ಪುಟ:ರಘುಕುಲ ಚರಿತಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾರದಾಮ್ಯಾಯ್ಯನಮಃ. ರಘುಕುವ ಚರಿತಂ [ಎರಡನೆಯ ಭಾಗ) ೮ ನವಮಾಧ್ಯಾಯಂ, ಇ wwwmmm ಸೂಚನೆ | ಈಗೈದೇರಂ ಬನದೊಳ್ | ಸುರು ಮುನಿವರ್ ನಾತ್ಮ ಜಾತನ ನಿಂದಂ | ಮಾರಿಸಿ ಕಪಿಸಲ್ ಭರದಿಂ | ಮಾರಯಂ ಮರುಗಿ ಸೇರ್ದ ನಮುವಾ ಪುರಮಂ | ಅಜಮಹಾರಾಜನು ಕಿರಿ ಶೇಷನಾದನು. ಬಳಿಕ - ನಿಯಮ ಪರರೊಳಗೂ, ರಕಕರೊಳಗೂ ಮೊದಲನೆಯವನೆನಿಸಿಕೊಂಡು, ಮಹಾ ರಥನೂ ಆದ ದಶರಥನು - ನೇಮದಿಂದ ಜಿತೇಂದ್ರಿಯನಾಗಿ, ತಂದೆ ಯಿಂದ ಬಂದ ಉತ್ತರ ಕೋಸಲ ದೇಶಗಳನ್ನು ಆಳಲಿಕ್ಕೆ ಆರಂಭಿಸಿ ದನು. ಹೀಗೆ ಕುಲಕ ಮಾಗತವಾಗಿ, ಪ್ರಜೆಗಳಿಂದೊಡಗೂಡಿರುವ ಜನಪದವನ್ನು ವಿಧಿಪ್ರಕಾರ ಪಡೆದು, ರಾಜನೀತಿಯನ್ನನುಸರಿಸಿ ಪಾಲಿ ಸುತ ಬರಲು, ಪುರ ಜನಪದ ಜನರೆಲ್ಲರೂ ಆತನನ್ನು ಬಹಳವಾಗಿ ಪ್ರೀತಿ ಸುತ ಬಂದರು, ಕುಮಾರಸ್ವಾಮಿಯಂತೆ ದಶರಥನು ಬಹು ತೇಜಸ್ವಿ ಯಾದನು. ಆಗ - ಸಮಯಾನುಸಾರವಾಗಿ ಮಳೆಗರೆವ ಮಹೇಂದ್ರ ನೊಬ್ಬ, ಮನುಮಹಾರಾಜನ ಮಾರ್ಗವನ್ನವಲಂಬಿಸಿರುವ ಅರ್ಥಪತಿ ಯಾದ ದಶರಥನೊಬ್ಬ, ಈ ಇಬ್ಬರನ್ನು ಮಾತ್ರವೇ, ವಿದ್ವಾಂಸರು -