ಪುಟ:ರಘುಕುಲ ಚರಿತಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಶ್ರೀ ಶಾ ರ ದಾ , ಅನ್ಯತ್ರ ಹೊಗುವಾಗ ವಂಚಿತರಾದ ಸ್ತ್ರೀಯರು ಚಿಗುರಿನಂತೆ ಮೃದು ವಾಗಿ ಹೊಳೆಯುತ್ತಿರುವ ಬೆರಲನ್ನು ಅಲ್ಲಾಡಿಸುತ್ತಾ ಇರಲಿ ಇರಲ್ಲಿ ಎಂದು ಸಾಧನೆವಾಡುತ್ತಾ ತರ್ಜಿಸುವುದು, ಹುಬ್ಬುಗಂಟಿಕ್ಕಿ ವಕ್ರದೃಷ್ಟಿ , ಯಿಂದ ನೋಡುವುದು, ಬಾರಿಬಾರಿಗೂ ಕಾಂಚಿಯನ್ನು ನಡುವಿನಲ್ಲಿ ಬಿಗಿಯುವುದು ಮೊದಲಾದವುಗಳನ.೧ಲಕ ಅವನನ್ನು ದಂಡಿಸುತ್ತಿದ್ದರು. ಅಗ್ನಿವಣ್ಣನು ಸರದಿಯಪ್ರಕಾರವಾಗಿ ಕಾಮಿನಿಯರ ಮನೆಗಳಿಗೆ ರಾತ್ರಿ ಯಲ್ಲಿ ದೂತಿಯರ ಹಿಂದೆಹೋಗುತ್ತಾ, ಅವರು ತನ್ನ ವಿಷಯದಲ್ಲಿ ಆತುರ ದಿಂದ ಹೇಳಿಕೊಳ್ಳುತ್ತಿರುವ ವಿಪ್ರಲಂಭವಚನಗಳನ್ನು ಕೇಳುತ್ತಿದ್ದನು. ಪಟ್ಟದರಸಿಯರ ಸಂಗದಲ್ಲಿಯೇ ಇರಬೇಕಾದ ಸಂದರ್ಭದಲ್ಲಿ, ಅವ ಗ್ಟನು ದುರ್ಲಭರಾಗಿರುವ ವೇಶ್ಯಾಂಗನೆಯರ ಭಾವಚಿತ್ರವನ್ನು ಬರೆ ಯುತ್ತಾ ಇರುವಾಗ ಕೈ ಬೆವರಿನಿಂದ ಬಣ್ಣವನ್ನು ಬರೆವಕಡ್ಡಿಯು ಜಾರಿ ಬೀಳುತ್ತಿತ್ತು. ಸಪತ್ನಿಯರು ತಮ್ಮಲ್ಲಿ ೩ಯನ ಅನುರಾಗವು ಹೆಚ್ಚಾ. ಗಿರುವುದೆಂದ, ಗರಿಸುತ್ತಾ ಮತ್ಸರವುಳ್ಳವರಾಗಲು, ಮನ್ಮಥವಿಕಾರವು ಹೆಚ್ಚಾಗಿರಲು, ತಮ್ಮ ದೋಷವನ್ನು ಬಿಟ್ಟು ಮದನಮಹೋತ್ಸವವೆಂಬ ವ್ಯಾಸದಿಂದ ಅಗ್ನಿವಣ್ಣನನ್ನು ನಿಲ್ಲಿಸಿಕೊಂಡು ತನ್ನ ಮನೋರಥಗಳನ್ನು ಪೂರಯಿಸಿಕೊಳ್ಳುತ್ತಿದ್ದರು. ಈತನು ಪ್ರಾತಃ ಕಾಲದಲ್ಲಿ ಪ್ರೇಯಸಿಯರು ಬಳಿಗೆಬರಲು ಅವರು ಈತನರೀತಿಯನ್ನು ನೋಡಿ ಸಂಭೋಗಚಿಹ್ನೆಗಳನ್ನು ಕಂಡು ಕೋಪಗೊಳ್ಳಲು ಅವರನ್ನು ಪ್ರಾಂಜಲಿಯಾಗಿ ಪ್ರಸನ್ನೆಯರನ್ನಾಗಿ ಮಾಡಿಕೊಳ್ಳಲು, ಅವರು ಈತನಲ್ಲಿರುವ ಪ್ರಣಯಾತಿಶಯದಿಂದಲೇ ತಮ್ಮ ಕೋಪವನ್ನು ಬಿಟ್ಟು, ತಾವು ಕೋಪಗೊಂಡದ್ದಕ್ಕಾಗಿ ಪರಿತಾಪ ಪಡು ವ ತಿ ದ ರು.

  • ದಿ

ಅಗ್ನಿ ವರ್ಣನು ಸ್ಪಷ್ಟ ದಲ್ಲಿ ತಮ್ಮ ಸವತಿಯರನ್ನು ಕನವರಿಸಿಕೊ ಳ್ಳಲು ಆ ವಿಷಯವನ್ನು ಅವನ ಸಂಗಡ ತಿಳಿಸದೆ ಮಗ್ಗು ಲಹಾಸಿಗೆಯಲ್ಲಿ ಸುರಿಸುತ್ತಿರುವ ಕಣ್ಣೀರಿನಿಂದಲೂ, ಕೋಧಾವೇಶದಿಂದ ಒಡೆದು ಹೋಗುತ್ತಿರುವ ಕೈ ಬಳೆಗಳಿಂದಲೂ, ಕೂಡಿದವರಾಗಿ ಬೇರೆ ಮಗ್ಗಲಿಗೆ ತಿರುಗಿಕೊಳ್ಳೋಣವರಿಂದಲೇ ಪ್ರತೀಕಾರವನ್ನು ಮಾಡುತ್ತಿದ್ದರು. ದೂತಿ ಯರು ತೋರಿಸುತ್ತಿರುವ ಮಾರ್ಗದಲ್ಲಿ ಹೊರಟು, ಸಿದ್ಧ ಪಡಿಸಿರುವ ಪುಷ್ಪ