಯಲ್ಲಿ ಇಂಗ್ಲಿಷು ಮತ್ತು ಹಿಂದೂಸ್ಥಾನೀ ಪದಗಳನ್ನು ಧಾರಾಳವಾಗಿ ಉಪಯೋಗಿಸಿದೆ. ಆಡಳಿತದ ಭಾಷೆಯಲ್ಲಿ ರೂಢಿಯಾಗಿರುವ ಮತ್ತು ಜನರು ಬಳಕೆಯಲ್ಲಿಯೂ ಉಪಯೋಗಿಸುತ್ತಿರುವ ಆ ಪದಗಳನ್ನು ನಾವು ಕನ್ನಡ ಕೋಶಕ್ಕೆ ಸೇರಿಸಿಕೊಳ್ಳಬೇಕಾಗಿದೆ. ಒಂದೊಂದು ಸಂದರ್ಭದಲ್ಲಿ ಸಾಮಾನ್ಯ ಜನರ ಬಳಕೆಯಲ್ಲಿಲ್ಲದ, ಆದರೆ ಅಧಿಕಾರಿಗಳ ಬಾಯಲ್ಲಿ ಬರುವ ಟ್ಯಾಕ್ಸ್ (Tact= ಸಮಯೋನಾಯ), ಆಟ್ ಹೋಮ್ (At-home= ಮಿತ್ರಕೂಟ ) ಮೊದಲಾದ ಪದಗಳನ್ನೂ ಉಪಯೋಗಿಸಿದೆ. ಇವುಗಳ ಪಟ್ಟಿ ಯನ್ನು ಅರ್ಥದೊಂದಿಗೆ ಪ್ರತ್ಯೇಕವಾಗಿ ಕೊಟ್ಟಿಲ್ಲ. ಸಂದರ್ಭದಿಂದ ಅವುಗಳ ಅರ್ಥ ಹೊರಪಡುವುದೆಂದು ತಿಳಿದು ಆ ಪ್ರಯತ್ನವನ್ನು ಕೈಬಿಟ್ಟಿದ್ದೇನೆ.

ಈ ಗ್ರಂಥದಲ್ಲಿರುವ 'ಬೋರ್ಡು ಒರಸುವ ಬಟ್ಟೆ' ಮತ್ತು 'ಮೆಷ್ಟ್ರು ಮುನಿಸಾಮಿ' ಎಂಬ ಎರಡು ಕಥೆಗಳನ್ನು ಮೂರು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾಂತ ಶಾಖೆಯವರು ಏರ್ಪಡಿಸಿದ್ದ

'ದೀಪಾವಳಿಯ ಹಾಸ್ಯದ ಚಟಾಕಿಗಳು ' ಎಂಬ ಭಾಷಣ ಮಾಲೆಯಲ್ಲಿ ನಾನು ಹೇಳಿದ್ದೆ. ಕೆಲವು ತಿಂಗಳ ನಂತರ ಯಾರೋ ಪುಣ್ಯಾತ್ಮರು ನನ್ನ ಅಪ್ಪಣೆಯಿಲ್ಲದೆ ನನಗೆ ತಿಳಿವಳಿಕೆಯನ್ನೂ ಕೊಡದೆ ನನ್ನ ಹೆಸರನ್ನೂ ಹಾಕದೆ, 'ಕತೆಗಾರ' ಮಾಸಪತ್ರಿಕೆಯಲ್ಲಿ ವಿರೂಪಮಾಡಿ, ಅವುಗಳ