ಪುಟ:ರಂಗಣ್ಣನ ಕನಸಿನ ದಿನಗಳು.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ನಮ್ಮ ದೇಶದ ಪ್ರಾಥಮಿಕ ವಿದ್ಯಾಭ್ಯಾಸ ಕ್ರಮದಲ್ಲಿರುವ ಕೆಲವು ಲೋಪದೋಷಗಳು, ಅವುಗಳನ್ನು ತಿದ್ದಿ ಕೊಳ್ಳ ಬಹುದಾದ ಮಾರ್ಗಗಳು, ಉಪಾಧ್ಯಾಯರ ಬಡತನದ ಜೀವನ, ಅವರ ಕಷ್ಟ ಕಾರ್ಪಣ್ಯಗಳು, ಅವರ ಶೀಲ ಸ್ವಭಾವಗಳು, ಸಾರ್ವಜನಿಕ ಮುಖಂಡರಲ್ಲಿ ಸ್ವಾರ್ಥಿಗಳು ನಿಸ್ಪ್ಯಾರ್ಥಿಗಳು, ಹಳ್ಳಿಯ ಜನ, ಕೆಲವು ಸರಿ ಸಾರಚಿತ್ರಗಳು ಮೊದಲಾದುವನ್ನೆಲ್ಲ ಈ ಕಥೆಯಲ್ಲಿ ಕಾಣಬಹುದಾಗಿದೆ. ಕಥೆಯಾದರೂ ಇದರಲ್ಲಿ ಒಂದು ನಿಷ್ಕರ್ಷೆಯಾದ ವಸ್ತುವಿಲ್ಲ. ಈ ಗ್ರಂಥ ಸಾಹಿತ್ಯದ ಯಾವ ಜಾತಿಗೆ ಸೇರಬಹುದು ಎಂಬ ವಿಚಾರವನ್ನು ಓದುಗರೂ ವಿಮರ್ಶಕರೂ ತೀರ್ಮಾನಮಾಡ ಬಹುದಾಗಿದೆ. ಒಟ್ಟಿನಲ್ಲಿ ಗ್ರಂಥ ಮನೋರಂಜಕವಾಗಿದೆಯೆಂದೂ ಬೋಧಪ್ರದವಾಗಿರವುದೆಂದೂ ನಾಲ್ಕು ಜನ ಹೇಳಿದರೆ ಅಷ್ಟೇ ಸಾಕು.

ಈಗ ಉಪಾಧ್ಯಾಯರ ಸಂಬಳಗಳನ್ನು ಹೆಚ್ಚಿಸಿದ್ದಾರೆ; ಪದಾರ್ಥಗಳ ಬೆಲೆ ಬಹಳವಾಗಿ ಏರಿರುವುದರಿಂದ ತುಟ್ಟಿ ಭತ್ಯವನ್ನೂ ಧಾರಾಳವಾಗಿ ಸರಕಾರದವರು ಕೊಡುತ್ತಿದಾರೆ. ಈ ಗ್ರಂಥದಲ್ಲಿ ಬರುವ ಸಂಗತಿಗಳು ಹತ್ತು ಹದಿನೈದು ವರ್ಷಗಳ ಹಿಂದಿನವು. ಆಗ ಉಪಾಧ್ಯಾಯರಿಗೆ, ೧೫ ರೂಪಾಯಿ, ೧೬ ರೂಪಾಯಿ, ೧೭-೧-೨೦ ರೂಪಾಯಿ ಎಂದು ಮುಂತಾಗಿ ಸಂಬಳಗಳಿದ್ದುವು. ಸಂಬಳ ಕಡಮೆಯಿದ್ದು ದರ ಜೊತೆಗೆ ಹತ್ತಾರು ವರ್ಷಗಳ ಕಾಲ ಸರ್ವಿಸ್ ಮಾಡಿದರೂ ಬಡತಿ ದೊರೆಯುತ್ತಿರಲಿಲ್ಲ. ಈಗ ಸಂಬಳಗಳು ಹೆಚ್ಚಿ, ತುಟ್ಟಿ ಭತ್ಯವೂ ದೊರೆಯುತ್ತಿದೆ. ಆದರೆ ಆರ್ಥಿಕ ಮುಗ್ಗಟ್ಟು ಬಲವಾಗಿರುವುದರಿಂದ, ಉಪಾಧ್ಯಾಯರ ಕಷ್ಟ ನಿವಾರಣೆಯಾಗಿಲ್ಲ ; ಅವರ ಸಂಸಾರ ನಿರ್ವಹಣೆ ಸುಲಭವಾಗಿಲ್ಲ. ಹಿಂದೆ ಇದ್ದಂತೆ ರೂಪಾಯಿಗೆ ಹದಿನಾರು ಇಪ್ಪತ್ತು ಸೇರು ರಾಗಿ, ರೂಪಾಯಿಗೆ ಆರು ಏಳು ಸೇರು ಅಕ್ಕಿ ದೊರೆಯುವಂತಾಗಿ, ತುಟ್ಟಿ ಭತ್ಯವೂ ಸೇರಿದ ಈಗಿನ ಹೆಚ್ಚಿನ ಸಂಬಳಗಳೇ ಮುಂದಕ್ಕೂ ಉಪಾಧ್ಯಾಯರಿಗೆ