ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೭೯

'ಹಾಗಲ್ಲ ಸ್ವಾಮಿ? ನಾನು ಪುಂಡ ! ಯಾರನ್ನೂ ಲಕ್ಷ್ಯ ಮಾಡತಕ್ಕವನಲ್ಲ. ಜೀವದ ಹಂಗು ಇಲ್ಲದವನು ! ಆದ್ದರಿಂದ ನನ್ನ ಮಾತಿಗೆ ಯಾರೂ ಬರುತ್ತಿರಲಿಲ್ಲ ; ಬರುವ ಧೈರವೇ ಅವರಿಗಿರುತ್ತಿರಲಿಲ್ಲ. ನನ್ನ ಆಕಾರವನ್ನು ನೋಡಿದರೇನೆ ಸಾಕು,- ಏನು ಉಗ್ರಪ್ಪನವರೇ ? ಎಂದು ಕುಶಲ ಪ್ರಶ್ನೆ ಮಾಡಿ ಅವರಾಗಿ ಮೊದಲೇ ನಮಸ್ಕಾರ ಮಾಡುತ್ತಿದ್ದರು ! ನಾನು ಅದೇ ಜೋರಿನಿಂದ ಧೂರ್ತನಾಗಿ ವರ್ತಿಸುತ್ತಿದ್ದೆ. ನನಗೆ ತಾವು ಪಾಠ ಕಲಿಸಿಬಿಟ್ಟಿರರಿ ! ನೀವೂ ಜೀವದ ಹಂಗಿಲ್ಲದವರು ಎಂದು ನನಗೆ ಮನವರಿಕೆಯಾಗಿ ಹೋಯಿತು. ಭೇಷ್ ! ಇದ್ದರೆ ಇಂಥ ಗಂಡು ಇನ್ ಸ್ಪೆಕ್ಟರು ಇರಬೇಕು ಎಂದು ಮೆಚ್ಚಿಕೊಂಡಿದ್ದೇನೆ ಸ್ವಾಮಿ ! ಆದರೆ ತಾವು ದುಡುಕಿ ನನಗೆ ಅನ್ಯಾಯ ಮಾಡಿದ್ದೀರಿ ! ಅದನ್ನು ತಿಳಿಸಬೇಕೆಂದು ನಾನು ಬಂದಿದ್ದೇನೆ.'

'ಮೇಷ್ಟೇ ! ನಾನು ಅನ್ಯಾಯ ಮಾಡಿದ್ದೇನೆಯೆ ? ಅನ್ಯಾಯವೆಂದು ತೋರಿಸಿಕೊಟ್ಟರೆ ಸಸ್ಪೆನ್ಷನ್ ಆರ್ಡರನ್ನು ಈ ಕ್ಷಣ ವಜಾ ಮಾಡಿ, ಈ ಅವಧಿಯನ್ನು ಪ್ರಿ ವಿಲೆಜ್ ರಜವನ್ನಾಗಿ ಬದಲಾಯಿಸಿ, ಈ ದಿನವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇನೆ.'

'ಪುನಃ ಕೆಲಸಕ್ಕೆ ಬರಬೇಕೆಂಬ ಆಶೆಯಿಂದ ಆ ಮಾತನ್ನು ನಾನು ಹೇಳಲಿಲ್ಲ ಸ್ವಾಮಿ ! ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಈ ಗುಲಾಮ ಗಿರಿಯನ್ನು ತಪ್ಪಿಸಿ ಬಿಟ್ಟರೆ ! ತಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.'

'ಸಸ್ಪೆನ್ಷನ್ ಆರ್ಡರನ್ನು ವಜಾ ಮಾಡಿದರೆ ?'

'ವಜಾ ಮಾಡಿದರೂ ನಾನು ಬರುವುದಿಲ್ಲ. ತಮ್ಮ ಕಾಲಿಗೆ ಬಿದ್ದು, ಕ್ಷಮಾಪಣೆ ಕೇಳಿಕೊಂಡು, ವಜಾಮಾಡಿಸಿಕೊಂಡೆನೆಂದು ಜನ ಆಡುತ್ತಾರೆ ಸ್ವಾಮಿ ! ಈಗ ಆಗಿರುವ ಅಪಮಾನದ ಜೊತೆಗೆ ಅದೊಂದು ಅಪಮಾನ ಹೆಚ್ಚಾಗಿ ಬರುತ್ತದೆ. ನರಮನುಷ್ಯರಿಗಾರಿಗೂ ಈ ತಲೆಯನ್ನು ಬಗ್ಗಿಸುವುದಿಲ್ಲವೆಂಬ ನನ್ನ ಶಪಥಕ್ಕೆ ಭಂಗ ಬಂದಂತಾಗುತ್ತದೆ. ಈ ಸಸ್ಪೆನ್ಷನ್ನಿನಿಂದ ತಮ್ಮ ಕೀರ್ತಿ ಜಗತ್ನಸಿದ್ಧವಾಯಿತು ! ನನ್ನ ಅಪಮಾನ ಲೋಕಪ್ರಚಾರವಾಯಿತು ! ತಾವೀಗ ಏನು ದುರಸ್ತು ಮಾಡಿದರೂ ಮೊದಲಿನ