ಪುಟ:ರಘುಕುಲ ಚರಿತಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ) ರಘುಕುಲ ಚರಿತಂ , ಮಹೋತ್ಸವಗಳನ್ನು ಸುಖವಾಗಿ ಅನುಭವಿಸಿ, ಬಳಿಕ ಮೃಗಯಾವಿಹಾ ರವನ್ನು ಬಯಸಿದನು. ಆದರೆ - ಬೇಟೆಯೆಂಬುದು ಏಳು ಬಗೆಯಾಗಿರುವ ವ್ಯಸನಗಳೂ ಳಗೆ ಒಂದೆನಿಸಿರುವುದರಿಂದ ಅದನ್ನು ದುಪ್ಪವೆಂದೇ ಹೇಳಬೇಕು, ಆದರೂ ಅದರಲ್ಲಿ ಗುಣವಿದೆ_ಈ ಮೃಗಯಾವಿನೋದವು - ಅಲುಗುತ ಲಿರುವ ಗುರಿಯನ್ನು ಸರಿನೋಡಿ ಹೊಡೆದು ಕೆಡಹುವ ಗಟ್ಟಿಗತನದ ಪರಿಚಯವನ್ನು ಮಾಡಿಕೊಡುತ್ತದೆ. ಮೃಗಗಳು ಭಯದಿಂದೊಡಗೂಡಿ ರುವಾಗಲೂ, ರೋಷದಿಂದಿರುವಾಗಲೂ ಅವ್ರಗಳ ಇಂಗಿತವು ತಿಳಿದು ಬರುವುದು, ಶರೀರಕ್ಕೆ ಬಳಲಿಕೆಯನ್ನು ಸಹಿಸುವ ಅಭ್ಯಾಸದಿಂದ ಲವಲವಿಕೆಯನ್ನೂ ಉಂಟುಮಾಡುವುದು, ಈ ಕಾರಣದಿಂದಲೇ ಮಂತ್ರಿಗಳು - ಅದೆಲ್ಲವೂ ಕಾಳಗಕ್ಕೆ ಉಪಯೋಗವೆಂದು, ದೊರೆಯ ಕೋರಿಕೆಯನ್ನು ಒಪ್ಪಿದರು. ಹಾಗೆ ಅವರ ಸಮ್ಮತಿಯನ್ನು ಪಡೆದು ದಶರಥನು ಹೊರಟನು. ಮಿಕಗಳ ಕಾಡನ್ನು ಕುರಿತು ಹೊರಡುವ ಸಡಗರದಲ್ಲಿ, ಆಖೇಟಕ್ಕೆ ತಕ್ಕ ವೇಷವನ್ನು ತಾಳು, ಕುದುರೆಯಮೇಲೆ ಕುಳಿತು, ಹೆಗಲಮೇಲೆ ಬಿಲ್ಲನ್ನಿಟ್ಟನು. ಅಶಖುರದಿಂದೆದ್ದ ಧೂಳಿಯೆಂಬ ತೆರೆಯಿಂದ ಆಗಸದಲ್ಲಿ ರವಿಯ ಬಿರುವನ್ನು ಮುಚ್ಚಿದನು. ಕಾಡು ಹೂಗಳ ಸರದಿಂದ ತಲೆಗೂದಲನ್ನು ಏರಗಟ್ಟಿದನು. ಗಿಡದೆಲೆಯಂತೆ ಹಸಿರು ಬಣ್ಣದ ಕವಚವನ್ನು ತೊಟ್ಟನು, ಕುದುರೆಯ ನಡಗೆಯಿಂದ ಕಿವಿಯ ಕಡಕುಗಳು ಅಲುಗುತಲಿದ್ದು ವು, ಹುಲ್ಲೆ ಮೊದಲಾದ ಜಂತು ಗಳಿಂದ ತುಂಬಿದ ಕಾಡುದಾರಿಯಲ್ಲಿ ಧರಾನಾಥನು ಕಂಗೊಳಿಸುತ ಲಿದ್ದನು. ಆಗ - ವನದೇವತೆಗಳು - ಕಾಡುಬಳ್ಳಿಗಳೊಳಗೆ ತಮ್ಮ ದೇಹಗ ಳನ್ನು ಅಡಗಿಸಿ, ದುಂಬಿಗಳೊಳಗೆ ನೋಟದ ಶಕ್ತಿಯನ್ನಿಟ್ಟು, ರಾಜ ನೀತಿಯಿಂದ ನಾಡಿನ ಜನರನ್ನು ಸಂತಸಗೊಳಿಸುತ, ಪ್ರಸನ್ನನೂ, ಮಾವ ನನೂ ಆಗಿರುವ ನರನಾಥನನ್ನು ನೋಡುತಲಿದ್ದ ರು. ದೊರೆಯು - ತಾನು ಹೊರಡುವುದಕ್ಕಿಂತ ಮೊದಲೇ, ಕಾಡನ್ನು ಬೇಟೆನಾಯಿಗಳವರು,ಬಲೆಗಾರರು,ಕಾಡ್ಡಿ ಕ್ಲು,ಕಳ್ಳಕಾಕರೂ ಇಲ್ಲದಂತೆ