ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೦

ರಂಗನಾಥಪುರದ ಗಂಗೇಗೌಡರು

ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು. ಗುಮಾಸ್ತೆ ಶಂಕರಪ್ಪನೂ, ಹೆಡ್‌ಮೇಷ್ಟು ತಿಮ್ಮಣ್ಣ ಭಟ್ಟನೂ, ಇತರ ಮೇ ಷ್ಟುಗಳೂ ಕೈ ಮುಗಿದರು. ಬೀಡಾರವನ್ನು ಮುಸಾಫರಖಾನೆ ಯಲ್ಲಿ ಏರ್ಪಾಟು ಮಾಡಿದ್ದು ದರಿ೦ದ ರಂಗಣ್ಣ ನೆಟ್ಟಗೆ ಅಲ್ಲಿಗೆ ಹೋದನು. ಒಂದು ಭಾಗದಲ್ಲಿ ತನ್ನ ಬಿಡಾರ ಏರ್ಪಾಟಾಗಿತ್ತು. ಎದುರು ಭಾಗದಲ್ಲಿ ಸಾಹೇಬರಿಗೆ ಸ್ಥಳ ಮಾಸಲಾಗಿತ್ತು. ರಂಗಣ್ಣನ ಮುಖಮುದ್ರೆ ಗಂಭೀರವಾಗಿದ್ದುದರಿಂದ ಯಾರೂ ಮಾತನಾಡಿಸಲಿಲ್ಲ. ಕೊಟಡಿಯಲ್ಲಿ ರಂಗಣ್ಣ ಕುಳಿತ ಬಳಿಕ ಗೋಪಾಲ ಉಪ್ಪಿಟ್ಟು, ಬೋಂಡ ಮತ್ತು ಕಾಫಿಗಳನ್ನು ತಂದು ಮೇಜಿನ ಮೇಲಿಟ್ಟನು, ಅವುಗಳನ್ನು ಮುಗಿಸಿದ್ದಾಯಿತು. ತಿಮ್ಮಣ್ಣ ಭಟ್ಟ ಹೊರಗಡೆಯೇ ಇದ್ದವನು ಎಳನೀರನ್ನು ಕೆತ್ತಿ ಬೆಳ್ಳಿಯ ಲೋಟಕ್ಕೆ ಸುರಿದು, ಅದನ್ನೂ ಕೆಲವು ರಸಬಾಳೆಯ ಹಣ್ಣುಗಳನ್ನ ಗೋಪಾಲನ ಕೈಯಲ್ಲಿ ಕಳಿಸಿಕೊಟ್ಟನು. ಗೋಪಾಲನು ಅವುಗಳನ್ನು ತರುತ್ತಲೂ, “ಇವನ್ನು ಯಾರು ಕೊಟ್ಟರು ? ಏತಕ್ಕೆ ತೆಗೆದುಕೊಂಡು ಬಂದೆ ?' ಎಂದು ರಂಗಣ್ಣ ಸ್ವಲ್ಪ ಗದರಿಸಿದನು.

'ಹೆಡ್ ಮೇ ಷ್ಟು ತಿಮ್ಮಣ್ಣ ಭಟ್ಟರು ಕೊಟ್ಟು ಕಳಿಸಿದರು ?

“ಆ ಭಟ್ಟರಿಗೂ ಬುದ್ಧಿಯಿಲ್ಲ ! ನಿನಗೂ ಬುದ್ಧಿಯಿಲ್ಲ ! ತೆಗೆದು ಕೊಂಡು ಹೋಗು.

ಗೋಪಾಲನು ಹೆದರಿ ಕೊಂಡು ಅವನ್ನು ಹೊರಕ್ಕೆ ತಂದು ಹೆಡ್ ಮೇಷ್ಟರ ವಶಕ್ಕೆ ಒಪ್ಪಿಸಿ ಬಿಟ್ಟನು.

ತನ್ನ ವಿಚಾರದಲ್ಲಿ ಇನ್ಸ್ಪೆಕ್ಟರಿಗೆ ಬಹಳ ಕೊಪವಿದೆಯೆಂಬುದು ತಿಮ್ಮಣ್ಣ ಭಟ್ಟನಿಗೆ ದೃಢಪಟ್ಟಿತು. ಇಷ್ಟೆಲ್ಲ ಏಪಾ೯ಟುಗಳನ್ನು ಮಾಡಿ ಸುಖ ಸಂತೋಷಗಳು ತಾಂಡವವಾಡದೆ ಕೋಪ ವ್ಯಸನಗಳಲ್ಲಿ