ಪುಟ:ರಂಗಣ್ಣನ ಕನಸಿನ ದಿನಗಳು.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

iv

ನಿಗದಿಯಾಗಿ, ಸ್ಥಿತಿ ಸುಧಾರಿಸಿದರೆ ಆ ಬಡ ಉಪಾಧ್ಯಾಯರು ಸಂತೋಷದಿಂದ ತಮ್ಮ ಕರ್ತವ್ಯವನ್ನು ನೆರವೇರಿಸಿ ಯಾರು ಸುಖವಾಗಿ ಸಂಸಾರವನ್ನು ನಡಸಿಯಾರು. ಆದರೆ ಆ ರಾಮರಾಜ್ಯ ಯಾವಾಗ ಬರುವುದೊ ಗೊತ್ತಿಲ್ಲ.

ಪ್ರಾಥಮಿಕ ವಿದ್ಯಾಭ್ಯಾಸದ ಅಸಮರ್ಪಕ ಸ್ಥಿತಿಯನ್ನು ಸರಕಾರದವರೂ ಕಂಡುಕೊಂಡಿದ್ದಾರೆ, ಹಿಂದೆ ದ್ರವ್ಯಾಭಾವದಿಂದ ಪಾಠ ಶಾಲೆಗಳ ಸಂಖ್ಯೆ ತಕ್ಕಷ್ಟು ಇರಲಿಲ್ಲ ; ಮತ್ತು ಇನ್ಸ್ಪೆಕ್ಟರುಗಳ ಸಂಖ್ಯೆಯಲ್ಲಿ ಕಾರ್ಪಣ್ಯ ವಿದ್ದು ಒಬ್ಬೊಬ್ಬರಿಗೆ ನೂರೈವತ್ತರಿಂದ ಇನ್ನೂರು, ಇನ್ನೂ ರೈವತ್ತು ಸ್ಕೂಲುಗಳ ಮೇಲ್ವಿಚಾರಣೆ ಮತ್ತು ತನಿಖೆ ತಲೆಗೆ ಕಟ್ಟಿದ್ದು ವು. ಈಗ ರೇಂಜುಗಳ ಸಂಖ್ಯೆಯನ್ನು ಬಹಳವಾಗಿ ಹೆಚ್ಚಿಸಿದ್ದಾರೆ, ವರ್ಷ ವರ್ಷವೂ ಹೆಚ್ಚಿಸುತ್ತಲೇ ಇದ್ದಾರೆ ; ಬಹುಮಟ್ಟಿಗೆ ಒಬ್ಬ ಇನ್ ಸ್ಪೆಕ್ಟರಿಗೆ ನೂರರೊಳಗೆ ಪಾಠಶಾಲೆಗಳಿವೆ; ಹಲವು ಕಡೆಗಳಲ್ಲಿ ಬಲಾತ್ಕಾರ ವಿದ್ಯಾಭ್ಯಾಸವನ್ನೂ ಜಾರಿಗೆ ತಂದಿದ್ದಾರೆ ; ಅಲ್ಲೆಲ್ಲ ಒಬ್ಬ ಇನ್ ಸ್ಪೆಕ್ಟರಿಗೆ ಮುವ್ವತ್ತರಿಂದ ಐವತ್ತರ ವರೆಗೆ ಪಾಠ ಶಾಲೆಗಳು ಸೇರಿವೆ.ಈಗ ಪ್ರಜಾ ಸರಕಾರ ಪೀಠೋಪಸ್ಕರಗಳಿಗಾಗಿಯೂ ಕಟ್ಟಡಗಳಿಗಾಗಿಯೂ ಹತ್ತಾರು ಲಕ್ಷ ರೂಪಾಯಿಗಳನ್ನು ಒದಗಿಸುತ್ತಿದೆ. ಹಿಂದೆ ವಿದ್ಯಾಭ್ಯಾಸಕ್ಕಾಗಿ ಒಟ್ಟು ಅರುವತ್ತು ಎಪ್ಪತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತಿದ್ದರು ; ಈಗ ಸುಮಾರು ಮೂರು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡುತ್ತಿದಾರೆ. ಆದ್ದರಿಂದ ಸ್ಥಿತಿ ಮಾರ್ಪಾಟಾಗುತ್ತಲಿದೆ. ರಾಜಕೀಯ ಕಾರಣಗಳಿಂದ ಜನರಲ್ಲಿ ಜಾಗೃತಿಯುಂಟಾಗುತ್ತಲಿದೆ. ಹಳ್ಳಿಗಳಲ್ಲಿ ನಾವು ನಿರೀಕ್ಷಿಸುವಷ್ಟಾಗಲಿ, ಪತ್ರಿಕೆಗಳಲ್ಲಿ ಪ್ರಕಟನೆ ಮಾಡುತ್ತಿರುವಷ್ಟಾಗಲಿ, ವಿದ್ಯಾ ವಿಚಾರದಲ್ಲಿ ಶ್ರದ್ಧಾಸಕ್ತಿಗಳು ಬೆಳೆಯದೇ ಹೋಗಿರಬಹುದು ಆದರೆ ಕಾಲಕ್ರಮದಲ್ಲಿ ತಾತ್ಸಾರ ಜಾಡ್ಯ ತೊಲಗಿ ಹಳ್ಳಿ ಯವರೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾವಂತರಾಗುತ್ತಾರೆಂದು ನಾವು ಆಶಿಸಬಹುದು.

ಪಾಠಶಾಲೆಗಳ ಸಂಖ್ಯೆ ಹೆಚ್ಚಬಹುದು ; ಕಟ್ಟಡಗಳು ಸಾವಿರಾರು ಸಿದ್ಧವಾಗಬಹುದು ; ಪೀಠೋಪಸ್ಕರಗಳೂ, ಪಾಠೋಪಕರಣಗಳೂ