ಪುಟ:ರಘುಕುಲ ಚರಿತಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ರಘುಕುಲಜರಿತಕ. ೧೨೧ ಕುವ ಆ ಅಯೋಧ್ಯಾಪುರವನ್ನು ಐರಾವತದಂತಿರುವ ಆನೆಯಮೇಲೆ ಕುಳಿತು ಸಂಚರಿಸುತ್ತಾ ಸರ್ಗದಂತೆ ಮಾಡಿದನು, ದೊರೆಯ ತಲೆಯಮೇಲೆ ಛತ್ರವನ್ನೂ ಎತ್ತಿ ಹಿಡಿಯಲು ಆಕ್ಷೇತಚ್ಛತ್ರದನೆಳಲು, ಸಕಲಜಗತ್ತಿಗೂ ಉಂಟಾಗಿದ್ದ ಕುಶರಾಜನ ವಿಯೋಗದುಃಖದ ಸಂತಾಪವನ್ನು ಪರಿಹರಿಸು ವಂತಿತ್ತು, ಪ್ರಜೆಗಳೆಲ್ಲರೂ ನವೀನರಾಜನ ಏಳಿಗೆಯನ್ನು ನೋಡಿ ಪೂರ್ವರಾಜನ ವಿಯೋಗದುಃಖವನ್ನು ಮೆರೆತರು, ಬೆಂಕಿಯು ಹೊಗೆ ಯಾಡಿದ ಮೇಲೆ ಉರಿಹುಟ್ಟುವುದು, ಸೂರನು ಉದಯಿಸಿದಮೇಲೆ ಕಿರಣಗಳು ಹೊರಡುವವು. ತೇಜಸ್ಸುಗಳ ಉತ್ಪತಿಯು ಈರೀತಿಯಾಗಿ ಲೋಕಪ್ರಸಿದ್ಧವಾಗಿದೆ. ಆಂತ ತೇಜಸ್ಸಿನ ವೃತ್ತಿಯಸ್ಸಭಾವವನ್ನೂ ಅತಿಕ್ರಮಿಸಿ ಆತಿಥಿಯು - ಗುಣಗಳೊಡನೆಯೇ ಹುಟ್ಟಿದನು. ಇದು ಅಪೂರ್ವವಾದದ್ದು, ಪರನಾರಿಯರು ಪ್ರೀತಿಸೂಚಕವಾದ ಪ್ರಸ ಇದೃಷ್ಟಿಯಿಂದ ನೋಡುತ್ತಿರಲು, ಶರತ್ಕಾಲದಲ್ಲಿ ಥಳಥಳಿಸುತ್ತಿ ರುವ ನಕ್ಷತ್ರಗಳಿಂದ ರಾತ್ರಿಗಳ ಧ್ರುವಮಂಡಲವನ್ನು ಕೊಂಡುವಂತಿತ್ತು. ಪ್ರಶಸ್ತವಾದ ದೇವಾಲಯಗಳಲ್ಲಿ ಪೂಜೆಯನ್ನು ಹೊಂದುತ್ತಿರುವ ಅಯೋ ಧ್ಯಾಪುರದ ದೇವತೆಗಳೆಲ್ಲವೂ, ತನ್ನ ಅನುಗ್ರಹಕ್ಕೆ ಪಾತ್ರನಾದ ಅತಿ ಧಿಗೆ ಆಯಾಪ್ರತಿಮೆಗಳಲ್ಲಿ ನೆಲಸಿರುವ ತಮ್ಮ ಸಾನಿಧ್ಯಬಲದಿಂದ ಅನು ಗ್ರಹಮಾಡಿದವು, ಅತಿಥಿಗೆ ಪಟ್ಟಾಭಿಪೈಕಮಾಡಿದ ಜಲದಿಂದ ನೆನದಿರುವ ಭವವೇದಿಕೆಯು ಒಣಗುವದರೊಳಗಾಗಿ ಅವನ ಅಶಕ್ಯವಾದ ಪ್ರತಾಪವು ದಿಗಂತಗಳನ್ನು ವ್ಯಾಪಿಸಿತು. ಗುರುನಾದ ವಶಿಷ್ಠ ಮರ್ಹಯ ಮಂತ್ರಾ ಲೋಚನೆಗಳ, ಮಹಾ ಪರಾಕ ಮಿಯಾದ ಅತಿಥಿಯ ಬಾಣಗಳ ಈ ಎರಡಸೇರಲು ಲೋಕದಲ್ಲಿ ಅಸಾಧ್ಯವಾದ ಕಾರವುಂಟೇ ? ಎಲ್ಲವೂ ಸಾಧ್ಯವೇ ಆಗುತ್ತಿತ್ತು, ಪಕ್ಷಾತವಿಲ್ಲದೆ ಸರತ್ರ ಸಮಬುದ್ಧಿಯುಳ್ಳ ಸಾಮಾಜಿಕರನ್ನು ತನ್ನ ಸಭೆಯಲ್ಲಿ ನೇಮಿಸಿಕೊಂಡಿರುವ ಆ ಅತ್ಯಧಿಯು, ಕಕ್ಷಿ ಪ್ರತಿಕಕ್ಷಿಗಳ ಸಾಲತರುವುದು ಕೊಡುವುದು ಮೊದಲಾದವುಗಳಲ್ಲಿ ಅನುಮಾನಾಸ್ಪದವಾದ ವಿವಾದಗಳನ್ನು ತಾನೇ ವಿಚಾರಿಸಿ ತೀರಾನಮಾಡು ತಿದ್ದನು. ವ್ಯವಹಾರಗಳನ್ನು ವಿಚಾರಿಸಿದ ತರುವಾಯ ಪ್ರಸನ್ನ ವಾದ ಮುಖದಿಂದಲೇ ಭ್ರಸ್ಥರಿಗೆ ತಮ್ಮ ಯಜಮಾನಸಿಂದ ಇಷ್ಟಾರ್ಥ ಸಿದ್ಧಿಯುಂ