ಪುಟ:ರಘುಕುಲ ಚರಿತಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , [೯ w wwwxrwx xxx ಬರುತಲಿದ್ದು ವು. ಭಮರಗಳ ಶ್ರುತಿ ಮಧುರವಾದ ಧ್ವನಿಗಳೆಂಬ ಮಂಗ ಳಗೀತಗಳು – ಕೋಮಲಗಳಾದ ಕುಸುಮಗಳೆಂಬ ಹಲ್ಲುಗಳಿಂದೊಡ ಗೂಡಿರುವ ಹುಸಿನಗೆಯನ್ನೊಳಗೊಂಡು, ಉಪವನಲತೆಗಳೆಂಬ ನರಕಿ ಯದು - ಗಾಳಿಯಿಂದ ಅಲುಗುತ, ಒಂದರೊಡನೊಂದು ತಗಲುವ ತಳಿರು ಗಳಿಂದ, ಕರತಾಳ ಲಯಗಳನ್ನನುಸರಿಸಿದ ಹಾಡುಗಳನ್ನು ಹೇಳುತಲಿರ ವಂತೆ ಕೇಳಬರುತ್ತಿದ್ದುವು. ಮನೆಗಳೊಳಗಣ ಕೊಳಗಳು - ಅಂದ ವಾಗಿ ಅರಳಿರುವ ತಾವರೆಗಳನ್ನೊಳಗೊಂಡು,ನೀರಿನಮೇಲೆ ದನಿಗೆಯತ ತೇಲಾಡುತಲಿರುವ ನೀರುಹಕ್ಕಿಗಳಿಂದ ರಮಣೀಯಗಳಾಗಿ ಕಾಣಬರು ತಿದ್ದುವು. ಆಜ್ಞವೇ ಮೊದಲಾದವುಗಳ ಆಹುತಿಗಳಿಂದ ಪಜಲಿಸುವ ಅಗ್ನಿಯಂತೆ ಕಾಂತಿಯನ್ನೊಳಗೊಂಡ ಕರ್ಣಿಕಾರ ಕುಸುಮಗಳು - ವನಲಕ್ಷ್ಮಿಗೆ ಶೃಂಗರಿಸಿದ ಸುವರ್ಣಾಭರಣದಂತೆ ಸಂಶೋಭಿಸುತಲಿ ದ್ವು ವು, ತಳಿರುಗಳಿಂದ ಸಹಿತವಾದ ಹೂಗಳನ್ನು ತಂತಮ್ಮ ಪ್ರಿಯರು ತಂದುಕೊಡಲು, ಸುಮಂಗಲಿಯರವನ್ನು ತಲೆಗಳಲ್ಲಿ ಅಂದವಾಗಿ ಮುಡಿ ಯುತಲಿದ್ದರು. ಮಕರಂದದಾಸೆಯಿಂದ ಬಂದೆರಗುವ ದುಂಬಿಗಳಿಂದೆ ಡಗೂಡಿದ ಶ್ರೀಕುಸುಮಗಳು - ವನಲಕ್ಷ್ಮಿಯರ ಹಣೆಗಳೊಳಗಿಟ್ಟ ತಿಲಕಗಳ ಸೊಬಗನ್ನು ಉಂಟುಮಾಡುತಲಿದ್ದುವು, ಗಂದುಡಿಯಿಂದ ತುಂಬಿ, ದುಂಬಿಗಳನ್ನೊಳಗೊಂಡಿರುವ ತಿಲಕತರುವಿನ ಹೂಗೊಂಚಲು - ವನಲಕ್ಷ್ಮಿಯ ಬೈತಲೆಯ ಪಕ್ಕದ ಮುಂದಲೆಗೆ ಸಿಂಗರಿಸಿರುವ ಜಾಲರ ವೆಂಬ ಒಡವೆಯ ಬೆಡಗನ್ನಾ೦ತಿದ್ದಿ ತು, ತೋಟದಲ್ಲಿ ಹಾರಾಡುವ ದುಂಬಿಗಳ ಹಿಂಡು – ಬಿಲ್ಲಾಳಾದ ಕಾಮನೆಂಬ ಅರಸಿಗೆ ಎತ್ತಿ ಹಿಡಿದ ದಾಳಿನ ಬೆಡಗನ್ನೂ, ವನಲಕುಮಿಯ ಹಣೆಗಿಡುವ ಕತ್ತುರಿಯ ಹುಡಿಯ ತಿಲಕದ ಪರಿಯನ್ನೂ, ಗಾಳಿಯಿಂದ ಅಲುಗುತಲಿರುವ ಗಿಡಗಳ ಹೂಗ ಳೊಳಗಣ ಪರಿಮಳದ ಪುಡಿಯ ಬಗೆಯನ್ನೂ ತಳೆಯುತಲಿದ್ದು ವು. ಹೆಂಗಳು - ಉಪವನಗಳೊಳಗೆ ಅಲ್ಲಲ್ಲಿ ವಸಂತೋತ್ಸವಗಳನ್ನು ಅನುಭ ವಿಸಿ, ಉಯ್ಯಾಲೆಯ ಮಣೆಗಳಮೇಲೆ ಕುಳಿತು, ಸುಖವಾಗಿ ತೂಗಿಕೊ ೪ುತಲಿದ್ದರು. ಮಧು, ಮಧುಮಧನ, ಮನ್ಮಥರಿಗೆಣೆಯೆನಿಸಿದ ದಶರಥ ಭೂನಾಥನೂ - ತನ್ನ ಅರಸತಿಯರೊಡನೆ ಉದ್ಯಾನವನದಲ್ಲಿ, ವಸಂತ