ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ರಘುಕುಲಚಂತಃ. ೧೨೩ - ದಿ ದೇವತೆಗಳಿಗೆ ದೇವನಾಗಿರುವಂತೆ, ಗಾಜರಿಗೆ ರಾಜನಾಗಿದ್ದನು. ಈ ಅತಿ ಧಿಯಲ್ಲಿ ಲೋಕಪಾಲಕರಲ್ಲಿರುವ ಲೋಕರಕ್ಷಣ ಶಕ್ತಿಯೂ, ಪಂಚಭೂ ತಗಳಲ್ಲಿರುವ ಪರೋಪಕಾರ ಶಕ್ತಿಯ, ಕುಲಪರೂತಳಲ್ಲಿರುವ ಭೂಭಾರ ಧಾರಣಶಕ್ತಿಯ, ಇದ್ದುದರಿಂದ ಇವನನ್ನು ಐದನೆಯಲೋಕಪಾಲಕನೆ ತಲೂ, ಆರನೆದು ಭತವೆಂತಲೂ, ಎಂಟನೆಯ ಕುಲಪರತವೆಂತಲೂ ಹೇಳುವರು, ಅತಿಧಿಯು ಬರೆದು ಕಳುಹಿಸಿದ ಶಾಸನಪತ್ರಿಕೆಯನ್ನು ರಾಜರೆಲ್ಲರೂ, ಇಂದ್ರನ ಆಜ್ಞೆಯನ್ನು ದೇವತೆಗಳು ಹೇಗೋ ಹಾಗೆ, ತಮ್ಮ ಛತ್ರಗಳನ್ನು ದೂರವಾಗಿಟ್ಟು ಶಿರಸಾವಹಿಸುತ್ತಿದ್ದರು. ಧನದ, ಎಂದರೆ ಧನವನ್ನು ಕೊಡುವವನು ಎಂಬ ಹೆಸರು ಕುಬೇರನಿಗೂ ತನಗೂ ಸಮಾನವಾಗಿರುವಂತೆ, ಅಶ್ವಮೇಧ ಯಾಗದಲ್ಲಿ ಋತ್ವಿಕ್ಕುಗಳಿಗೆ ದಾನ ದಕ್ಷಿಣೆಗಳನ್ನು ಕೊಟ್ಟನು. ಇಂದ್ರನು ಅತಿಥಿಯ ರಾಷ್ಟದಲ್ಲಿ ಸರಿಯಾಗಿ ಮಳೆಗರೆಸುತ್ತಿದ್ದನು, ಯವನು ಪ್ರಜೆಗಳಿಗೆ ರೋಗಾದಪದ್ರವಗಳ ನ್ನುಂಟುಮಾಡುತ್ತಿರಲಿಲ್ಲ, ವರುಣನು ನಾವಿಕರ ಸಂಚಾರಕ್ಕೆ ಅನುಕೂಲ ವಾಗಿ ಜಲಮಾರ್ಗಗಳನ್ನು ಸರಿಮಾಡಿಕೊಂಡಿರುವನು, ಕುಬೇರನು ಈ ಅತಿಧಿರು ಪೂರ, ರಾಜರಾದ ರಾಮಾದಿಗಳನ್ನು ಸ್ಮರಿಸಿಕೊಂಡು ಇವನ ಕೋಶವೃದ್ಧಿಯನ್ನುಂಟುಮಾಡುತ್ತಿದ್ದನು, ಈ ಪ್ರಕಾರವಾಗಿ ಲೋಕಪಾ ಲಕರೂ ಕೂಡ ಇವನಲ್ಲಿ ಶರಣಾಗತರಂತೆ ನಡೆದು ಕೊಳ್ಳುತ್ತಿದ್ದರೆಂಬಲ್ಲಿಗೆ ಹದಿನೇಳನೆದು ಸದ್ಧವು ಮುಗಿದುದು. •