ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೮

ರಂಗಣ್ಣನ ಕನಸಿನ ದಿನಗಳು

ಮೀಸೆಗಳು ! ಕ್ಷೌರಮಾಡಿಸಿಕೊಳ್ಳದೇ ಇದ್ದುದರಿಂದ ಬ್ರಷ್ಟಿನಂತೆ ಬೆಳೆದಿದ್ದ ಒರಟು ಗಡ್ಡ ! ಖಾದಿಯ ಒಂದು ಜುಬ್ಬವನ್ನು ತೊಟ್ಟು ಕೊಂಡು ಖಾದಿಯ ಪಂಚೆಯನ್ನು ಲುಂಗಿ ಸುತ್ತಿ ಕಂಡು, ಮಡಸಿದ್ಧ ಖಾದಿ ಅಂಗವಸ್ತ್ರವನ್ನು ಭುಜದಮೇಲೆ ಹಾಕಿಕೊಂಡು, ಕೈಯಲ್ಲಿ ದಪ್ಪವಾದ ದೊಣ್ಣೆಯೊಂದನ್ನು ಹಿಡಿದುಕೊಂಡು ಎದುರಿಗೆ ರಾಕ್ಷಸಾಕಾರದಲ್ಲಿ ನಿಂತಿದ್ದನು ! ರಂಗಣ್ಣ ಧೈರ್ಯಶಾಲಿಯೇ ಆಗಿದ್ದರೂ ಅವನ ಎದೆ ಝಲ್ಲೆಂದಿತು ; ರಕ್ತ ವೇಗವಾಗಿ ಹರಿಯತೊಡಗಿತು; ಮುಖದಲ್ಲಿ ಕಳೆ ಇಳಿಯಿತು. ಉಗ್ರಪ್ಪನು ಕೈ ದೊಣ್ಣೆಯನ್ನು ಬಾಗಿಲ ಹೊರಗೆ ಒರಗಿಸಿ ಹೊಸ್ತಿಲ ಬಳಿ ನಿಂತುಕೊಂಡನು. ನಮಸ್ಕಾರವನ್ನು ಮಾಡಲಿಲ್ಲ. ರಂಗಣ್ಣ ಒಂದು ಕ್ಷಣದಲ್ಲಿ ಧೈರ್ಯ ತಂದುಕೊಂಡು,

'ಒಳಕ್ಕೆ ಬನ್ನಿ ಮೆಷ್ಟೇ ! ಕುಳಿತುಕೊಳ್ಳಿ' ಎಂದು ಹೇಳಿದನು.

ಉಗ್ರಪ್ಪ ಒಳಕ್ಕೆ ಹೋಗಿ ಮೇಜಿನ ಎದುರಂಚಿನಲ್ಲಿ ರಂಗಣ್ಣನಿಗೆ ಎದುರಾಗಿ ನಿಂತುಕೊಂಡನು.

'ಕುಳಿತುಕೊಳ್ಳಿ. ಕುಳಿತುಕೊಂಡೇ ಮಾತನಾಡಿ ಉಗ್ರಪ್ಪ ನವರೇ !

'ಇಲ್ಲ ಸ್ವಾಮಿ! ನಾನು ಕುಳಿತು ಕೊಳ್ಳುವುದಿಲ್ಲ. ನಿಂತುಕೊಂಡೇ ನಾಲ್ಕು ಮಾತನ್ನು ಹೇಳಿ ಹೊರಟು ಹೋಗುತ್ತೇನೆ.'

'ಏನನ್ನು ಹೇಳಬೇಕೆಂದಿರುವಿರೋ ಅದನ್ನು ಸಮಾಧಾನದಿಂದಲೇ ಹೇಳಿ, ಕುಳಿತುಕೊಂಡು ಹೇಳಿದರೆ ಸಮಾಧಾನಚಿತ್ತವಿರುತ್ತದೆ.'

'ಈಗ ಸಮಾಧಾನಚಿತ್ತದಿಂದಲೇ ಬಂದಿದ್ದೇನೆ ಸ್ವಾಮಿ ! ಕೋಪ ತಾಪಗಳೇನೂ ಇಲ್ಲ !'

'ಒಳ್ಳೆಯದು ಮೇಷ್ಟೆ !'

'ಸ್ವಾಮಿ ! ತಮ್ಮನ್ನು ಮೆಚ್ಚಿ ಕೊಂಡೆ ! ತಮ್ಮ ಧೈರ್ಯವನ್ನು ಮೆಚ್ಚಿಕೊಂಡೆ ! ದೇಹಶಕ್ತಿ ಹಲವರಿಗೆ ಇರಬಹುದು. ಹೇಡಿಗಳಾಗಿದ್ದರೆ ಆ ದೇಹಶಕ್ತಿ ಕಾರ್ಯಗತವಾಗುವುದಿಲ್ಲ ಧೈರ್ಯದಿಂದಲೇ ಕಾರ್ಯಸಾಧನೆ ! ತಮ್ಮ ಧೈರವನ್ನು ಮೆಚ್ಚಿ ಕೊಂಡೆ ! ಭೇಷ್!'

'ನಿಮ್ಮನ್ನು ದಂಡಿಸಿದ್ದು ಧೈರ್ಯದ ವಿಚಾರವೆ ? ಬಡಮೇಷ್ಟುಗಳನ್ನು ದಂಡಿಸುವುದು ಹೇಡಿತನವೆಂದೇ ನಾನು ತಿಳಿದುಕೊಂಡಿದ್ದೇನೆ.'