ಪುಟ:ರಘುಕುಲ ಚರಿತಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ರಘುಕುಲತುತಂ. ೧೪೧ Cಎ ಕ ಕೊರಲಲ್ಲಿ ಜೋಲುತ್ತಿರುವ ಅರ್ಜಿನಮತ ಗಿರಿ ಮಲ್ಲಿಕಾ ಪುಷ್ಪಗಳಮಾಲಿ ಕೆಯುಳ್ಳವನಾಗಿಯೂ, ಕದಂಬ ಕುಸುಮಗಳ ಪರಾಗದ ಅಂಗ ರಾಗವು ಳ್ಳವನಾಗಿಯೂ ಇರುವ ಆ ಅಗ್ರಿ ವರ್ಣನಿಗೆ, ವರ್ಷಾಕಾಲದಲ್ಲಿ ಕೃತಕಾ ಚಲಗಳನೆಲೆ, ಮುತ್ತನಯರಗಳೊಡನೆವಿಹಾರವು ಸಂಭ್ರಮದಿಂದ ನಡೆಯುತ್ತಿದ್ದಿತು. ಆ ವರ್ಷಾಕಾಲದಲ್ಲಿ ಅಗ್ನಿವರನು ಪ್ರಣಯ ಕಲಹ ದಿಂದ ತನ್ನಲ್ಲಿ ವಿಮುಖೆಯರಾದ ಸಖಿಯರನ್ನು ಸಮಾಧಾನ ಗೊಳಿಸುವುದಕ್ಕೆ ಆತುರಪಡುತ್ತಿರಲಿಲ್ಲ. ಗುಡುಗಿನ ಶಬ್ದಕ್ಕೆ ಹೆದರಿ ತನ್ನ ಭುಜನದ್ಧದಲ್ಲಿ ಅವಿತು ಕೊಳ್ಳುವುದಕ್ಕಾಗಿ ತಾವಾಗಿ ಅಭಿಮುಖಿಯರಾಗಿ ಬರುವುದನ್ನೂ ಅಪೇಕ್ಷಿಸುತ್ತಿದ್ದನು. ಅಗ್ನಿವಣ್ಣನು ಹಿಮುಬಾಧೆಯನ್ನು ಕಡಿಮೆಮಾಡುವು ದಕ್ಕಾಗಿ ಮೇಲ್ಕಟ್ಟುಗಳನ್ನು ಕಟ್ಟಿ ಅಲಂಕರಿಸಿರುವ ಉಪ್ಪರಿಗೆಗಳಲ್ಲಿ ಸುಂ ದರಿಯರಾದ ಸ್ತ್ರೀಯರೊಡನೆ ಕಾರ್ತಿಕಮಾಸದ ರಾತ್ರಿಗಳಲ್ಲಿ ಕ್ರೀಡಿಸು ತಿದ್ದು, ಮೇಘಾವೃತ ವಾಗದಿರುವುದರಿಂದ ಸ್ವಚ್ಛವಾಗಿರುವ ಬೆಂಗಳ ನಲ್ಲಿ ಸುರತಶ್ರಮೆಯನ್ನು ಪರಿಹಾರಮಾಡಿಕೊಳ್ಳುತ್ತಿದ್ದನು, ಆ ಉಪ್ಪ ರಿಗೆಯುಗವಾಕ್ಷಗಳಲ್ಲಿ ನೋಡುತ್ತಿರಲು, ಮೇಖಲೆಯಂತೆ ರನ್ನವಾಗಿರುವ ಹಂಸಪಕ್ಷಿಗಳಿಂದ ಕೂಡಿದ ಸರಯನದಿಯ ಪುಳಿನ ಪ್ರದೇಶಗಳು ಪ್ರಿಯೆ ಯರ ನಿತಂಬಗಳಂತೆ ರನ್ನವಾಗಿ ಕಾಣಬರುತ್ತಿರಲು ಆ ಪ್ರಿಯೆಯರ ವಿಲಾಸಸೂಚಕಗಳಾದ ಆ ಪುಳಿನ ಪ್ರದೇಶಗಳನ್ನು ಬಹುಸಂಭ್ರಮದಿಂದ ನೋಡುಗ್ಗನು, ಕಾಮಿನಿಯರು ಹಿಮದ ರೈತವನ್ನು ಹೋಗಲಾಡಿಸು ವುದಕ್ಕಾಗಿ ಅಗುರು ಧೂಪದಿಂದ ಕಾಸಿರುವುದರಿಂದ ಗರಿಮುರಿಯಾಗಿರುವ ನೀರೆಯನ್ನುಟ್ಟುಕೊಳ್ಳುವಾಗ, ಸಗ್ಗ ಕಾಂಚಿದಾಮಗಳನ್ನು ತೆಗೆದಿಟ್ಟು ನೀವಿಯನ್ನು ಬಂಧಿಸುವುದು, ಸಡಲಿಸುವುದು, ಇವುಗಳಲ್ಲಿ ಆದರಾತಿಶಯ ವುಳ್ಳ ಅಗ್ನಿವಣ್ಣನನ್ನು, ಆವಸ್ತ್ರದ ಶಬ್ದದಿಂದ ಒಂದೆಡೆ ಆ ಕರ್ಮಿಸುತ್ತಿದ್ದರು. ಗರ್ಭಾಗಾರಗಳಲ್ಲಿ ವಾಯುಸಂಚಾರವಿಲ್ಲದುದರಿಂದ ನಿಶ್ಚಲವಾಗಿ ನಿಂತಿರುವ ದೀಪಗಳೆಂಬ ದೃಷ್ಟಿಗಳುಳ್ಳವುಗಳಾಗಿಯ, ನಾನಾವಿಧ ಸುರತಕ್ರಿಯಾ ಭೇದಗಳಿಗೆ ಅವಕಾಶವುಳ್ಳವುಗಳಾಗಿಯೂ, ಇರುವ ಹೇಮುಂತಋತುವಿನ ರಾತ್ರಿಗಳು ಆ ಅಗ್ನಿವಣ್ಣನಿಗೆ ಸಾಕ್ಷಿಗಳಾಗಿದ್ದವು, ಅಂಗನೆಯರು ದಕ್ಷಿಣ ಮಾರುತ ಸಂಚಾರದಿಂದ ವಿಕಸಿತವಾಗಿರುವ ಚೂತವುಂಜರಿಯನ್ನು ನೋಡಿ ಆ ಅಗ್ನಿವಣ್ಣನ ದುಸ್ಸಹವಿಯೋಗವನ್ನು ಸಹಿಸಲಾರದೆ ತಾವಾಗಿ ಪ್ರಣಯ