ಪುಟ:ರಘುಕುಲ ಚರಿತಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ಶಾ ರ ದಾ , ಟಾಗುವುದೆಂಬ ಭಾವನೆಯನ್ನು ಸೂಚಿಸಲು, ಕೂಡಲೆ ಅವರು ಯಾಚಿಸಿ ತಮ್ಮ ತಮ್ಮ ಕೋರಿಕೆಗಳನ್ನು ನೆರವೇರಿಸಿಕೊಳ್ಳುತ್ತಿದ್ದರು. ಪ್ರಜೆಗಳು - ಶ್ರಾವಣಮಾಸದಿಂದ ನದಿಗಳು ಹೆಚ್ಚುವಂತೆ ತಮ್ಮ ರಾಜನಿಂದ ಪೋಷಣೆಯನ್ನು ಹೊಂದಿ ಅಭಿವೃದ್ಧಿಯನ್ನು ಪಡೆಯಲು, ಆ ನದಿಗಳ ಭಾದ್ರಪದಮಾಸದಲ್ಲಿ ಹೆಚ್ಚಾದ ಅಭಿವೃದ್ಧಿಯನ್ನುಂಟುಮಾಡು ವಂತೆ ಅತಿಥಿಯ ಏಳಿಗೆಯಲ್ಲಿ ಪ್ರಜೆಗಳೆಲ್ಲರೂ ಬದ್ದಾದರರಾಗಿದ್ದರೂ, ತಾನು ಆಡಿದಮಾತನ್ನು ಎಂದಿಗೂ ತಪ್ಪುತ್ತಿರಲಿಲ್ಲ. ಕೆಟ್ಟ ಪದಾರ್ಥವನ್ನು ಪುನಃ ಅಪಹರಿಸುತ್ತಿರಲಿಲ್ಲ. ಇಂತಹ ದೃಢವತವಾದ ಅತಿಥಿಯು ಶತು) ರಾಜರನ್ನು ನಿರೂಲಮಾಡುವೆನೆಂದು ಹೇಳಿ ಅವರನ್ನು ಜಯಿಸಿದ ತನ್ನ ವಾಯು ಪುನಃ ಅವರರಾಜ್ಯವನ್ನು ಕಿತ್ತುಕೊಳ್ಳದೆ ಕರುಣೆಯಿಂದ ಅವರಿಗೆ ಕೊಡುತ್ತಿದ್ದದ್ದರಿಂದ, ಈ ವಿಷಯದಲ್ಲಿ ಮಾತ್ರವೇ ಆಡಿದ ಮಾತನ್ನು ತಪ್ಪಿ ಹೋಗಿ ವ್ರತಭಂಗವನ್ನು ಪಡೆಯುತ್ತಿದ್ದನು. ವಯಸ್ಸು, ರೂಪ, ಐಶ್ನ, ಇವುಗಳಲ್ಲಿ ಒಂದೊಂದೂ ಗರಕ್ಕೆ ಕಾರಣವೆಂದು ಬಲ್ಲವರು ಹೇಳುವರು, ಈ ಮೂರೂ ಒಟ್ಟಿಗೆ ಈ ರಾಜನಲ್ಲಿದ್ದರೂ, ಅವನ ಮನಸ್ಸಿನಲ್ಲಿ ಗರವು ಹುಟ್ಟಲಿಲ್ಲ. ಆದಕಾರಣ ಅತಿಧಿಯು ಮಹಾ ಜಿತೇಂದ್ರಿಯನೆಂಬುದಕ್ಕೆ ಯಾವ ಸಂದೇಹವೂಇಲ್ಲ. ಈ ಪ್ರಕಾರವಾಗಿ ಪ್ರಜೆಗಳ ಅನುರಾಗವು ದೊರೆಯಲ್ಲಿ ದಿನೇದಿನೇ ಬಳೆಯುತ್ತಾ ಬರಲು, ಅತಿಧಿಯುಹೊಸದಾಗಿ ರಾಜ ನಾದವನಾದರೂಚೆನ್ನಾಗಿಬೇರುಗಳನ್ನು ಊರಿಕೊಂಡಿರುವ ಮಹಾ ವೃಕ್ಷ ದಂತೆ ಎಲ್ಲರಿಗೂ ಅಸಾಧ್ಯನಾಗಿದ್ದನು. ಶತ್ರುರಾಜರು ಬಹು ದೂರದಲ್ಲಿ ರತಕ್ಕವರು, ಮತ್ತು ಸರದಾ ದ್ವೇಷಿಗಳಾಗಿರದೆಯ ಇರುವರು. ಆದ ಕಾರಣ ಈ ಬಾಹ್ಯ ಶತ್ರುಗಳನ್ನು ಬಿಟ್ಟು ಸರೂದಾ ಶತ್ರುತ್ವವನ್ನು ಸಾಧಿ ಸುತ್ತಾ ತನ್ನಲ್ಲಿಯೆ ಆವರಿಸಿಕೊಂಡಿರುವ ಅಂತಶ್ಚತುಗಳಾದ ಕಾವು ಕೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರುಮಂದಿಗಳನ್ನು ಮೊದಲು ಜಯಿಸಿದನು. ಇಂತಹ ಅಂತಶ್ಚತುಗಳನ್ನೇ ಜಯಿಸಿರುವಾಗ ಬಾಹ್ಯ ಶತ್ರುಗಳ ಜಯವು ಕಿಂಚಿತ್ತರವಲ್ಲವೇ! ಲಕ್ಷ್ಮಿಯು ಸ್ವಭಾವದಿಂದ ಚಂಚಲಳಾದರೂ ಆಕೆಯ ಅನುಗ್ರಹವನ್ನೇ ಎದುರುನೋಡುತ್ತಾ ಕೃಸೆಗೆ ಪಾತ್ರನಾದ ಆ ಅತಿಧಿಯಲ್ಲಿ, ಒರೆಗಲ್ಲಿನಲ್ಲಿಟ್ಟ ಸುವರ್ಣರೇಖೆಯಂತೆ ಸ್ಥಿರ