ಪುಟ:ರಘುಕುಲ ಚರಿತಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ರಘುಕುಲ ಚರಿತಂ • *-+

  1. - *#

ಪಡೆದ ಧನುರ್ಧರನಾದ ಆ ಧರಾನಾಥನಿಗೆ ಮೇಘದಂತೆ ಗರ್ಜಿಸುವ ಉದಧಿಯೇ ಜಯದುಂದುಭಿಯ ಕೆಲಸವನ್ನು ಮಾಡತಕ್ಕುದಾಗಿದ್ದಿ ತು, ಶತಮಖನು - ಶತಕೋಟಿಯಾದ ಕುಲಿಶದಿಂದ ಶೈಲಪಕ್ಷವನ್ನೆಲ್ಲ ಶಾಂತಿ ಗೊಳಿಸಿದಹಾಗೆ, ಶತಪತ್ರಮುಖನಾದ ದಶರಥನ-ಶರವರ್ಷವನ್ನು ನರ್ಮಿ ಸುತ ಟಂಕಾರದಿಂದೊಡಗೂಡಿದ್ದ ಶರಾಸನದಿಂದ ಶತ್ರು ಪಕ್ಷವನ್ನು ಶಮ ನಮಾಡಿದನು, ದಶರಥನ ಚರಣನಖಮಯಖಗಳಿಂದ ಹೆಚ್ಚಿದ ಮುಕುಟ ರತ್ನಮರೀಚೆಗಳಿಂದ ನರಪತಿಗಳು - ಸುರರು ಅಖಂಡಿತ ಪರುಷನಾದ ಶತಕತುವಿನ ಅಡಿದಾವರೆಗಳನ್ನು ಹೇಗೋಹಾಗೆ, ಚರಣನ೪ನಗಳನ್ನು ಸ್ಪರ್ಶಮಾಡುತಲಿದ್ದ ರು. - ಇಂತಪ್ಪ ದಶರಥನೊಂದುವೇಳೆ ದಿಗ್ವಿಜಯಕ್ಕೆ ಹೊರಟು, ಕಡಲ ತಡಿಯವರೆಗಿರುವ ನಾಡುಗಳೆಡೆಯರನ್ನೆಲ್ಲ ಸದೆಬಡಿದನು, ಆಯಾಯ ದೇಶಗಳ ಸಚಿವರರು - ಎಳೆಯವರಾದ ಆಯಾ ರಾಜಕುಮಾರರಿಂದ ಅಂಜಲಿಗಳನ್ನು ಒಪ್ಪಿಸಿದರು, ಅರಸು - ಮುಂದಲೆಯ ಮಂಗಳಚ ರ್ಣವಿಲ್ಲದ, ಆ ಹಸುಳೆಗಳ ತಾಯಿಯರಲ್ಲಿ ಧದಿಂದ ದಯೆತೋರಿ, ಮರಳಿ ಹಿಂಸಿಸದೆ, ಸಮುದ್ರತೀತಿಗಳಿಂದ ಹಿಂದಿರುಗಿದನು, ಇದಿರಿಗೆ ಕೊಡೆಹಿಡಿಯುವ ಅರನಿಲ್ಲದಂತೆಸಗಿ, ದ್ವಾದಶರಾಜಮಂಡಲಾಧಿಪತ್ಯವನ್ನು ಪಡೆದರೂ, cc ಸಿರಿಯು ಸಂದನ್ನು ಕಂಡು ಸರಿಯುವಳು ,, ಎಂದು ಅರಿತು, ಹಿತಾಹಿತರಾದ ಸುಜನದುರ್ಜನರಲ್ಲಿ ಚಂದ್ರಸರಂತೆ ಬೆಳ ಗುತ್ತಾ, ಅನ್ಯಾಯಾಲಸ್ತಾದಿಗಳಿಗಾಸ್ಪದವಿಲ್ಲದೆ ಎಚ್ಚರದಿಂದಿರುತ್ತಿದ್ದನು, ಪತಿವ್ರತೆಯಾಗಿದ್ದ ಕಮಲಹಸ್ತೆಯಾದ ಕಮಲೆಯು - ಪುರಾಣಪುರುಷ ನಾದ ವಿಷ್ಣುವನ್ನೂ, ಆತನ ಅಂಶದಿಂದ ಕಕುತ್ಸ್ಥ ಕುಲಕುಮಾರ ನಾಗಿ, ಯಾಚಕರಲ್ಲಿ ವಿಮುಖರಾಗದಿರುವ ದಶರಥನನ್ನೂ ಹೊತ್ತು, ಮತ್ತಾವ ಅರಸನನ್ನೂ ಸೇವಿಸಲಿಲ್ಲ. ಹೀಗಿರುವಲ್ಲಿ – ಪತಿಯನ್ನು ದೇವರನ್ನಾಗಿಯೇ ಭಾವಿಸುವವರೆ ನಿಸಿದ್ದ, ಕೋಸಲ, ಮಗದ, ಕೇಕಯ ದೇಶಾಧೀಶರ ಕುವರಿಯರು - ಶೈಲಸುತೆಯರಾದ ಸರಿತ್ತುಗಳು - ಸಾಗರವನ್ನು ಹೇಗೋಹಾಗೆ, ಶತ್ರುಗಳನ್ನ ಡಗಿಸುವ ಶರಾಸನವನ್ನಾ೦ತಿರುವ ದಶರಥನನ್ನು ದಯಿತನನ್ನಾಗಿ