ಪುಟ:ರಘುಕುಲ ಚರಿತಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ, ೧ರ್n ತಲು, ವರ್ಷಾಕಾಲದಲ್ಲಿ ವಿಜೃಂಭಿಸುತ್ತಿರುವ ಮೇಘಮಂಡಲವನ್ನು ನೋಡಿ ಚಾತಕಪಕ್ಷಿಗಳು ಅಭಿನಂದಿಸುವಂತೆ, ಎಲ್ಲರ ನಿರೀಕ್ಷಣೆಗೂ ರಾಜಪುತ್ರನು ಪುತ್ರನಾಗಿದ್ದನು. ದಿವ್ಯಮಂತ್ರ ಪೂತಗಳಾದ ಉದಕಗ ೪ಂಗ ಅಭಿಷಿಕ್ತನಾದ ಅತಿಥಿಯ ತೇಜಸ್ಸು, ಮಳೆಯು ಸುರಿಯುತ್ತಿರು ವಾಗ ಮಿಂಚು ಹೆಚ್ಚಾಗಿ ಹುಟ್ಟಿ ಹೊಳೆಯುವಂತೆ ಮತ್ತಷ್ಟು ಅಭಿವೃದ್ಧಿ ಯನ್ನು ಹೊಂದುತ್ತಿತ್ತು. ಪಟ್ಟಾಭಿಷೇಕವಾದಮೇಲೆ ಬಹುಮಂದಿ ಗೃಹ ಸ್ಥಾಶ್ರಮಿಗಳಿಗೆ, ಆವರು ಬೇಕಾದಷ್ಟು ದಾನ ದಕ್ಷಿಣೆಗಳಿಂದ ಕೂಡಿದ ಯಜ್ಞವನ್ನು ಮಾಡುವುದಕ್ಕೆ ಎಷ್ಟು ಹಣವು ಬೇಕಾಗುತ್ತದೆಯೋ ಅಷ್ಟು ದ್ರವ್ಯವನ್ನೂ ದಾನಮಾಡಿದನು. ಆಗ ಬ್ರಾಹ್ಮಣರು ಮಾಡಿದ ಆಶೀ ರ್ವಾದಗಳು ತತ್ಕಾಲ ಫಲಕಾರಿಗಳಾದುದರಿಂದ ಈ ಅತಿಥಿಯ ಜನ್ಮಾಂತರ ಪುಣ್ಣವಿಶೇಷಗಳಿಂದ ಉಂಟಾದ ರಾಜ್‌ಲಾಭ ಮೊದಲಾದ ಫಲಗಳನ್ನು ತಮ್ಮ ಮಹಿಮೆಯಿಂದ ತಿರಸ್ಕರಿಸುವಂತಿದ್ದವು. ಆ ಕಾಲದಲ್ಲಿ ಅಥಿತಿಯು ಸಂತೋಷ ಸೂತನಾರ್ಥವಾಗಿ ಕಾರಾಗೃಹದಲ್ಲಿ ನಿರ್ಬಂಧದಲ್ಲಿದ್ದವರನ್ನೆಲ್ಲಾ ಬಿಡಿಸಿದನು. ಮರಣದಂಡನೆಗೆ ಅರ್ಹರಾಗಿದ್ದವರನ್ನು ಮನ್ನಿಸಿ ಬಿಟ್ಟು ಬಿಟ್ಟನು, ಭಾರವನ್ನು ಹೆತ್ತು ಜೀವಿಸುತ್ತಿದ್ದ ಎತ್ತು ಮೊದಲಾದ ಪ್ರಾಣಿಗಳು ಭಾರವನ್ನು ಹೊರುವುದನ್ನು ತಪ್ಪಿಸಿದನು, ಕರುಗಳಿಗೆ ತೃಪ್ತಿ ಯಾಗಲೆಂದು ಹಸುಗಳಲ್ಲಿ ಹಾಲನ್ನು ಕರೆಯದಂತೆ ಬಿಡಿಸಿದನು, ಅಂತಃ ಪುರದಲ್ಲಿ ಕ್ರೀಡಾರ್ಥವಾಗಿ ಪಂಜರದಲ್ಲಿಟ್ಟುಕೊಂಡಿದ್ದ ಶುಕಶಾರಿಕಾದಿ ಪಕ್ಷಿಗಳನ್ನು ಕೂಡ ಸ್ಪೇಚ್ಛೆಯಾಗಿ ಹಾರಾಡುವಂತೆ ಬಿಡಲು ಅಪ್ಪಣೆಮಾಡಿ ದನು, ಅವು ಬಂಧಮೋಚನೆಯನ್ನು ಪಡೆದು ಮನಬಂದೆಡೆಗಳಲ್ಲಿ ಸಂಚರಿ ಸುತ್ತಿದ್ದವು. ಬಳಿಕ ಅತಿಥಿಯು ತನ್ನ ಪ್ರಾಸಾದದ ಒಂದು ಭಾಗದಲ್ಲಿದ್ದ ದಂತದ ಪೀಠದಮೇಲೆ ಅಲಂಕಾರಮಾಡಿಸಿಕೊಳ್ಳುವುದಕ್ಕಾಗಿ ಬಂದು ಕುಳಿತುಕೊಂಡನು. ಅಲಂಕಾರಮಾಡತಕ್ಕವರು ಕೈಗಳನ್ನು ತೊಳದು ಕೊಂಡು ಅನೇಕ ಸುವಾಸನಾ ಸಾಮಗ್ರಿಗಳಿಂದ ಆತನ ಕೇಶಪಾಶವನ್ನು ಶೋಧನೆವಾಡಿ, ಗಂಧ, ಪೂಷ್ಟಾದಿಗಳಿಂದ ಅವನಿಗೆ ಅಲಂಕಾರಮಾಡಿದರು. ಪುಷ್ಪಮಾಲಿಕೆಯನ್ನು ಕೂದಲಿನಲ್ಲಿ ಸೇರಿಸಿಕಟ್ಟಿ, ಅದಕ್ಕೆ ಮುತ್ತಿನಸರ ವನ್ನು ಸುತ್ತಿ- ಆತನ ಮಸ್ತಕವನ್ನು ದೇದೀಪ್ಯಮಾನವಾದ ಪದ್ಮರಾಗ -