ಪುಟ:ರಘುಕುಲ ಚರಿತಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧y ಶ್ರೀ ಶಾ ರ ದಾ. [೧೭ ಕುಮುದ್ದತಿಯು, ಲೋಕಕ್ಕೆ ಆಹ್ಲಾದಕರನಾಗಿಯೂ, ಕುಮುದಪುಷ್ಪ ಗಳಿಗೆ ಆನಂದದಾಯಕನಾಗಿಯೂ, ಇರುವ ಚಂದ್ರನನ್ನು ಬೆಳ್ತಂಗಳು ಕೂಡಿರುವಂತೆ, ಕುಶನನ್ನು ಹಿಂಬಾಲಿಸಿ ತಾನೂ ಸ್ಪಲೋಕಕ್ಕೆ ಹೋಗಿ ರಲು, ಕುಶನು ಯುದ್ಧದಲ್ಲಿ ಜಯಶಾಲಿಯಾದುದರಿಂದ, ದೇವೇಂದ್ರನ ಅರ್ಧ ಸಿಂಹಾಸನವನ್ನು ಪಡೆದನು. ಕುಮುದ್ವತಿಯು ಇಂದ್ರಪತ್ನಿಯಾದ ಕಚೀ ದೇವಿಯ ಸಖಿಯಾಗಿ ಪಾರಿಜಾತಾದಿ ಕಲ್ಪವೃಕ್ಷಗಳಲ್ಲಿ ಶಚಿಯಂತೆ ತಾನೂ ಭಾಗಕ್ಕೆ ಅರ್ಹಳಾದಳು, ಕುಶನ ಮಂತ್ರಿಗಳು - ಬಹುಕಾಲವಾದರೂ ಯುದ್ಧಾರ್ಥವಾಗಿ ಸ್ವರ್ಗಕ್ಕೆ ಹೋಗಿರುವ ತನ್ನ ರಾಜರಪತಿಗಳು ಬಾರ ದೆಹೋದುದನ್ನು ಕಂಡು, ಕುಶನು ಮೊದಲೆ ಅಪ್ಪಣೆ ಮಾಡಿದ್ದಂತೆ ಆತನ ಪುತ್ರನಾದ ಅತಿಥಿಯನ್ನು ಪಟ್ಟಾಭಿಷಿಕ್ತನನ್ನಾಗಿಮಾಡಿ ರಾಜ್ಯದಲ್ಲಿ ನಿಲ್ಲಿಸಿದರು. ಪಟ್ಟಾಭಿಷೆಕ ಮಂಟಪವನ್ನು ಕಟ್ಟಿಸುವುದಕ್ಕಾಗಿ ಶಿಲ್ಪ ಶಾಸ್ತ್ರ ನಿಪುಣರನ್ನು ಕರೆಯಿಸಿ ಮಂತ್ರಿಗಳು ಆಜ್ಞೆ ಹಾಡಲು, ಅವರು ನಾಲ್ಕು ದಿವ್ಯಸ್ತಂಭಗಳಿಂದಲೂ, ದೊಡ್ಡದಾದಜಗುಲಿಯಿಂದಲೂ, ರಮ್ಮ ವಾಗಿರುವ ಭವಮಂಟಪವನ್ನು ನೂತನರೀತಿಯಿಂದ ನಿರಿಸಿದರು, ಆಭವ ಮಂಟಪದಲ್ಲಿರುವ ವೇದಿಕೆಯಲ್ಲಿ ಭದ್ರವೀಠದಮೇಲೆ ಅತಿಥಿಯನ್ನು ಕುಳ್ಳಿ ರಿಸಿ ಸುವಣ್ಣ ಕುಂಭಗಳಲ್ಲಿ ತರಿಸಿರುವ ತೀರ್ಥೋದಕಗಳಿಂದ ಮಂತ್ರಿಗಳ ಲ್ಲರೂ ಅಭಿಷೇಕಮಾಡಿದರು. ಆ ಕಾಲದಲ್ಲಿ ಮೃದುಮಧುರ ಗಂಭೀರವಾಗಿ ಮೊಳಗುತ್ತಿದ್ದ ಪುಸ್ಮರವೇ ಮೊದಲಾದ ಶುಭವಾದ್ಯಗಳು ಅತಿಥಿಗೆ ಮುಂದೆ ಶುಭಪರಂಪರೆಗಳನ್ನು ಸೂಚಿಸುವಂತಿದ್ದುವು, ಗರಿಕೆ, ಯವಧಾನದ ಮೊಳಕೆ, ಅರಳಿಯ ತೊಗಟೆ, ಎಳೆಯಚಿಗುರು, ಇಪ್ಪೆಯಹೂ, ಕಮಲ ಗಳು, ಮೊದಲಾದವುಗಳಿಂದ, ಜಾತಿವೃದ್ಧರು ರಕ್ಷಾರ್ಥವಾಗಿಯ, ಮಂ ಗಳಾರ್ಥವಾಗಿಯೂ ಆರತಿಗಳನ್ನೆತ್ತಿದರು.” ಪುರೋಹಿತರೇ ಮೊದಲಾದ ಬ್ರಾಹ್ಮಣರು- ಜಯಶೀಲಗಳಾದ, ಅಥರ್ವಣಮಂತ್ರಗಳಿಂದ ಆ ಜಯಶೀಲ ನಾದ ಅತಿಥಿಗೆ ಮೊದಲು ಅಭಿಷೇಕವನ್ನು ಮಾಡಿದರು, ಅತಿಥಿಯ ತಲೆಯ ಮೇಲೆ ಸುರಿಯುತ್ತಿರುವ ಅಭಿಷೇಕ ಜಲರಾಶಿಯು- ತ್ರಿಪುರಸಂಹಾರಿ ಯಾದ ಪರಮೇಶ್ವರನ ಮಸ್ತಕದಲ್ಲಿರುವ ಗಂಗಾಪ್ರವಾಹದಂತೆ ಕಂಗೊಳ ಸುತ್ತಿದ್ದಿತು, ಆಗ ಸುತಿಪಾಠಕರು- ಬಿರುದಾವಳಿಗಳೊಡನೆ ಹೊಗಳುತ್ತಿ