ಪುಟ:ರಘುಕುಲ ಚರಿತಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨& ಶ್ರೀ ಶಶಿ ರ ದ . ರಿಂದ ಮಂತ್ರಿ ಮೊದಲಾದ ಹದಿನೆಂಟುಮಂದಿ ಅಧಿಕಾರಿಗಳವರೆಗೂ ಆನೀತಿಗೆ ತಡೆಯಿಲ್ಲದೆ ಫಲವನ್ನು ಹೊಂದುತ್ತಿದ್ದನು. ಆ ಅತಿಥಿಯು ಕಪಟಿಯುದ್ಧ ವನ್ನು ಬಲ್ಲವನಾದರೂ ನ್ಯಾಯಮಾರ್ಗದಿಂದ ಯುದ್ಧ ಮಾಡುತ್ತಿದ್ದನು. ಜಯಲಕ್ಷ್ಮಿಯು ವೀರನನ್ನೇ ಸೇರುವ ಸ್ಮಭಾವವಳವಳಾದುದರಿಂದ ಅಭಿ ಸರಿಕೆಯಾಗಿ ಇವನನ್ನು ಹುಡುಕಿಕೊಂಡು ಬಂದು ಸೇರುತ್ತಿದ್ದಳು. ಶತ್ರು ಗಳೆಲ್ಲರೂ ಇವನ ಪ್ರತಾಪದಿಂದಲೇ ಭಗ್ನರಾಗಿ ಹೋಗುತ್ತಿದ್ದುದರಿಂದ, ಮತ್ತಗಜದ ಮುದಗಂಧದಿಂದಲೇ ಭಗ್ನಗಳಾಗಿರುವ ಶತ್ರುಗಜಗಳೊಡನೆ ಮದಗಜಕ್ಕೆ ಯುದ್ಧ ಪ್ರಸಕ್ತಿಯೇ ಇಲ್ಲದಿರುವಂತೆ ಅತಿಧಿಗೆ ಶತ್ರುಗಳೊ ಡನೆ ಯುದ್ಧವು ಲಭಿಸುವುದೇ ಅಥ್ರವಾಗಿದ್ದಿತು. ಚಂದ್ರನೂ, ಸಮು ದ್ರನೂ ಅಭಿವೃದ್ಧಿಯನ್ನು ಹೊಂದಿದಕೂಡಲೆ ಕ್ಷೀಣತೆಯನ್ನು ಪಡೆವರು, ಈ ಅತಿಥಿಯು ಹಾಗೆಯೇ ಅಭಿವೃದ್ಧಿಯನ್ನು ಪಡೆದರೂ ಅವರಂತೆ ಕ್ಷೀಣ ನಾಗದೆ ಅಭಿವೃದ್ಧನಾಗಿಯೇ ಇರುತ್ತಿದ್ದನು. ಒಹಳ ದರಿದ್ರರಾಗಿರುವ ಯಾಚಕರು ಅತಿಥಿಯ ಬಳಿಗೆ ಹೋಗಿ, ಸಮುದ್ರದ ಬಳಿಗೆ ಬಂದ ಮೇಘ Tಳಂತೆ ಅವನ ಸಂಪೂ‌ದಾತೃಭಾವಕ್ಕೆ ಪಾತ್ರರಾಗುತ್ತಿದ್ದರು,ಸೋತ್ರಾ ರ್ಹವಾದ ಕಾರೈಗಳನ್ನೇ ಮಾಡುತ್ತಿರುವನಾದುದರಿಂದ ಅನೇಕರು ಹೊಗ ಳುತ್ತಿದ್ದರು, ಅದರಿಂದ ಲಜ್ಞೆ ಪಟ್ಟು ಸ್ತುತಿಮಾಡುವರನ್ನು ಅವನು ದ್ವೇಷಿ ಸುತ್ತಿದ್ದರೂ, ಆತನ ಕೀರ್ತಿಯು ಮತ್ತಷ್ಟು ಹೆಚ್ಚುತ್ತಿತ್ತು, ಪ್ರಜೆಗಳಿಗೆ ದರ್ಶನಮಾತ್ರದಿಂದ ಪಾತಕಗಳನ್ನು ಪರಿಹರಿಸುತ್ತಲ, ನಿಶ್ಚಯವಾದ ವಸ್ತು ಸ್ಥಾನವನ್ನುಂಟುಮಾಡೋಣದರಿಂದ ಅಂಧಕಾರ ಸದೃಶವಾದ ಅಜ್ಞಾನ ವನ್ನು ನಾಶಮಾಡುತ್ತಲೂ, ಇರುವುದರಿಂದ ಅವರಿಗೆ ಸ್ವತಂತ್ರವನ್ನು ಕಲ್ಪಿಸಿದನು. ಚಂದ್ರನ ಗುಣಗಳು ಕಮಲ'ಗಳಲ್ಲಿಯೂ, ಸೂರನ ಗುಣ ಗಳು ನೈದಿಲೆಗಳಲ್ಲಿಯೂ, ಪ್ರವೇಶಿಸಿ ಹಿತವನ್ನುಂಟುಮಾಡಲಾರವು, ಅತಿ ಧಿಯ ಗುಣಗಳು ಮಿತ್ರರಲ್ಲಿಯ, ಶತ್ರುಗಳಲ್ಲಿಯೂ ಹೃದಯಂಗಮವಾ ಗುತ್ತಿದ್ದವು, ಅಶ್ವಮೇಧಕ್ಕಾಗಿ ದಿಗ್ವಿಜಯವನ್ನಪೇಶಿಸಿ ಮಾಡಿದ ಇವನ ಪ್ರಯತ್ನಗಳು ಪ್ರಾಯಶಃ ಪರರನ್ನು ವಂಚಿಸುವುದಕ್ಕಾಗಿಯೇ ಆಗಿದ್ದರೂ ಅದು ಅವರ ಪ್ರವರನೆಯಾಗಲಿಲ್ಲ, ಹೀಗೆ ಶಾಸೊಕ್ಕವಾದ ಮಾರ್ಗ ದಿಂದ, ಪ್ರತಾಪದೊಡನೆ ಪ್ರಯತ್ನಿಸುತ್ತಿರುವ ಅತಿಥಿ ಯು, ಇಂದ್ರನು (ಣಿ