ಪುಟ:ರಘುಕುಲ ಚರಿತಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ರಘುಕುಲಚರಿತಂ. ೯ ಹಾಡುಗಾರಿಕೆಯಲ್ಲಿಯೇ ಮನಸ್ಸನ್ನಿಟ್ಟು ಕೇಳಿ, ಕಣ್ಣೀರನ್ನು ತಂದು ಕೊಳ್ಳುತಲಿದ್ದಿತು, ಅದರಿಂದಲೇ ಮುಂಜಾನೆಯೊಳಗೆ ಮಂಜ ಸುರಿಯುತ ಲಿರುವಲ್ಲಿ ಗಾಳಿಯಿಲ್ಲದ ವನಭೂಮಿಯು ಹೇಗೋ ಹಾಗೆ ಕಾಣಬಂದಿತ್ತು, ಮುತ್ತು - ಆತರಣಿ ಕುಲಾಮನಿಗೂ, ಆ ತರಳರಿಗೂ ವಯೋ ವೇಷಗ. ಳಲ್ಲಿ ಮಾತ್ರವೇ ಭೇದವನ್ನೊಳಗೊಂಡಿರುವ ಹೋಲಿಕೆಯನ್ನು ಕಂಡು ಸಭಾಜನರೆಲ್ಲರೂ ರೆಪ್ಪೆ ಬಡಿಯದೆಯ, ಅಲುಗದೆಯೂ ಕುಳಿತಿದ್ದರು, ಆ ಯಜ್ಞಶಾಲೆಯಲ್ಲಿ ನೆರದಿದ್ದ ಜನರು-ಆ ಹುಡುಗರ ಜಾಣತನಕ್ಕಿಂತಲೂ, ಪ್ರೀತಿ ಪೂರ್ವಕವಾಗಿ ಕೊಡುತಲಿರುವ ದಾನಗಳಲ್ಲಿ ರಾಮನ ನಿಸ್ಸಹತ್ಯ ದಿಂದ ಹೇರಳವಾಗಿ ಅಚ್ಚರಿಗೊಂಡರು, ರಾಮನು-ಆ ಬಾಲಕರನ್ನು ನೋಡಿ, ( ಎಲ್ಲ ಮಕ್ಕಳಿರಾ ! ನಿಮಗೆ ಈ ಗೀತವಿದ್ದೆಯನ್ನು ಹೇಳಿ ಕಲಿಸಿ ಕೊಟ್ಟವರಾರು ? ಮತ್ತು ಈ ಕಾವ್ಯವನ್ನು ರಚಿಸಿದ ಕವಿಯು ಯಾರು ? ,, ಎಂದು ಕೇಳಲು, ಕುಶಲವರು - ತನಗೆ ಶಿಕ್ಷಕನೂ, ಕಾವೃಕರನೂ, ವಾಲ್ಮೀಕಿಮುನಿಯೆ ಎಂದು ಅರಿಕೆ ಮಾಡಿದರು. ರಾಮಚಂದ್ರನು - ತಮ್ಮಂದಿರಿಂದೊಡಗೂಡಿ, ವಾಲ್ಮೀಕಿಮುನಿಯ ಸನ್ನಿಧಿಗೆ ತೆರಳ, ತನ್ನ ದೇಹವನ್ನು ಮಾತ್ರ ಉಳಿಸಿಕೊಂಡು, ರಾಜ್ಯವ ನೆಲ್ಲ ಆತನಿಗೆ ಸಮರ್ಪಿಸಿದನು, ಆಗಲಾ ದಯಾಳುವಾದ ಪ್ರಾಚೇತ ಸನು - ಈ ತರಳರು ನಿನ್ನ ಆತ್ಮಜರೆಂದೂ, ಸೀತೆಯನ್ನು ಸ್ವೀಕರಿಸಬೇ ಕೆಂದೂ ರಾಮನನ್ನು ಯಾಚಿಸಿದನು, ಅದಕ್ಕೆ ರಾಘವನು - ಹರ್ಷವಿ ಪಾದಗಳಿಂದೊಡಗೂಡಿ, ಎಲೈ ತಂದೆಯೇ ! ನಮ್ಮ ಕಣ್ಣೆದಿರಿಗೆ ನಡೆದ ಅಗ್ನಿ ಪ್ರವೇಶದಿಂದ ನಿನ್ನ ಸೊಸೆಯಾದ ಈ ನೀತಿಯು ಪರಿಶುದ್ಧಳೆಂದು ನಮಗೆ ನಂಬುಗೆಯುಂಟು, ಆದರೆ - ರಕ್ಕಸನು ನಡೆಸಿದ ದುರುಳತನದಿಂದ ಇಲ್ಲಿನ ಪ್ರಜೆಗಳು ಅದನ್ನು ನಂಬಲಿಲ್ಲ ಎಂದನು, ಮತ್ತು ಈ ಜಾನ ಕಿಯು ಈಗಲೂ ತನ್ನ ಒಳ್ಳೆಯ ನಡತೆಯ ವಿಷಯವಾಗಿ ಈ ಪ್ರಜೆಗಳಿಗೆ ನಂಬುಗೆಯನ್ನುಂಟುಮಾಡಲಿ, ಬಳಿಕ ನಾನು~ ಪುತ್ರವತಿಯಾದ ಈ ಸೀತೆ ಯನ್ನು ನಿನ್ನ ಆಜ್ಞೆಯಿಂದ ಪರಿಗ್ರಹಿಸುವೆನು ಎಂದು ಬಿನ್ನವಿಸಿದನು. ರಾಮನಿಂತು ಪ್ರತಿಜ್ಞೆಯನ್ನು ಮಾಡಲು, ವಾಲ್ಮೀಕಿಯು - ತನ್ನ ನಿಯ ಮಗಳಿಂದ ತಪಸ್ಸಿದ್ಧಿಯನ್ನು ಬರಮಾಡುವಹಾಗೆ, ಶಿಷ್ಕರಮೂಲಕ