ಪುಟ:ರಘುಕುಲ ಚರಿತಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಶ್ರೀ ಶಾ ರ ದಾ , ಬತ್ತದಕಾಳು ಬಲಿತು ಫಲವನ್ನು ಕೊಡುವಂತೆ ಗುಟ್ಟಾಗಿ ಫಲಕಾರಿಗಳಾ ಗುತ್ತಿದ್ದವು, ಸಮುದ್ರದಲ್ಲಿ ನೀರು ಎಷ್ಮೆ ಹೆಚ್ಚಿದರೂ ನದೀಮುಖಗಳ ಮಾರ್ಗವಾಗಿಯೇ ಹೊರಕ್ಕೆ ಬರುವುದಲ್ಲದೆ ಬೇರೆ ಮಾರ್ಗದಿಂದ ಹೇಗೆ ನುಗ್ಗುವುದಿಲ್ಲವೋ ಹಾಗೆ ಅತಿಧಿಯು ಎಷ್ಟು ಅಭಿವೃದ್ಧಿಯನ್ನು ಪಡೆದರೂ ಸನ್ಮಾರ್ಗ ಪ್ರವರ್ತಕನಾಗಿದ್ದನೇ ಹೊರತು ದುರಾರ್ಗದಲ್ಲಿ ಪ್ರವರ್ತಿಸು ತಿರಲಿಲ್ಲ, ಪ್ರಜೆಗಳು ಲೋಕವ್ಯವಹಾರಗಳಲ್ಲಿ ಅಭಿರುಚಿಯಿಲ್ಲದೆ ವೈರಾ ಗ್ಯವನ್ನು ಹೊಂದಿದರೂ ಆ ವೈರಾಗ್ಯವನ್ನು ತತ್‌ಕ್ಷಣದಲ್ಲಿಯೇ ಹೊಗೆ ಲಾಡಿಸುವ ಸಾಮರ್ತ್ಥವುಳ್ಳವನಾದರೂ, ರಾಜ್ಯದ ಏಳಿಗೆಗೆ ಕುಂದನ್ನು ಟುಮಾಡತಕ್ಕ ಆ ವೈರಾಗ್ಯವು ಪ್ರಜೆಗಳಲ್ಲಿ ತಲೆಹಾಕುವುದಕ್ಕೂ ಅವಕಾಶ ವಿಲ್ಲದಂತೆಮಾಡಿ ಎಲ್ಲರನ್ನೂ ಕುತೂಹಲವುಳ್ಳವರಾಗುವಹಾಗೆಮಾಡಿ ಪ್ರೊ ತ್ಸಾಹಪಡಿಸುತ್ತಿದ್ದನು, ಎಲ್ಲವನ್ನೂ ಸುಡುವ ಸಾಮರ್ಥ್ಯವುಳ್ಳ ಕಾಕ್ಸ್ ಚ್ಚು ತನಗೆ ವಾಯುವಿನ ಸಹಾಯವಿದ್ದರೂ ನೀರನ್ನೂ ಹೇಗೆ ಸುಡುವು ದಕ್ಕೆ ಅಪೇಕ್ಷಿಸುವುದಿಲ್ಲವೋ ಹಾಗೆ ಈ ಅತಿಥಿಯು ಬಲಿಷ್ಠನಾದರೂ ತನಗಿಂತ ಹೀನಬಲದಲ್ಲಿ ದಂಡಯಾತ್ರೆ ಮಾಡುತ್ತಿದ್ದನೇ ಹೊರತು, ತನಗಿಂತ ಶಕ್ತಿವಂತರಮೇಲೆ ಯುದ್ಧಕ್ಕೆ ಹೋಗುತ್ತಿರಲಿಲ್ಲ, ಧಾರ್ಥಕಾಮಗಳೆಂಬ ಮೂರು ಪುರುಷಾರ್ಥಗಳಲ್ಲಿಯೂ, ಸಮಾನವಾದ ಪ್ರವೃತ್ತಿಯುಳ್ಳವನಾಗಿ 'ನಾದ ಕಾರಣ ಅರ್ಥಕಾಮಗಳಿಂದ ಧರಕ್ಕೂ, ಧರದಿಂದ ಅರ್ಥಕಾಮ ಗಳಿಗೂ, ಕಾಮದಿಂದ ಅರ್ಥಕ್ಕೂ, ಅರ್ಥದಿಂದ ಕಾಮಕ್ಕ ಬಾಧೆ ಯುಂಟಾಗದಂತೆ ಇತ್ತು, ಮಿತ್ರರು ಹೀನಸ್ಥಿತಿಯಲ್ಲಿದ್ದರೆ ತನಗೆ ಅವ .ರಿಂದ ಯಾವ ಸಹಾಯವೂ ದೊರೆಯಲಾರದು, ಉನ್ನತ ಸ್ಥಿತಿಯಲ್ಲಿ ದ್ದರೆ ತನ್ನೊಡನೆ ವಿರೋಧವನ್ನು ಬೆಳೆಯಿಸಿ ಅಪಕಾರಮಾಡುತ್ತಾರೆ. ಆದಕಾರಣ ಈ ಮರ್ಮವನ್ನು ಬಲ್ಲ ಆ ಅತಿಧಿಯುವದ್ಧಮುಸ್ಲಿಯಲ್ಲಿರತಕ್ಕೆ ವರನ್ನೇ ತನಗೆ ಮಿತ್ರರನ್ನಾಗಿಮಾಡಿಕೊಳ್ಳುತ್ತಿದ್ದನು, ಶಕ್ತಿ, ದೇಶ, ಕಾಲ ಮೊದಲಾದವುಗಳಿಂದ ತನಗೂ ಶತ್ರುವಿಗೂ ಇರುವ ಬಲಾಬಲಗಳನ್ನು ನಿಲ್ಲಿ ಯಿಸಿ,ಶ ತ್ರುವಿಗಿಂತ ತಾನು ಬಲಿಷ್ಠನಾಗಿ ತೋರಿದರೆ ದಂಡಯಾತ್ರೆ ಮಾಡು ತಿದ್ದನು. ಇಲ್ಲದಿದ್ದರೆ ಸುಮ್ಮನಾಗುತ್ತಿದ್ದನು. ತನ್ನನ್ನು ಎಲ್ಲರೂ ಆಶ್ರ ಯಿಸಿಕೊಂಡಿರಬೇಕೆಂಬ ಭಾವನೆಯಿಂದ ಭಂಡಾರವನ್ನು ಹೆಚ್ಚಿಸುತ್ತಿದ್ದ - { ದಿ