ಪುಟ:ರಂಗಣ್ಣನ ಕನಸಿನ ದಿನಗಳು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೬

ಬೋರ್ಡು ಒರೆಸುವ ಬಟ್ಟೆ

ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನ ಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇ೦ಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಉಪಾಧ್ಯಾಯರ ತಿಳಿವಳಿಕೆ ಬಗ್ಗೆ ಸರ್ಕ್ಯುಲರುಗಳನ್ನು ರಂಗಣ್ಣ ಕಳುಹಿಸಿದನು. ಉಪಾಧ್ಯಾಯರೊಡನೆ ಏಗುವುದರಲ್ಲಿ, ಅವರಿಗೆ ತಿಳಿವಳಿಕೆ ಕೊಡುವುದು ದೊಡ್ಡ ತೊಂದರೆಯಾಗಿರಲಿಲ್ಲ. ಕೊಟ್ಟ ತಿಳಿವಳಿಕೆಯನ್ನು ಆಚರಣೆಗೆ ತರುವಂತೆ ಮಾಡುವುದೇ ಕಷ್ಟವಾಗಿದ್ದ ಕೆಲಸ. ಹಲವರು ಆ ಸರ್ಕ್ಯುಲರ್‌ಗಳನ್ನು ಓದುತ್ತಲೇ ಇರಲಿಲ್ಲ. ಕೆಲವರು ಓದಿದರೂ ಅವುಗಳನ್ನು ಎಲ್ಲಿಯೋ ಪೆಟ್ಟಿಗೆಯಲ್ಲಿ ತುರುಕಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಾಠಶಾಲೆಗಳಲ್ಲಿ ಮಾತ್ರ ಸರ್ಕ್ಯುಲರ್ ಗಳನ್ನು ಸರಿಯಾಗಿ ಜೋಡಿ ಸಿಟ್ಟು ಅವುಗಳಲ್ಲಿ ಕೊಟ್ಟಿರುವ ತಿಳಿವಳಿಕೆಯಂತೆ ನಡೆಯಲು ಪ್ರಯತ್ನ ಪಡುತ್ತಿದ್ದರು. ಉಳಿದ ಕಡೆಗಳಲ್ಲಿ ಅವುಗಳ ಕಡೆಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ.

ಒಂದು ದಿನ ಬೆಳಗ್ಗೆ ರಂಗಣ್ಣ ಬೈ ಸ್ಕಲ್ ಮೇಲೆ ಪಾಠ ಶಾಲೆಗಳ ಭೇಟಿಗೆಂದು ಹೊರಟನು. ಏಳೆಂಟು ಮೈಲಿಗಳ ದೂರ ಹೊರಟು ಎರಡು ಮೂರು ಪಾಠ ಶಾಲೆಗಳನ್ನು ನೋಡಿಕೊಂಡು ಒಳಭಾಗದ ಹಳ್ಳಿಗಳಿಗೆ ಹೋಗುವ ಕಾಡ ರಸ್ತೆಯಲ್ಲಿ ,ತಿರುಗಿದನು. ಎರಡು ಮೈಲಿ ಹೋದಮೇಲೆ ಸುದ್ದೇನಹಳ್ಳಿ ಸಿಕ್ಕಿತು. ಪಾಠಶಾಲೆಯ ಹತ್ತಿರ ಹೋಗಿ ಇಳಿದಾಗ ಬಾಗಿಲು ತೆರೆದಿತ್ತು. ಒಳಗೆ ಉಪಾಧ್ಯಾಯನೂ ಹುಡುಗರೂ ಇದ್ದರು. ಬಾಗಿಲ ಪಕ್ಕದಲ್ಲಿ ರಟ್ಟು ಕಾಗದದ ಮೇಲೆ' 'ಪಾಠ ಕಾಲದಲ್ಲಿ ಗ್ರಾಮಸ್ಥರು ಯಾರೂ ಅಪ್ಪಣೆಯಿಲ್ಲದೆ ಒಳಕ್ಕೆ ಬರಕೂಡದು ' ಎಂದು