ಪುಟ:ರಘುಕುಲ ಚರಿತಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕಾ ರ ದಾ , ತಂತಮ್ಮ ಉದ್ಯೋಗದಲ್ಲಿರುವ ಜನರ ಬಳಲಿಕೆಯನ್ನು ಪರಿಹರಿಸತಕ್ಕವ ರನ್ನಾಗಿ ಹೇಳುತಲಿದ್ದ ರು. ಶವಪರನಾಗಿ, ಅಮರತೇಜಸ್ಸನ್ನು ಪಡೆ ದಿದ್ದ ಅಜನನ್ನನು ರಾಜನಾಗಿರುವಲ್ಲಿ - ಆ ನಾಡಿನೊಳಗೆಲ್ಲಿಯ ರೋ ಗದ ಸುಳಿವೇ ಇರಲಿಲ್ಲ, ಹಗೆಗಳ ಹಾವಳಿಯ ಹುಟ್ಟೆ ಅಡಗಿದ್ದಿತು. ಧರೆಯು ಉರ್ವರೆಯೆನಿಸಿಕೊಂಡಿದ್ದಿತು. ಹಿಂದೆ ದಶದಿಗಂತಗಳನ್ನೂ ಜಯಿಸಿದ್ದ ರಘುರಾಜನಿಂದ ಧರೆಯ ನಿರಿಯು ಮೆರೆಯುತಲಿದ್ದಿ ತನ್ನೈ ? ಬಳಿಕ ಆ ರಘುನಂದನನಿಂದ ಮತ್ತಷ್ಟು ಮೇಲೆ ಯನ್ನೆ ದಿತು. ಈಗ ಆ ಮಹಿಯೇ ಅಹೀನಪರಾಕ್ರಮನಾದ ದಶರಥಮಹಾರಾಜನಿಂದ ಮರಳಿ ಹೇರಳವಾದ ಐಸಿರಿಯನ್ನು ಪಡೆಯದೆ ಇರಲಿಲ್ಲ. ವಸುಮತೀ ಶನಾದ ದಶರಥನು - ಪ್ರಜೆಗಳಲ್ಲಿ ಸಮವರಿಯಾಗಿ, ವಸುವೃಷ್ಟಿಯನ್ನು ವಿನಿಯೋಗಿಸುತಲಿದ್ದು ದರಿಂದಲೂ, ದುರುಳರನ್ನು ದಂಡಿಸುತ ಬಂದುದ ರಿಂದಲೂ, ವೈಶ್ರವಣ ವರುಣ ವೈವಸ್ವತರನ್ನು ಮಾರಿದ್ದನು, ಬೇಟೆಯಾ ಟವು - ಏಳಿಗೆಗಾಗಿ ಯತ್ನಿಸುತಲಿರುವ ಆ ಇಳೆಯಾಣ್ಮನನ್ನು ಸೆಳೆಯ ಲಿಲ್ಲ, ದುರೋದರವು ಅಪಹರಿಸಲಿಲ್ಲ, ಶತಿಯಂತೆಸೆವ ಮಧುವು ಆಕ ರ್ಪಿಸಲಿಲ್ಲ, ನವಯವನರಾದ ಯುವತಿಯರೂ ವಶಪಡಿಸಿಕೊಳ್ಳಲಿಲ್ಲ. ಆ ವಿಭುವು - ವೈಭವದಿಂದಿರುವಾಗ, ದೇವೇಂದ್ರನಲ್ಲಿಯ ದೈನ್ಯವನ್ನು ತೋರಲಿಲ್ಲ, ಪಹಾಸ ಕಥೆಯಲ್ಲಿಯೂ ಅನ್ಯತವನ್ನಾಡಲಿಲ್ಲ, ದೋಷ ರಹಿತನಾದ ಆ ರಾಜರ್ಸಿಯು - ದೋಪಿಗಳಲ್ಲಿಯೂ ಪರುಪ್ರವಚನವನ್ನು ನುಡಿಯಲಿಲ್ಲ, ಆ ರಘುಧುರಂಧರನು - ಅವಿಧೇಯರಾದ ದುರ್ದೃದಯರಿಗೆ ಅಯೋಹೃದಯನಾಗಿಯೂ, ವಿಧೇಯರಾಗಿ ಇದಿರಿಸದಿರುವ ಸುಹೃದಯ ರಿಗೆ ಸಹೃದಯನಾಗಿಯೂ ಇರುತ್ತಿದ್ದನು, ಈ ಕಾರಣದಿಂದಲೇ ಆಗವಸುಧಾಧಿಪರು ಉದಯಾಸ್ತಮಯಗಳೆರಡನ್ನೂ ಕ್ರಮವಾಗಿ ಪಡೆಯುತ ಲಿದ್ದರು, ಹೆದೆಯನೇರಿಸಿದ ಬಿಲ್ಲನ್ನು ಹಿಡಿದು ಆ ಅಜನಂದನನು - ತಾನು ದಶರಥನಾದರೂ ಏಕರಥದಿಂದಲೇ ಸಾಗರದಿಂದ ಸುತ್ತಲ್ಪಟ್ಟಿರುವ ಮೇದಿ ನಿಯನ್ನೆಲ್ಲ ಜಯಿಸಿದನು, ತೀವ್ರಜವದ ಗಜವಾಜಿ ಮೊದಲಾದವುಗಳ ರಾಜೆಯು -ಆತನ ಜಯವನ್ನು ಮಾತ್ರ ಉದ್ಯೋಪಿಸತಕ್ಕುದಾಗಿದ್ದಿತು. ಇದಿರಿಲ್ಲದ ರಥದಿಂದ ಪೃಥುವಿಯನ್ನೆಲ್ಲ ಜಯಿಸಿ, ಧನದನ ಸಂಪದವನ್ನು